ಕೋಲ್ಕೋತಾ: ಬಿಜೆಪಿ ನಾಯಕ ಕೈಲಾಶ್ ವಿಜಯವಾರ್ಗಿಯ ಅವರಿಗೆ ಝಡ್ ಕೆಟಗರಿ ಭದ್ರತೆ ಒದಗಿಸಲಾಗಿದ್ದು, ಬುಲೆಟ್ ನಿರೋಧಕ ಕಾರು ನೀಡಲಾಗಿದೆ.
ಕಳೆದ ಗುರುವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೈಲಾಶ್ ಅವರ ಬೆಂಬಲಿಗರ ಮೇಲೆ ಪಶ್ಚಿಮಬಂಗಾಳದಲ್ಲಿ ದಾಳಿ ನಡೆದಿತ್ತು. ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಇಬ್ಬರು ನಾಯಕರು ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಡೈಮಂಡ್ ಹಾರ್ಬರ್ನತ್ತ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಘಟನೆ ಕುರಿತ ವಿಡಿಯೋವನ್ನು ಕೈಲಾಶ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ನಾನು ಈ ದಾಳಿಯಲ್ಲಿ ಗಾಯಗೊಂಡಿದ್ದೇನೆ. ಪಕ್ಷದ ಅಧ್ಯಕ್ಷರ ಕಾರಿನ ಮೇಲೂ ದಾಳಿ ನಡೆಸಲಾಗಿದೆ. ದುಷ್ಕøತ್ಯವನ್ನು ಬಲವಾಗಿ ಖಂಡಿಸುತ್ತೇವೆ. ಪೊಲೀಸರ ಎದುರಲ್ಲೇ ಗೂಂಡಾಗಳು ನಮ್ಮ ಮೇಲೆ ದಾಳಿ ನಡೆಸಿದರು. ನಾವು ನಮ್ಮ ದೇಶದಲ್ಲಿ ಇಲ್ಲ ಎಂಬ ಭಾವನೆ ಉಂಟಾಯಿತು ಎಂದು ಕೈಲಾಶ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.