ತ್ರಿಪುರಾದಲ್ಲಿ ಬಜೆಪಿ ಸರ್ಕಾರ

ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟಿರುವ ಬಿಜೆಪಿ ಈಗ ತ್ರಿಪುರಾದಲ್ಲಿ ಎಡಪಕ್ಷವನ್ನು ಸೋಲಿಸಿ ಸರ್ಕಾರದ ರಚಿಸುವ ಸಮೀಪ ಬಂದಿದೆ.

2013ರ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲದ ಬಿಜೆಪಿ 59 ಕ್ಷೇತ್ರಗಳ ಪೈಕಿ 39 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸಿಪಿಎಂ 20 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್ ಯಾವೊಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿಲ್ಲ

ವಿಶೇಷ ಏನೆಂದರೆ 2013ರ ಚುನಾವಣೆಯಲ್ಲಿ ಒಟ್ಟು 60 ಸ್ಥಾನಗಳಲ್ಲಿ ಸಿಪಿಎಂ 49, ಕಾಂಗ್ರೆಸ್ 10, ಸಿಪಿಐ 1 ಸ್ಥಾನವನ್ನು ಗೆದ್ದುಕೊಂಡಿತ್ತು.

1977ರಿಂದ ಆರಂಭಗೊಂಡು 2013ರವರೆಗಿನ ಚುನಾವಣೆಯಲ್ಲಿ ಎಡಪಕ್ಷಗಳೇ ಇಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಆದರೆ ಇದೇ ಮೊದಲ ಬಾರಿಗೆ ಬಿಜೆಪಿ ಅತಿ ಹೆಚ್ಚು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ