ಈ ವರ್ಷದಲ್ಲಿ ಭಾರತ ಸಾಂಕ್ರಾಮಿಕ ಕೋವಿಡ್ ವಿರುದ್ಧ ಸಮರ ಸಾರಿದ್ದು, ಭಾರತದ ರಾಷ್ಟ್ರೀಯ ಗುಣವನ್ನು ಇಡೀ ಜಗತ್ತು ಗಮನಿಸುತ್ತಿದೆ. ಭಾರತದ ನೈಜಶಕ್ತಿ ಏನು ಎಂಬುದು ವಿಶ್ವದ ಅರಿವಿಗೆ ಬಂದಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಅವರು ಈಗ್ಗೆ ಸ್ವಲ್ಪ ಹೊತ್ತಿನ ಮುಂಚೆ ವರ್ಚುವಲ್ ಜಾಗತಿಕ ಹೂಡಿಕೆದಾರರ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಭೆ ಪ್ರಗತಿಯಲ್ಲಿದೆ. ಕೇಂದ್ರ ಹಣಕಾಸು ಸಚಿವಾಲಯ ಮತ್ತು ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ವೃದ್ಧಿ ಈ ಸಮಾವೇಶವನ್ನು ಆಯೋಜಿಸಿವೆ. ಇದರಲ್ಲಿ ಜಾಗತಿಕ ಸಾಂಸ್ಥಿಕ ಹೂಡಿಕೆದಾರರು, ಭಾರತೀಯ ವಾಣಿಜ್ಯ ನಾಯಕರು ಮತ್ತು ಭಾರತ ಸರ್ಕಾರದ ಉನ್ನತಮಟ್ಟದ ನಿರ್ಧಾರಗಳನ್ನು ಕೈಗೊಳ್ಳುವವರು ಹಾಗೂ ಮಾರುಕಟ್ಟೆ ನಿಯಂತ್ರಕರು ಸಮಾಲೋಚನೆಗಳನ್ನು ನಡೆಸಲಿದ್ದಾರೆ. ಕೇಂದ್ರ ಹಣಕಾಸು ಸಚಿವರು, ಆರ್ಬಿಐ ಗವರ್ನರ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದಾರೆ. ವಿಶ್ವದ 22 ಪ್ರಮುಖ ರಾಷ್ಟ್ರಗಳಾದ ಅಮೆರಿಕ, ಯೂರೋಪ್, ಕೆನಡ, ಕೊರಿಯಾ, ಜಪಾನ್, ಮಧ್ಯಪ್ರಾಚ್ಯ ದೇಶಗಳು, ಆಸ್ಟ್ರೇಲಿಯಾ, ಸಿಂಗಾಪುರ್ ಸೇರಿದಂತೆ ಇತರ ರಾಷ್ಟ್ರಗಳ ಜಾಗತಿಕ ಹೂಡಿಕೆದಾರರು ಪಾಲ್ಗೊಂಡಿದ್ದಾರೆ.
Related Articles
ಕೋವಿಡ್ ಕಾರಣಕ್ಕೆ ವಿಳಂಬ ಆಯ್ತು, ಪೌರತ್ವ ಕಾಯ್ದೆ ಶೀಘ್ರದಲ್ಲೇ ಅನುಷ್ಠಾನ: ಜೆ.ಪಿ. ನಡ್ಡಾ
October 20, 2020
Varta Mitra News - SP
ರಾಜ್ಯ, ಆರೋಗ್ಯ
Comments Off on ಕೋವಿಡ್ ಕಾರಣಕ್ಕೆ ವಿಳಂಬ ಆಯ್ತು, ಪೌರತ್ವ ಕಾಯ್ದೆ ಶೀಘ್ರದಲ್ಲೇ ಅನುಷ್ಠಾನ: ಜೆ.ಪಿ. ನಡ್ಡಾ
Seen By: 58 ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಶೀಘ್ರದಲ್ಲೇ ದೇಶಾದ್ಯಂತ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಉತ್ತರ [more]
ಮೇಕೆದಾಟುವಿಗೆ ಸಕಾರಾತ್ಮಕ ಸ್ಪಂದನೆ: ಬಿಎಸ್ವೈ ಯೋಜನೆ ಅನುಷ್ಠಾನಕ್ಕೆ ಪಿಎಂ ಮೋದಿ ಅಭಯ
July 17, 2021
Varta Mitra News - SP
ರಾಷ್ಟ್ರೀಯ
Comments Off on ಮೇಕೆದಾಟುವಿಗೆ ಸಕಾರಾತ್ಮಕ ಸ್ಪಂದನೆ: ಬಿಎಸ್ವೈ ಯೋಜನೆ ಅನುಷ್ಠಾನಕ್ಕೆ ಪಿಎಂ ಮೋದಿ ಅಭಯ
Seen By: 67 ಹೊಸದಿಲ್ಲಿ: ಮೇಕೆದಾಟು ಸೇರಿದಂತೆ ರಾಜ್ಯದ ವಿಳಂಬಿತ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಕಾರಾತ್ಮಕ ನಿಲುವು ವ್ಯಕ್ತವಾಗಿದೆ. ಶುಕ್ರವಾರ ಸಂಜೆ ಪ್ರಧಾನಿ [more]
ದೇಶಾದ್ಯಂತ 24 ಗಂಟೆಗಳಲ್ಲಿ 78,524 ಕೇಸ್ ಪತ್ತೆ
October 9, 2020
Varta Mitra News - SP
ರಾಷ್ಟ್ರೀಯ, ಪ್ರಧಾನಿ ಮೋದಿ
Comments Off on ದೇಶಾದ್ಯಂತ 24 ಗಂಟೆಗಳಲ್ಲಿ 78,524 ಕೇಸ್ ಪತ್ತೆ
Seen By: 46 ನವದೆಹಲಿ: ದೇಶದಲ್ಲಿ ಕೊರೋನಾ ಆರ್ಭಟ ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 78,524 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 68 [more]