ಬಾಂಗ್ಲಾಗೆ ಕಳ್ಳಸಾಗಣೆಯಾಗಲಿದ್ದ ಡ್ರಗ್ಸ್ ಮುಟ್ಟುಗೋಲು, ಓರ್ವ ಸೆರೆ

ಕೋಲ್ಕತ್ತಾ: ಭಾರತ -ಬಾಂಗ್ಲಾ ಗಡಿಯಲ್ಲಿ ಕೂಛ್‍ಬಿಹಾರ್‍ನ ಎರಡು ಕಡೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಗಡಿ ಭದ್ರತಾ ಪಡೆ ಸೈನಿಕರು, ಭಾರತದಿಂದ ಬಾಂಗ್ಲಾಗೆ ಕಳ್ಳಸಾಗಣೆಯಾಗಲಿದ್ದ 12ಕೆಜಿ ಗಾಂಜಾ ಮತ್ತು ನಶೆ ಬರಿಸುವ 860 ಯಾಬಾ ಮಾತ್ರೆಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಈ ಸಂಬಂಧ ಪ.ಬಂಗಾಳದ ಕೂಛ್‍ಬಿಹಾರಿ ನಿವಾಸಿ ನಜೀರ್ ಹುಸೇನ್(29) ಎಂಬಾತನನ್ನು ಬಂಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಸಾಹೇಬ್‍ಗಂಜ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ, ಕೂಛ್‍ಬಿಹಾರ್‍ನ ದಿಗಲ್ತರಿ ಗ್ರಾಮದಲ್ಲಿ ಶಂಕಾಸ್ಪದವಾಗಿ ಸಂಚರಿಸುತ್ತಿದ್ದ ಬೈಕ್‍ನ್ನು ತಡೆದು ನಿಲ್ಲಿಸಿದ ಬಿಎಸ್‍ಎಫ್ ಯೋಧರು, ವಾಹನವನ್ನು ಪರಿಶೀಲಿಸಿದಾಗ ಅಮಲು ಬರಿಸುವ 860ಯಾಬಾ ಮಾತ್ರೆಗಳನ್ನು ಒಳಗೊಂಡ ಪ್ಯಾಕೆಟೊಂದು ಪತ್ತೆಯಾಯಿತು. ನಾದಿರ್‍ಹಟ್ ಮಾರುಕಟ್ಟೆಯಿಂದ ದಿಗಲ್ತರಿ ಮಾರುಕಟ್ಟೆಗೆ ಸಾಗುತ್ತಿದ್ದ ಬೈಕ್‍ನಲ್ಲಿದ್ದ ಈ ಮಾತ್ರೆಗಳ ಸರಕು ಭಾರತದಿಂದ ಬಾಂಗ್ಲಾಗೆ ಕಳ್ಳಸಾಗಣೆಯಾಗಲಿದ್ದವು.
ಕೂಛ್‍ಬಿಹಾರ್‍ನ ಪೂರ್ವ ಸಿತಾಯಿ ಗ್ರಾಮದಲ್ಲಿನ ವಿಶೇಷ ಕಾರ್ಯಾಚರಣೆಯಲ್ಲಿ 12ಕೆಜಿ ಗಾಂಜಾವನ್ನು ಬಿಎಸ್‍ಎಫ್ ಮುಟ್ಟುಗೋಲು ಹಾಕಿದೆ.
ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ರಾಷ್ಟ್ರ ವಿರೋ ಶಕ್ತಿಗಳ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗಡಿಯಾಚೆಗಿನ ಅಪರಾಧ, ಅಕ್ರಮ ನುಸುಳುವಿಕೆಯನ್ನು ತಡೆಗಟ್ಟಲು ತನ್ಮೂಲಕ ಇಂತಹ ಅಪರಾಧಗಳಿಗೆ ಅಂಕಿತ ಹಾಕಲು ಬಿಎಸ್‍ಎಫ್ ಸನ್ನದ್ಧ ಸ್ಥಿತಿಯಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ