ಮೋದಿ ಜತೆ ಸಂವಾದ: ರೈತ ಚಂದ್ರಪ್ಪ ಆಯ್ಕೆ

**EDS: VIDEO GRAB** New Delhi: Prime Minister Narendra Modi addresses the farmers of Madhya Pradesh, in New Delhi, Friday, Dec. 18, 2020. (PTI Photo)(PTI18-12-2020_000058B)

ಕೋಲಾರ: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾದ ಜಿಲ್ಲೆಯ ರೈತರೊಬ್ಬರಿಗೆ ಯೋಜನೆಯ ಅನುಷ್ಟಾನ,ಪ್ರಯೋಜನದ ಕುರಿತು ಪ್ರಧಾನಿ ಮೋದಿಯವರೊಂದಿಗೆ ನೇರವಾಗಿ ವೀಡಿಯೋ ಸಂವಾದ ನಡೆಸುವ ಸದಾವಕಾಶ ಸಿಕ್ಕಿದೆ.
ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿಯ ಜುಂಜನಹಳ್ಳಿಯ ವಿ.ಚಂದ್ರಪ್ಪ ಎಂಬುವವರೇ ಮೋದಿ ಜತೆ ನೇರವಾಗಿ ವೀಡಿಯೋ ಕಾನರೆನ್ಸ್‍ನಲ್ಲಿ ಸಂವಾದ ನಡೆಸಲಿದ್ದಾರೆ.
ಪ್ರಧಾನಿ ಕಚೇರಿಯಿಂದ ಡಿಸಿಗೆ ಮಾಹಿತಿ ರವಾನೆ
ಡಿ.25ರಂದು ಮಧ್ಯಾಹ್ನ 12ಗಂಟೆಗೆ ಬೆಂಗಳೂರಿನ ನಬಾರ್ಡ್ ಬ್ಯಾಂಕ್ ಆಡಳಿತ ಕಚೇರಿಯಲ್ಲಿ ವಿಡಿಯೋ ಕಾನರೆನ್ಸ್ ಮೂಲಕ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ರೈತರಿಗೆ ಯಾವ ರೀತಿ ಅನುಕೂಲವಾಗಲಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ರಾಜ್ಯದಿಂದ ಕೇಂದ್ರಸರ್ಕಾರವೇ ತಾಲೂಕಿನ ರೈತ ವಿ.ಚಂದ್ರಪ್ಪರನ್ನು ಆಯ್ಕೆ ಮಾಡಿದ್ದು, ಈ ಸಂಬಂಧ ಕೋಲಾರ ಜಿಲ್ಲಾಕಾರಿಗಳಿಗೆ ಹಾಗೂ ಕೃಷಿ ಇಲಾಖೆಯ ಅಕಾರಿಗಳಿಗೆ ಮಾಹಿತಿ ರವಾನೆಯಾಗಿದೆ.
ರೈತರ ವಿವರ
ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೋಬಳಿಯ ಆಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂನ ಜುಂಜನಹಳ್ಳಿ ಗ್ರಾಮದ ವೆಂಕಟೇಶಪ್ಪ ಎಂಬುವವರ ಮಗ ವಿ.ಚಂದ್ರಪ್ಪ ಎಂಬುವವರೇ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಯಾಗಿದ್ದಾರೆ.
ಚಂದ್ರಪ್ಪ ಅವರ ಅವಿಭಕ್ತ ಕುಟುಂಬಕ್ಕೆ ಪಿತ್ರಾರ್ಜಿತ ಆಸ್ತಿ ಸುಮಾರು 10 ಎಕರೆ ಜಮೀನು ಇದ್ದು, ಈ ಜಮೀನಿನಲ್ಲಿ ಟೊಮಟೊ, ಆಲೂಗಡ್ಡೆ, ಕ್ಯಾಪ್ಸಿಕಂ ಸೇರಿದಂತೆ ತೋಟಗಾರಿಕೆ ಬೆಳೆಗಳ ಜೊತೆಗೆ ಮಳೆಯಾಶ್ರಿತವಾಗಿ ರಾಗಿ ಬೆಳೆಯನ್ನು ಸಹ ಬೆಳೆಯುತ್ತಿದ್ದಾರೆ. ಪ್ರಸ್ತುತ ಎರಡು ಎಕರೆ ಟೊಮಟೊ ತೋಟದಲ್ಲಿ 15 ಕೆಜಿ ಬಾಕ್ಸ್‍ಗೆ 800 ರೂಗಳವರೆಗೂ ಬೆಲೆಸಿಕ್ಕಿದೆ. 8 ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬೆಳೆದಿದ್ದು, ಬೆಳೆಗೆ ನುಸಿರೋಗ ಆವರಿಸಿರುವುದರಿಂದ ಆಲೂಗಡ್ಡೆ ಬೆಳೆ ನಾಶವಾಗಿ ನಷ್ಟ ಅನುಭಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ