ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ: ದಡ ಸೇರಿದ 22,124 ಮಂದಿ ಜನರ ಸುರಕ್ಷತೆಗೆ ಸೇನಾ ಬಳಕೆ

ಹುಬ್ಬಳ್ಳಿ: ಉತ್ತರದಲ್ಲಿ ಜಲಪ್ರಳಯದಲ್ಲಿ ಸಿಲುಕಿನ ಜನರ ರಕ್ಷಣೆಗಾಗಿ ಮೂರು ಎನ್‍ಡಿ ಆರ ಎಫ್ ತಂಡ, ಎರಡು ಸೇನಾಪಡೆ ನಿರಂತರವಾಗಿ ಶ್ರಮಿಸುತ್ತವೆ,
ಕಲಬುರಗಿ ಜಿಲ್ಲೆಯಲ್ಲಿ 20,024, ಯಾದಗಿರಿಯಲ್ಲಿ 2100 ಜನರನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿವೆ.
ಕಲಬುರಗಿಯ ಫಜಲಪುರ, ಜೇವರ್ಗಿ, ಕಲಬುರಗಿ, ಚಿತ್ತಾಪುರ ಹಾಗೂ ಶಹಬಾದ ತಾಲೂಕಿನ 157 ಗ್ರಾಮಗಳ ಪೈಕಿ ಭಾನುವಾರ ಜಿಲ್ಲಾಡಳಿತ ನೀಡಿರುವ ವರದಿ ಪ್ರಕಾರ 20,024 ಜನ, ಯಾದಗಿರಿಯ ಭೀಮಾತೀರದ 14 ಗ್ರಾಮಗಳ 2100 ಜನರನ್ನು ಸುರಕ್ಷಿತ ಸ್ಥಳಕ್ಕೆ ಸೇನಾಪಡೆ ಸ್ಥಳಾಂತರ ಮಾಡಿವೆ.
174 ಸೇನಾ ಸಿಬ್ಬಂದಿ ಭಾಗಿ:
ಸಿಕಂದರ್‍ಬಾದ್‍ನ ಸೇನಾ ಪಡೆಯ 174 ಮೀಡಿಯಂ ರಜೆಮೆಂಟ್‍ನ ಅಕಾರಿಗಳು ಮಾಹಿತಿ ನೀಡಿ, ತುರ್ತು ಪ್ಲಡ್ ರೀಲೀಫ್ ಪ್ರವಾಹಗೋಸ್ಕರ, ಗ್ರಾಮಗಳು ಮುಳುಗಡೆಯಾಗುವ ಹಿನ್ನೆಲೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಯಾದಗಿರಿ ಜಿಲ್ಲಾಡಳಿತದ ಕೋರಿಕೆ ಮೇರೆಗೆ ಭೀಮಾ ನದಿ ಪ್ರವಾಹ ಹೆಚ್ಚಾಗಿರುವುದರಿಂದ ಇಲ್ಲಿನÉ ಜನರ ಸುರಕ್ಷಿತಗೆ ಸೇನಾ ಪಡೆ ಅಕಾರಿಗಳು ಸೇರಿ 70 ಜನರ ತಂಡ ಆಗಮಿಸಿದೆ.
33 ಗ್ರಾಮಗಳ ರಸ್ತೆ ಸಂಪರ್ಕ ಕಡಿತ
ಭೀಮಾ ನದಿ ಪಾತ್ರದ ಸುಮಾರು 500 ಮೀಟರ್ ವ್ಯಾಪ್ತಿಯಲ್ಲಿ ಬರುವ 12 ಗ್ರಾಮಗಳಿಗೆ ಪ್ರವಾಹ ಸಂಭವಿಸಲಿದೆ. ಆ ಗ್ರಾಮಗಳಲ್ಲಿರುವ ಜನರನ್ನು ಸ್ಥಳಾಂತರಿಸಬೇಕು, ಈ ಕುರಿತು ಜನಪ್ರತಿನಿಗಳಿಗೆ ಮಾಹಿತಿ ನೀಡಬೇಕು. ಪ್ರವಾಹದಿಂದ 33 ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ