ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೋದಾಮಿನಲ್ಲಿ ಇರಿಸಲಾಗಿದ್ದ ಚಿನ್ನ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಸಿದಂತೆ ಆರು ಕಸ್ಟಮ್ಸ್ ಅಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2012 ಜೂ.8 ರಿಂದ 2014 ಮಾ.26ರ ನಡುವೆ 13 ಪ್ರಯಾಣಿಕರಿಂದ ಅಕ್ರಮ ಚಿನ್ನ ಸಾಗಾಟ ಯತ್ನ ಹಾಗೂ ಹಲವು ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 2.6 ಕೆ.ಜಿ.ಚಿನ್ನವನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಈ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಆ ಹಿನ್ನೆಲೆಯಲ್ಲಿ ಅ.12 ರಂದು ಕಸ್ಟಮ್ಸ್ ಜಂಟಿ ಆಯುಕ್ತ ಎಂ.ಜೆ.ಚೇತನ್ ದೂರು ನೀಡಿದ್ದರು.
ದೂರಿನ ಮೇರೆಗೆ ಸಿಬಿಐ ಘಟಕದಲ್ಲಿ ಕಸ್ಟಮ್ಸ್ ಸಹಾಯಕ ಆಯುಕ್ತರಾದ ವಿನೋದ್ ಚಿನ್ನಪ್ಪ, ಕೆ.ಕೇಶವ್, ಸೂಪರಿಂಟೆಂಡೆಂಟ್ ಎನ್.ಜೆ.ರವಿಶಂಕರ್, ಕೆ.ಬಿ.ಲಿಂಗರಾಜು ಹಾಗೂ ಮತ್ತೊರ್ವ ಸಿಬ್ಬಂದಿ ಎಸ್.ಟಿ.ಹಿರೇಮಠ ಹಾಗೂ ಇತರ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 409(ನಂಬಿಕೆ ದ್ರೋಹ), 120ಬಿ(ಪಿತೂರಿ) ಮತ್ತು ಭಷ್ಟಾಚಾರ ತಡೆ ಕಾಯ್ದೆ-1988ರ ಸೆಕ್ಷನ್ 13(1)(ಸಿ)(ದುರ್ನಡತೆ), 13(2)ರಲ್ಲಿ ಪ್ರಕರಣ ದಾಖಲಾಗಿದೆ.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಜಪ್ತಿಯಾದ ಚಿನ್ನವನ್ನು ಆರೋಪಿಗಳು ಅಕಾರ ದುರುಪಯೋಗದಿಂದ ದಾಸ್ತಾನು ಮಾಡಿಲ್ಲ. ಅಲ್ಲದೇ ವಶಪಡಿಸಿಕೊಂಡ ಚಿನ್ನವನ್ನು ಮುಂದಿನ ಅಕಾರಿಗಳ ತಂಡಕ್ಕೆ ಕೀ ಹಸ್ತಾಂತರಿಸಿಲ್ಲ. ಡಬಲ್ ಲಾಕ್ ವ್ಯವಸ್ಥೆ ಪಾಲಿಸಿಲ್ಲ. ನಿಯಮದ ಪ್ರಕಾರ ಒಂದು ಕೀ ಗೋದಾಮಿನ ಮೇಲ್ವಿಚಾರಕರ ಬಳಿ ಇದ್ದರೆ, ಮತ್ತೊಂದು ಕೀ ಹಿರಿಯ ಅಕಾರಿಗಳ ಕೈಯಲ್ಲಿ ಇರಬೇಕು. ಈ ನಿಯಮವನ್ನು ಅನುಸರಿಸಿಲ್ಲ ಎಂದು ಹೈದರಾಬಾದ್ ಪ್ರಾದೇಶಿಕ ವಿಭಾಗದ ಜಾಗೃತ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದಾಗ ಅಕಾರಿಗಳ ಕರ್ತವ್ಯ ಲೋಪ, ನಿಯಮ ಉಲ್ಲಂಘನೆ ಕಂಡುಬಂದಿದೆ. ಹೀಗಾಗಿ ಈ ಆರು ಆರೋಪಿಗಳ ಅಕಾರಾವಯಲ್ಲಿ ಚಿನ್ನ ಕಾಣೆಯಾಗಿದೆ ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ.