ಕೋಲಾರ ;ಏ-30: ಐದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಭ್ರಷ್ತಾಚಾರ ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದರು.
ಕೋಲಾರದ ಕೆಜಿ ಎಫ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂದು ಮಾತನಾಡಿದ ಅಮಿತ್ ಶಾ, ರಾಜ್ಯದ ಎಲ್ಲಾ ಕಡೆ ಓಡಾಡಿದ್ದೇನೆ, ಮೇ.೧೫ರ ಮಧ್ಯಾಹ್ನದ ನಂತ್ರ ರಾಜ್ಯಾದ್ಯಂತ ಬಿಜೆಪಿ ಅಧಿಕಾರಕ್ಕೆ ಬರುತ್ತೇ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಕಳೆದ ೫ ವರ್ಷದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಬಿಟ್ಟರೇ ಬೇರೇನು ನಡೆದಿಲ್ಲ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದ ಸರ್ಕಾರದಲ್ಲಿ ನಂಬರ್ ಒನ್ ಆಗಿದೆ.
ದೇಶದಲ್ಲಿ ಮನಮೋಹನ್ ಸಿಂಗ್ ಸರ್ಕಾರಲ್ಲಿನ ಭ್ರಷ್ಟಾಚಾರ ಮುಚ್ಚಲು ಲಾಲು ಪ್ರಸಾದ್ ಯಾದವ್ ಬೆಂಬಲ ಪಡೆದಿದ್ದರು. ಈಗಲೂ ಸಹ ಅವರ ಸಂಬಂಧ ಇದೆ. ಅವ್ರನ್ನು ಬೇಟಿಯಾಗಲೂ ಈಗಲು ಹೋಗ್ತಾರೆ ಎಂದರು.
ಇನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಎರಡು ಮುಖಗಳನ್ನು ನಾವು ನೋಡಬಹುದು. ಅಧಿಕಾರ ಇದ್ದಾಗ ನಿರಂತರ ಭ್ರಷ್ಟಾಚಾರದಲ್ಲಿ ಇದ್ದರು. ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ. ಈಗ ರಾಜ್ಯಕ್ಕೆ ಬಂದಿದ್ದಾರೆ.
ಸಿದ್ದರಾಮಯ್ಯ ಚಾಮಡೇಶ್ವರಿಯಿಂದ ಓಡಿ ಹಾಗಿದ್ದಾರೆ. ಬಾದಾಮಿಯಲ್ಲಿ ಗೆಲ್ಲುತ್ತೇನೆ ಎಂದು.. ಆದರೆ ಅಲ್ಲಿ ಶ್ರೀರಾಮುಲು ಸಿದ್ದರಾಮಯ್ಯ ಗೆಲ್ಲಲು ಬಿಡಲ್ಲ.
ಮೋದಿ ಸರ್ಕಾರ ರಾಜ್ಯಕ್ಕೆ ೧೪ ಪೈನಾನ್ಸ್ ನಲ್ಲಿ ೨.೧೮ ಲಕ್ಷ ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ ಎಂದು ಹೇಳಿದರು.
ಬೆಂಗಳೂರಿನ ಅಭಿವೃದ್ಧಿ ಟ್ರಾಫಿಕ್ ಜಾಮ್ ನಲ್ಲಿದೆ. ಹೆರೀಸ್, ಜಾಜ್೯, ರೋಷನ್ ಬೇಗ್ ರವರ ಕೈನಲ್ಲಿ ಬೆಂಗಳೂರು ಇದೆ. ಅದನ್ನ ತಪ್ಪಿಸಲು ಬಿಜೆಪಿ ಸರ್ಕಾರ ಬರಬೇಕಿದೆ.
ನರೇಂದ್ರ ಮೋದಿ ಸರ್ಕಾರದ ಕೈ ಬಲ ಪಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಮತನೀಡಿ ಎಂದು ಅಮಿತ್ ಶಾ ಮನವಿ ಮಾಡಿದರು.
Karnataka assembly election,BJP,Amith Shah,KGF,Kolara