ರಾಜ್ಯದಲ್ಲಿ ದಿನೇದಿನೆ ಸೋಂಕು ನಿಯಂತ್ರಣ ನಿನ್ನೆ ಕೇವಲ 3,130 ಮಂದಿಗೆ ಕೊರೋನಾ

ಬೆಂಗಳೂರು:ದಸರಾ ಹಬ್ಬದ ನಡುವೆಯೂ ರಾಜ್ಯದಲ್ಲಿ ಕೊರೋನಾ ಸೋಂಕು ಸತತವಾಗಿ ಇಳಿಮುಖವಾಗಿದ್ದು ಸೋಮವಾರ 3,130 ಪ್ರಕರಣಗಳು ದೃಢವಾಗಿದ್ದು, 8,715 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದುವರೆಗೆ ರಾಜ್ಯದಲ್ಲಿ 8,05,947 ಮಂದಿಗೆ ಕೊರೋನಾ ಸೋಂಕು ದೃಢವಾಗಿದ್ದು, ಈ ಪೈಕಿ 75,423 ಸಕ್ರಿಯ ಪ್ರಕರಣಗಳಿವೆ. ಅಲ್ಲದೇ 942 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ 42 ಮಂದಿ ಕೊರೋನಾಗೆ ಬಲಿಯಾಗಿದ್ದು ಇದುವರೆಗೆ ಸಾವನಪ್ಪಿರುವವರ ಸಂಖ್ಯೆ 10,947ಕ್ಕೇರಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಶೇ.4.75ರಷ್ಟಿದ್ದು, ಮೃತಪಡುವವರ ಪ್ರಮಾಣ ಶೇ.1.34ರಷ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ