ಸಂಖ್ಯಾಬಲವಲ್ಲ, ಅವಿಶ್ವಾಸ ನಿರ್ಣಯವನ್ನು ಸರ್ಕಾರದ ವೈಫಲ್ಯ ಎತ್ತಿ ತೋರಿಸಲು ಬಳಕೆ: ಕಾಂಗ್ರೆಸ್

ನವದೆಹಲಿ: ಕೇಂದ್ರ ಮೋದಿ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡುವ ಮೂಲಕ ನಾವು ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಮುಂದಾಗಿದ್ದೇವೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ಸಂಸತ್ ಅಧಿವೇಶನಕ್ಕೆ ಕೆಲವೇ ಕ್ಷಣಗಳು ಬಾಕಿ ಉಳಿದಿದ್ದು, ಈ ವೇಳೆ ಮಾಧ್ಯಮಗಳಿಗೆ ತಮ್ಮ ನಿರ್ಧಾರದ ಕುರಿತು ಮಾತನಾಡಿದ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಅವರು, ನಮ್ಮ ಪಕ್ಷ ಇತರೆ ವಿಪಕ್ಷಗಳಿಗೆ ಬೆಂಬಲ ನೀಡುತ್ತಿದೆ. ಪ್ರಮುಖವಾಗಿ ಟಿಡಿಪಿ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡುವ ಮೂಲಕ ಕೇಂದ್ರ ಸರ್ಕಾರದ ವೈಫಲ್ಯವನ್ನು ತೋರಿಸಲಿದ್ದೇವೆ. ದೇಶದ ಜನ ನಾನಾ ವಿಚಾರಗಳಿಗೆ ಸಂಬಂಧಿಸಿದಂತೆ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಜನರಗೆ ಈ ಮೂಲಕ ಸತ್ಯದರ್ಶನ ಮಾಡಿಸಲಿದ್ದೇವೆ ಎಂದು ಹೇಳಿದರು.
ಇದು ಕೇವಲ ಸಂಖ್ಯಾ ಬಲವಲ್ಲ.ಬದಲಿಗೆ ನಾವು ಈ ಸಂದರ್ಭವನ್ನು ಸರ್ಕಾರದ ಬಣ್ಣ ಬಯಲು ಮಾಡಲು ಬಳಸಿಕೊಳ್ಳುತ್ತೇವೆ. ಸರ್ಕಾರದ ವೈಫಲ್ಯಗಳನ್ನು ಜನತಗೆ ತೋರಿಸಬೇಕು. ದೇಶದ ಜನತೆಗೆ ಸತ್ಯದ ಅರಿವಾಗಬೇಕು. ಆ ಮುೂಲತ ಮುಂದಿನ ಚುನಾವಣೆಯಲ್ಲಿ ಅವರು ಸೂಕ್ತ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.
ಅಂತೆಯೇ ಮೈತ್ರಿಕೂಟದಲ್ಲಿ ಪ್ರತಿಯೊಂದು ಪಕ್ಷವೂ ಅವಿಶ್ವಾಸ ನಿರ್ಣಯದ ಪರ ನಿಲ್ಲಬೇಕು ಮತ್ತು ಮೋದಿ ಸರ್ಕಾರದ ವಿರುದ್ಧ ಮತ ನೀಡಬೇಕು ಎಂದು ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ