ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಗೂ ಮುನ್ನವೇ ಚುನಾವಣಾ ದಿನಾಂಕ ಪ್ರಕಟಿಸಿದ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌‌ ಮಾಲ್ವಿಯಾ: ವಿವಾದಕ್ಕೆ ಕಾರಣವಾಯ್ತು ಟ್ವೀಟ್

ನವದೆಹಲಿ:ಮಾ-27: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಇದರ ಮಧ್ಯೆ ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಹೆಡ್ ಚುನಾವಣಾ ಆಯೋಗ ದಿನಾಂಕ ಬಹಿರಂಗಗೊಳ್ಳುವುದಕ್ಕೂ ಮೊದಲೇ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.

ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥರಾಗಿರುವ ಅಮಿತ್‌‌ ಮಾಲ್ವಿಯಾ ತಮ್ಮ ಟ್ವೀಟರ್‌ನಲ್ಲಿ ಮತದಾನದ ದಿನಾಂಕ ಮೇ 12 ಹಾಗೂ ಫಲಿತಾಂಶದ ದಿನಾಂಕ ಮೇ 18ಎಂದು ಬರೆದು ಟ್ವೀಟ್‌ ಮಾಡಿದ್ದಾರೆ. ಆದರೆ ಇವರು ಟ್ವೀಟ್‌ ಮಾಡಿದ್ದ ವೇಳೆ ಚುನಾವಣಾ ಆಯೋಗದಿಂದ ಇನ್ನು ಚುನಾವಣೆ ದಿನಾಂಕ ಘೋಷಣೆಯಾಗಿರಲಿಲ್ಲ. ಚುನಾವಣಾ ಆಯೋಗದಿಂದ ಮತದಾನ ದಿನಾಂಕ ಮೇ 12 ಹಾಗೂ ಫಲಿತಾಂಶದ ದಿನಾಂಕ ಮೇ 18ರ ಬದಲು 15 ಎಂದು ಘೋಷಣೆಯಾಗುತ್ತಿದ್ದಂತೆ ಟ್ವೀಟ್‌ ಡಿಲೀಟ್‌ ಮಾಡಿದ್ದಾರೆ.

ಇನ್ನು ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಲ್ವಿಯಾ ನಾನು ಮಾಧ್ಯಮದಲ್ಲಿನ ವರದಿ ನೋಡಿ ಟ್ವೀಟ್‌‌ ಮಾಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಇದನ್ನ ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

BJP’s Amit Malviya,tweet,Karnataka poll dates before announcement

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ