ಭಾರತೀಯ ವಾಯುಪಡೆಗೆ ಏಪ್ರಿಲ್‍ನಲ್ಲಿ 16 ರಾಫೆಲ್ ಬಲ

ಹೊಸದಿಲ್ಲಿ : ಭಾರತೀಯ ವಾಯುಪಡೆಗೆ 2021ರ ಏಪ್ರಿಲ್‍ನಲ್ಲಿ ರಾಫೆಲ್ ಮಹಾಬಲ ದೊರೆಯಲಿದ್ದು ಏಕ ಕಾಲದಲ್ಲಿ ವಿವಿಧ ಯದ್ಧ ಚಟುವಟಿಕೆ ನಿಭಾಯಿಸುವ 16 ರಾಫೆಲ್ ಯುದ್ಧವಿಮಾನಗಳು ಐಎಎಫ್‍ನ ಗೋಲ್ಡನ್ ಆ್ಯರೋ ವಿಭಾಗಕ್ಕೆ ಸೇರ್ಪಡೆಗೊಳ್ಳಲಿವೆ.
ಈಗಾಗಲೇ ಅಂಬಾಲಾ ವಾಯುನೆಲೆಗೆ ಜುಲೈ 29 ರಂದು 5 ರಾಫೆಲ್‍ಗಳು ಬಂದಿಳಿದಿದ್ದು, ಈಗಾಗಲೇ ತರಬೇತಿ ಕಾರ್ಯಾಚರಣೆಯಲ್ಲೂ ಬಳಕೆಯಾಗುತ್ತಿವೆ.
ನವೆಂಬರ್ 5ರಂದು ಇನ್ನೂ ಮೂರು ರಾಫೆಲ್, 3 ಜನವರಿಯಲ್ಲಿ, 3 ಮಾರ್ಚ್‍ನಲ್ಲಿ ಹಾಗೂ 7 ಏಪ್ರಿಲ್‍ನಲ್ಲಿ ಭಾರತಕ್ಕೆ ಬರಲಿದ್ದು, ಮುಂದಿನ ವರ್ಷ ಏಪ್ರಿಲ್ ವೇಳೆಗೆ ಒಟ್ಟು 16 ರಾಫೆಲ್‍ಗಳು ವಾಯುಪಡೆ ಸೇರ್ಪಡೆಗೊಳ್ಳಲಿವೆ. ಇದರೊಂದಿಗೆ ವಾಯುಪಡೆ ಸೇರ್ಪಡೆಗೊಂಡ ರಾಫೆಲ್ ಯುದ್ಧ ವಿಮಾನಗಳ ಸಂಖ್ಯೆ 21ಕ್ಕೆ ಏರಿಕೆಯಾಗಲಿದೆ ಎಂದು ಅಕಾರಿಗಳು ಹೇಳಿದ್ದಾರೆ.
ಇನ್ನು ಫ್ರಾನ್ಸ್‍ನಿಂದ ಭಾರತಕ್ಕೆ ಬಂದಿಳಿಯಲಿರುವ ಈ ರಾಫೆಲ್‍ಗಳಿಗೆ ಇಂಜಿನ್‍ಗಳನ್ನು ಫ್ರಾನ್ಸ್‍ನ ಖ್ಯಾತ ಇಂಜಿನ್ ತಯಾರಕ ಸಂಸ್ಥೆ ಸಾಫ್ರಾನ್ ತಯಾರಿಸುತ್ತಿದ್ದು, ಭಾರತದಲ್ಲೇ ಅವುಗಳ ಅಭಿವೃದ್ಧಿಗೂ ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ