ಬೆಂಗಳೂರು:ಫೆ-16: ವಿಧಾನಸಭೆ ಚುನಾವಣೆ ಈ ಸದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2018-19ನೇ ಸಾಲಿನ ಬಜೆಟ್ ಅನ್ನು ಮಂಡಿಸುತ್ತಿದ್ದು, ಬಜೆಟ್ ನತ್ತ ರಾಜ್ಯದ ಜನತೆಯ ಚಿತ್ತ ನೆಟ್ಟಿದೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಕೊನೆ ಬಜೆಟ್ ಆಗಿದ್ದ್ದು, ಇನ್ನು ಸಿದ್ದರಾಮಯ್ಯ ನವರು ಮಂಡಿಸುತ್ತಿರುವ ದಾಖಲೆಯ ಹದಿಮೂರನೇ ಬಜೆಟ್ ಆಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ವರ್ಗಗಳ ಹಿತಕಾಯುವ ಬಜೆಟ್ ಮಂಡನೆ ಸಾಧ್ಯತೆ ಇದೆ ಎನ್ನುವ ನಿರೀಕ್ಷೆ ಮೂಡಿದೆ.
* 5 ವರ್ಷಗಳ ಕಾಲ ಆಡಳಿತ ಪೂರ್ಣಗೊಳಿಸಲು ಸಹಕರಿಸಿದ ರಾಜ್ಯದ ಜನತೆ, ಪ್ರತಿಪಕ್ಷಗಳು, ಅಧಿಕಾರಿಗಳಿಗೆ ಕೃತಜ್ಞತೆ ಸೂಚಿಸಿದ ಸಿಎಂ.
* 14ನೇ ವಿಧಾನಸಭೆಯ ಕೊನೆಯ ಅಧಿವೇಶನಕ್ಕೆ ನಾವು ಸಾಕ್ಷಿ. 5 ವರ್ಷಗಳ ಅಧಿಕಾರ ಪಡೆದು ಅದನ್ನು ನಿರ್ವಹಿಸಿದ ಬಗ್ಗೆ ನೆಮ್ಮದಿ ಇದೆ
* ನಮ್ಮದು ರೈತ ಸ್ನೇಹಿ ಸರ್ಕಾರ. ಆಯವ್ಯಯವೆಂದರೆ ಅಂಕಿ ಸಂಖ್ಯೆಗಳ ಕಸರತ್ತು ಅಲ್ಲ. ಗುರಿ ಸಾಧನೆಗೆ ಮಾರ್ಗ ಎಂದು ಯೋಚಿಸುತ್ತೇನೆ. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ನಮ್ಮ ಧ್ಯೇಯ.
* ಕೃಷಿಗೆ 5080 ಕೋಟಿ ರೂಪಾಯಿ ಅನುದಾನ.
* ಕಬ್ಬು ಕಟಾವು ಯಂತ್ರಗಳಿಗೆ 20 ಕೋಟಿ ರೂಪಾಯಿ ಸಹಾಯಧನ, ಸಿರಿಧಾನ್ಯ ಬೆಳೆಗಳ ಯೋಜನೆ 60 ಲಕ್ಷ ಹೆಕ್ಟೇರ್ ಗೆ ವಿಸ್ತರಣೆ.
* ಹಾವು ಕಡಿತದಿಂದ ಮೃತಪಟ್ಟ ರೈತನಿಗೆ 2 ಲಕ್ಷ ರೂಪಾಯಿ ನೆರವು.
* ರೈತರಿಗೆ ನೇರ ಆದಾಯ ಒದಗಿಸುವ ರೈತ ಬೆಳಕು ಯೋಜನೆ, ಗರಿಷ್ಠ 10 ಸಾವಿರ ರೂ.ವರೆಗೆ ಸಹಾಯಧನ. 70 ಲಕ್ಷ ರೈತರಿಗೆ ರೈತ ಬೆಳಕು ಯೋಜನೆಯಿಂದ ಅನುಕೂಲ. ಬೆಂಗಳೂರಿನ ಕೆಆರ್ ಪುರಂನಲ್ಲಿ ನೀರು ಸಂಸ್ಕರಣಾ ಘಟಕ
* ರಾಜ್ಯ ಮೇವು ಭದ್ರತಾ ನೀತಿ ಜಾರಿಗೆ. ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರ ಸ್ಥಾಪನೆ. ಬಸವ ಅಧ್ಯಯನ ಕೇಂದ್ರ ಸ್ಥಾಪನೆಗೆ 2 ಕೋಟಿ ಅನುದಾನ.
* ಜಿವಿಕೆಯಲ್ಲಿ ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆ, ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಕೇಂದ್ರ.
* ಸಿರಿಧಾನ್ಯ ಬೆಳೆಗಾರರಿಗೆ 24 ಕೋಟಿ ಪ್ಯಾಕೇಜ್. ಕೃಷಿ ಭಾಗ್ಯ ಯೋಜನೆಗೆ 600 ಕೋಟಿ ಅನುದಾನ, ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ. ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ.
* ಶೇಂಗಾ ಬೆಳೆಗಾರರಿಗೆ 50 ಕೋಟಿ ರೂ. ವಿಶೇಷ ಪ್ಯಾಕೇಜ್, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳಲ್ಲಿನ ಸಾಲಮನ್ನಾ. ನಿಧನ ಹೊಂದಿದ ರೈತರ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ.
* ತೋಟಗಾರಿಕೆಗೆ 1091 ಕೋಟಿ ಅನುದಾನ,ರೇಷ್ಮೆ ಇಲಾಖೆಗೆ 429 ಕೋಟಿ, ರೈತರಿಗೆ ಶೇ.3ರ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿ ಸಾಲ.
* ಸಹಕಾರ ಕ್ಷೇತ್ರಕ್ಕೆ 1,663 ಕೋಟಿ ರೂ. ಅನುದಾನ,ಮೀನುಗಾರಿಕೆಗೆ 337 ಕೋಟಿ ಅನುದಾನ.
* ಪಶುಸಂಗೋಪನೆಗೆ 2245 ಕೋಟಿ ರೂಪಾಯಿ ಅನುದಾನ, ಜಲಸಂಪನ್ಮೂಲ ಇಲಾಖೆಗೆ 15,929 ಕೋಟಿ ಅನುದಾನ,ಸಣ್ಣ ನೀರಾವರಿಗೆ 2090 ಕೋಟಿ ರೂ. ಅನುದಾನ.