ವಿಜಯಪುರ:ಫೆ-25: ವಿಜಯಪುರದಲ್ಲಿ ಆರಂಭವಾಗಿರುವ ಕೋಟಿ ವೃಕ್ಷ ಅಭಿಯಾನದ ಭಾಗವಾಗಿ ‘ಜಲ, ವೃಕ್ಷ, ಶಿಕ್ಷಣ’ಕ್ಕಾಗಿ ಓಟ ಎಂಬ ವಿಷಯದಡಿ ‘ವೃಕ್ಷಥಾನ್ 2018’ ಮ್ಯಾರಥಾನ್ ಗೆ ಚಾಲನೆ ದೊರೆತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವೃಕ್ಷಥಾನ್ ಮ್ಯಾರಥಾನ್ ನಲ್ಲಿ ಫ್ಲ್ಯಾಗ್ ಹಾರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ವೃಕ್ಷಥಾನ್ನ ರಾಯಭಾರಿಯಾದ ಕನ್ನಡ ಚಲನಚಿತ್ರ ರಂಗದ ರಾಕಿಂಗ್ ಸ್ಟಾರ್ ಯಶ್, ಜಲಸಂಪನ್ಮೂಲ ಸಚಿವ ಡಾ. ಎಂ. ಬಿ. ಪಾಟೀಲ್ ಚಾಲನೆ ನೀಡಿದರು. ಸಾವಿರಾರು ಜನರು ಪಾಲ್ಗೊಳ್ಳುವ ಮೂಲಕ ಪರಿಸರ ಸಂರಕ್ಷಣೆಯ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ.
ವಿಜಯಪುರದ ಐತಿಹಾಸಿಕ ಗೋಳಗುಮ್ಮಟದಿಂದ ಈ ಮ್ಯಾರಥಾನ್ ಆರಂಭವಾಗಿದ್ದು 21 ಕಿ.ಮೀ.ವರೆಗೆ ಓಟ ನಡೆಯಲಿದೆ. ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳ ಹಾಗೂ ಕೀನ್ಯಾದ ಏಳು ಜನ ಅಥ್ಲಿಟ್ಗಳು ಭಾಗಿಯಾಗಿದ್ದಾರೆ.
Vijayapura,Rahul Gandhi,Flag off the Vrukshathon 2018 half marathon