ಬೆಂಗಳೂರು: ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನ ಭೀತಿಯಿಂದ ಮಾಜಿ ಮೇಯರ್ ಸಂಪತ್ ರಾಜ್ ರಾತ್ರೋರಾತ್ರಿ ಆಸ್ಪತ್ರೆಯಿಂದ ಪರಾರಿಯಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಸಂಪತ್ರಾಜ್ ಕೇರಳಕ್ಕೆ ತೆರಳಿರುವ ಶಂಕೆಯಿದ್ದು, ಪೊಲೀಸರ ತಂಡವೊಂದು ಬಂಧನಕ್ಕೆ ಬಲೆ ಬೀಸಿದೆ.ಶಾಸಕ ಅಖಂಡ ಶ್ರೀನಿವಾಸ್ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಸಿದಂತೆ ಸಿಸಿಬಿ ಅಕಾರಿಗಳಿಂದ ಬಂಧನವಾಗುವ ಭೀತಿಯಿಂದ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಪತ್ ರಾಜ್ ಬುಧವಾರವೇ ಬಿಡುಗಡೆಯಾಗಿದ್ದು, ಬಳಿಕ ಪರಾರಿಯಾಗಿದ್ದಾರೆ.
ಗುರುವಾರ ರಾತ್ರಿ ಸಿಸಿಬಿ ತಂಡ ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದಾಗ ಈ ವಿಚಾರ ತಿಳಿದುಬಂದಿದೆ. ಆಸ್ಪತ್ರೆಯಿಂದ ಬಿಡುಗಡೆ ಆಗುವ ವೇಳೆ ಸಿಸಿಬಿ ಅಕಾರಿಗಳ ಗಮನಕ್ಕೆ ತರುವಂತೆ ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ನೋಟಿಸ್ ನೀಡಲಾಗಿತ್ತು. ಆದರೂ ಆದೇಶ ಮೀರಿ ನಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಕಾಕ್ಸ್ಟೌನ್ನಲ್ಲಿರುವ ಸಂಪತ್ ರಾಜ್ ಮನೆ ಕೂಡ ಬೀಗ ಹಾಕಿದ್ದು, ಅವರಿಗಾಗಿ ಸಿಸಿಬಿ ತಂಡ ಹುಡುಕಾಟ ನಡೆಸಿದೆ. ಅವರು ಕೇರಳದ ಕಡೆ ತೆರಳಿರುವ ಶಂಕೆ ಇದ್ದು, ಒಂದು ತಂಡ ಅಲ್ಲಿಗೂ ತೆರಳಿದೆ.
ಆಸ್ಪತ್ರೆಗೆ ಸಿಸಿಬಿ ನೋಟಿಸ್: ಮಾಜಿ ಮೇಯರ್ ಸಂಪತ್ ರಾಜ್ ನಾಪತ್ತೆ ಬೆನ್ನಕೊರೋನಾ ಎಂದು ಹೇಳಿ ಚಿಕಿತ್ಸೆ ಪಡೆದಿದ್ದ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಸಿಸಿಬಿ ನೋಟಿಸ್ ಜಾರಿ ಮಾಡಿದೆ.
ಬಂಧನ ಭೀತಿಯಲ್ಲಿದ್ದ ಸಂಪತ್ ರಾಜ್ ಕೊರೋನಾ ಬಂದಿರುವುದಾಗಿ ಹೇಳಿ ಹೆಬ್ಬಾಳದ ಬ್ಯಾಪಿ¸್ಟ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವಿಚಾರಣೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಕೊವೀಡ್19 ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಸಂಪತ್ ರಾಜ್ ತಿಳಿಸಿದ್ದರು. ಕೆಲ ದಿನಗಳ ಬಳಿಕ ಮಾಜಿ ಮೇಯರ್ ಆರೋಗ್ಯ ಪರಿಸ್ಥಿತಿ ತಿಳಿದುಕೊಳ್ಳಲು ಆಸ್ಪತ್ರೆಗೆ ಭೇಟಿ ನೀಡಿ, ಬಿಡುಗಡೆ ಬಳಿಕ ಮಾಹಿತಿ ನೀಡುವಂತೆ ಸಿಸಿಬಿ ತನಿಖಾಕಾರಿಗಳು ಸೂಚಿಸಿದ್ದರೂ ಕೂಡ ಯಾವುದೇ ಮಾಹಿತಿ ನೀಡಿರಲಿಲ್ಲ. ಬಿಡುಗಡೆಯ ಸಾರಾಂಶ ನ್ಯಾಯ ಸಮ್ಮತವಾಗಿಲ್ಲ ಎಂದು ದೂರಿ ಆರೋಗ್ಯ ಇಲಾಖೆಗೆ ಪತ್ರ ಬರೆದು ಸಂಪತ್ ರಾಜ್ ಆರೋಗ್ಯದ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಮನವಿ ಮಾಡಿದ್ದರು. ಈಗ ಮತ್ತೊಮ್ಮ ನೋಟಿಸ್ ನೀಡಿದೆ.