ಹೊಸದಿಲ್ಲಿ : ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರಾಭಿವೃದ್ಧಿಗಾಗಿ ಕಂಡ ಕನಸುಗಳನ್ನು ನನಸಾಗಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅಂಬೇಡ್ಕರ್ ಮಹಾಪರಿನಿರ್ವಾಣ್ ದಿನದ ಅಂಗವಾಗಿ ಅವರನ್ನು ಸ್ಮರಿಸಿ, ಪ್ರಧಾನಿ ಟ್ವೀಟ್ ಮಾಡಿದ್ದು, ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಆಲೋಚನೆಗಳು ಲಕ್ಷಾಂತರ ಜನರಿಗೆ ಸದಾ ಸೂರ್ತಿಯಾಗಿ ಶಕ್ತಿ ತುಂಬುತ್ತಲೇ ಇರುತ್ತವೆ. ದೇಶದ ಹಿತಾಸಕ್ತಿಗಾಗಿ ಅವರು ನೀಡಿದ ಕೊಡುಗೆ ಅನನ್ಯ.
ಅವರ ಕನಸುಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂಬ ವಾಗ್ದಾನವನ್ನು ಮಹಾ ಪರಿನಿರ್ವಾಣದ ಈ ದಿನದಂದು ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.