ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕ ದುರ್ಘಟನೆ-ಘಟನೆಯಲ್ಲಿ ಮೃತಪಟ್ಟ ವಿಮಾನ ಸಂಸ್ಥೆಯ ತಂತ್ರಜ್ಞಾನ

ಕೋಲ್ಕತಾ, ಜು.10– ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ ಆಕಸ್ಮಿಕ ದುರ್ಘಟನೆಯಲ್ಲಿ ಸ್ಪೈಸ್‍ಜೆಟ್ ವಿಮಾನ ಸಂಸ್ಥೆಯ ತಂತ್ರಜ್ಞನೊಬ್ಬ ಮೃತಪಟ್ಟಿದ್ದಾನೆ.

ಸ್ಪೈಸ್‍ಜೆಟ್ ಸಂಸ್ಥೆಯ ವಾಯುಯಾನ ಕ್ಷಮತೆ ಬಗ್ಗೆ ಅನುಮಾನಗಳು ಮೂಡಿರುವಾಗಲೇ ಸಂಭವಿಸಿದ ಈ ಘಟನೆಯಿಂದ ಪ್ರಯಾಣಿಕರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಕೋಲ್ಕತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್‍ಜೆಟ್ ವಿಮಾನವೊಂದರ ಲ್ಯಾಂಡಿಂಗ್ ಗೇರ್ ಡೋರ್ ಬಳಿ ತಂತ್ರಜ್ಞನೊಬ್ಬ ಕಾರ್ಯನಿರ್ವಹಿಸುತ್ತಿದ್ದ. ಇಂದು 1.45ರ ನಸುಕಿನಲ್ಲಿ ಬಾಗಿಲು ಹಠಾತ್ತನೇ ಆಕಸ್ಮಿಕವಾಗಿ ಮುಚ್ಚಿಕೊಂಡಿತು. ಈ ದುರ್ಘಷನೆಯಲ್ಲಿ ಆತ ಮೃತಪಟ್ಟ.

ಬಂಬರ್‍ಡೀಯರ್ ಕ್ಯೂ400 ವಿಮಾನದ ಲ್ಯಾಡಿಂಗ್ ಗೇರ್ ನಿರ್ವಹಣಾ ಕಾರ್ಯದಲ್ಲಿ ಈ ತಂತ್ರಜ್ಞ ನಿರತನಾಗಿದ್ದ ವೇಲೆ ಬಾಗಿಲು ದಿಢೀರನೆ ಮುಚ್ಚಿಕೊಂಡು ಅದರ ಮಧ್ಯೆ ಸಿಲುಕಿ ಟೆಕ್ನಿಷಿಯನ್ ಸಾವಿಗೀಡಾದ ಎಂದು ಕೋಲ್ಕತಾ ಏರ್‍ಪೊರ್ಟ್‍ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಪೈಸ್‍ಜೆಟ್ ವಿಮಾನವು ಆಗಾಗ ತಾಂತ್ರಿಕ ಸಮಸ್ಯೆಗಳಿಂದ ತುರ್ತು ಭೂಸ್ಪರ್ಶದಂಥ ಪ್ರಕರಣಗಳು ಹೆಚ್ಚಾಗಿರುವಾಗಲೇ ಈ ದುರ್ಘಟನೆ ಸಂಭವಿಸಿರುವುದು ಪ್ರಯಾಣಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ