ಅಯೋಧ್ಯೆ: ಶಿಲಾನ್ಯಾಸ ಕುರಿತು ಪ್ರಖ್ಯಾತ ವಾಸ್ತುಶಿಲ್ಪಿಗಳ ಉಪಸಮಿತಿ ರಚನೆ

ಅಯೋಧ್ಯೆ(ಉ.ಪ್ರ.): ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣದ ಶಿಲಾನ್ಯಾಸ ವಿನ್ಯಾಸ ಕುರಿತು ಶಿ-ರಸು, ಸಲಹೆಗಳನ್ನು ನೀಡುವಂತೆ ಪ್ರಖ್ಯಾತ ವಾಸ್ತುಶಿಲ್ಪಿಗಳನ್ನು ಒಳಗೊಂಡ ಉಪಸಮಿತಿಯನ್ನು ಶ್ರೀ ರಾಮ ಜನ್ಮಭೂಮಿ ಮಂದಿರ ಕಟ್ಟಡ ನಿರ್ಮಾಣ ಸಮಿತಿ ರಚಿಸಿದೆ. ಈ ವಿಷಯವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ತಿಳಿಸಿದೆ.
ನೃಪೇಂದ್ರ ಮಿಶ್ರಾ ನೇತೃತ್ವದ ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಸಮಿತಿಯು ಮಂದಿರ, ದೇಗುಲ ಕ್ಷೇತ್ರದಲ್ಲಿ ಪರಿಣತರಾಗಿರುವ ವಾಸ್ತುಶಿಲ್ಪಿಗಳನ್ನು ಒಳಗೊಂಡ ಉಪಸಮಿತಿ ರಚಿಸಿದೆ. ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ ಶಿಲಾನ್ಯಾಸದ ವಿನ್ಯಾಸ ಕುರಿತು ಸಲಹೆ ಮತ್ತು ಶಿ-ರಸುಗಳನ್ನು ಸಮಿತಿ ನೀಡಲಿದೆ. ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಟ್ವೀಟ್ ಮಾಡಿದೆ.
ಅತ್ಯುನ್ನತ ಗುಣಮಟ್ಟ, ನಾನಾ ಭೂಸಂಬಂ„ತ ತಾಂತ್ರಿಕ ಸಮಸ್ಯೆಗಳನ್ನು ನಿವಾರಣೆ ಒಳಗೊಂಡ ಸಲಹೆಗಳು, ಸುದೀರ್ಘ ಅವ„ಯ ಬಾಳಿಕೆಯ ಉದ್ದೇಶದಲ್ಲಿ ಮಂದಿರ ನಿರ್ಮಿಸಲಾಗುತ್ತಿದೆ. ನಿರ್ಮಾಣದ ಕುರಿತು ಎಲ್ಲ ಸಲಹೆ ಮತ್ತು ಪ್ರಸ್ತಾವನೆಗಳ ಅಧ್ಯಯನ ಕೈಗೊಂಡು ಸಮಿತಿಯು ವಿಸ್ತಾರವಾದ ಯೋಜನೆ ಸಿದ್ಧಪಡಿಸಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ