ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರ ನಿರ್ದೇಶಕ ಬಂಧನ

ನವದೆಹಲಿ:ಆ-೩: ಜಿಎಸ್​ಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕುರಿತ ’ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ನಿರ್ದೇಶಕ ವಿಜಯ್​ ರತ್ನಾಕರ್​ ಗುತ್ತೆಯವರನ್ನು ಬಂಧಿಸಲಾಗಿದೆ.

ಮುಂಬೈನ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ ವಿಜಯ್​ ಗುತ್ತೆಯನ್ನು ಬಂಧಿಸಿದ್ದು, ಕೋರ್ಟ್ ಗುತ್ತೆಗೆ ಆಗಸ್ಟ್​ 14ರ ವರೆಗೆ ನ್ಯಾಯಾಂಗ ಬಂಧನ ನೀಡಿ ಆದೇಶಿಸಿದೆ.

ವಿಜಯ್​ ಗುತ್ತೆಗೆ ಸೇರಿದ ವಿಆರ್​ಜಿ ಡಿಜಿಟಲ್​ ಕಾರ್ಪ್​ ಪ್ರೈ. ಲಿ. ಕಂಪನಿ ನಕಲಿ ಇನ್ವಾಯ್ಸ್​ಗಳ ಮೂಲಕ ಸುಮಾರು 34 ಕೋಟಿ ರೂ. ಜಿಎಸ್​ಟಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಜಯ್​ ಗುತ್ತೆ ವಿರುದ್ಧ ಸಿಜಿಎಸ್​ಟಿ ಕಾಯ್ದೆ (CGST Act) ಸೆಕ್ಷನ್​ 132(1)(ಸಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ವಿಜಯ್​ ಗುತ್ತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ದಿ ಆಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೊದಲು ವಿಜಯ್​ ಗುತ್ತೆ ಎಮೋಷನಲ್​ ಅತ್ಯಾಚಾರ್​, ಟೈಂ ಬಾರಾ ವೈತ್​ ಮತ್ತು ಬದ್ಮಾಶಿಯಾನ್​ ಎಂಬ ಚಿತ್ರಗಳನ್ನು ನಿರ್ಮಿಸಿದ್ದರು.

Vijay Ratnakar Gutte,Director,’The Accidental Prime Minister’,Arrested

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ