ರಫೇಲ್ ಏರ್ ಕ್ರಾಫ್ಟ್ ಖರೀದಿಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೋಸ ಮಾಡಿದೆ: ಈ ಬಗ್ಗೆ ಪ್ರಧಾನಿ ಮೋದಿ ರಾಜ್ಯದ ಜನತೆಗೆ ಉತ್ತರ ನೀಡಬೇಕು: ರಣದೀಪ್ ಸುರ್ಜೇವಾಲಾ ಆಗ್ರಹ

ಬೆಂಗಳೂರು:ಏ-30: ರಫೇಲ್ ಏರ್ ಕ್ರಾಫ್ಟ್ ಖರೀದಿ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೋಸ ಮಾಡಿದೆ. ಹೆಚ್ ಎಎಲ್ ಗೆ ನೀಡಬೇಕಿದ್ದ ಟೆಂಡರ್ ಬೇರೆಯವರಿಗೆ ನೀಡಿದೆ ಎಂದು ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆಪಿಸಿಸಿಯಲ್ಲಿ ಕೈ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡುಇದ ರಣದೀಪ್ ಸುರ್ಜೇವಾಲಾ, ರಫೇಲ್ ಏರ್ ಕ್ರಾಫ್ಟ್ ಖರೀದಿಯಲ್ಲಿ ಕೇಂದ್ರ ಎನ್ ಡಿಎ ಸರ್ಕಾರ ಕರ್ನಾಟಕದ ಹೆಚ್ ಎ ಎಲ್ ಗೆ ಮೋಸ್ ಮಾಡಿ, ಹೆಚ್ ಎ ಎಲ್ ಗೆ ನೀಡಬೇಕಿದ್ದ ಟೆಂದರ್ ನ್ನು ರಿಲಯನ್ಸ್ ಸಮೂಹದ ದಸಾಲ್ಟ್ ಗೆ ಟೆಂಡರ್ ನೀಡಿದೆ. ಈ ಮೂಲಕ ಟೆಂಡರ್ ನಲ್ಲಿ ದೊಡ್ಡ ಕಿಕ್ ಬ್ಯಾಕ್ ಪಡೆದಿದೆ ಎಂದು ಆರೋಪಿಸಿದರು.

ಮೊದಲಿಗೆ ಹೆಚ್ ಎಎಲ್ ಗೆ ಟೆಂಡರ್ ನೀಡಿ ಅತಿ ಕಡಿಮೆ ವೆಚ್ಷದಲ್ಲಿ ಪೂರೈಕೆಗೆ ಹೇಳಲಾಗಿತ್ತು. ಈ ಕುರಿತ ಟೆಂಡರ್ ಗೆ ಹೆಚ್ ಎಎಲ್ ಕೂಡ ಕಡಿಮೆ ವೆಚ್ಚದಲ್ಲಿ ತಯಾರಿಕೆಗೆ ಒಪ್ಪಿತ್ತು. ಆದರೆ ಹೆಚ್ ಎಎಲ್ ಗೆ ಟೆಂಡರ್ ರದ್ಧು ಮಾಡಿ ಕೇಂದ್ರ ಸರ್ಕಾರ ರಿಲಯನ್ಸ್ ಒತ್ತಡಕ್ಕೆ ಮಣಿದು ದಸಾಲ್ಟ್ ಕಂಪನಿಗೆ ಟೆಂಡರ್ ನೀಡಿದೆ. ಈಗ 36 ರಾಫೆಲ್ ಏರ್ ಕ್ಯಾಫ್ಟ್ ಖರೀದಿಗೆ ಟೆಂಡರ್ ನೀಡಲಾಗಿದೆ . ಒಂದು ಏರ್ ಕ್ರಾಫ್ಟ್ ಗೆ ೧೬೭೦ ಕೋಟಿ ರೂ. ೩೬ ಏರ್ ಕ್ರಾಫ್ಟ್ ಗೆ ೪೧.೨೫೦ ಕೋಟಿ ನೀಡಿದೆ. ಇದೇ ೪೬ ಏರ್ ಕ್ರಾಫ್ಟ್ ನ್ನು ಕತಾರ್, ಈಜಿಫ್ಟ್ ಖರೀದಿ ಮಾಡಿವೆ. ೪೬ ಏರ್ ಕ್ರಾಫ್ಟ್ ಗೆ ೭.೫ ಯೂರೋ ಗೆ ಖರೀದಿ ಮಾಡಿವೆ. ಆದರೆ ಅಷ್ಟೇ ಹಣ ನೀಡಿ ೩೬ ಏರ್ ಕ್ರಾಫ್ಟ್ ಕೇಂದ್ರ ಖರೀದಿಸಿದೆ. ಇದರ ಹಿಂದಿರುವ ಹುನ್ನಾರ ಏನು ಎಂದು ಪ್ರೆಶ್ನಿಸಿದರು.

ಹೆಚ್ ಎಎಲ್ ಗೆ ೩೬ ಸಾವಿರ ಕೋಟಿ ಕಾಂಟ್ರಾಕ್ಟ್ ಮಿಸ್ ಆಗಿದೆ. ರಾಜ್ಯಕ್ಕೆ ಸಿಗುತ್ತಿದ್ದ ಬಹುದೊಡ್ಡ ಗುತ್ತಿಗೆ ಕೈತಪ್ಪಿದೆ. ಸಾವಿರಾರು ಉದ್ಯೋಗಗಳ ಸೃಷ್ಟಿಗೂ ಬ್ರೇಕ್ ಬಿದ್ದಿದೆ. ಇದು ಕೇಂದ್ರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಎಂದು ಕೇಂದ್ರ ಸರ್ಕಾರದ ವಿರುದ್ಧ ಸುರ್ಜೇವಾಲಾ ವಾಗ್ದಾಳಿ ನಡೆಸಿದರು.

೭೭ ವರ್ಷಗಳ ಅನುಭವ ಹೆಚ್ ಎಎಲ್ ಗಿದೆ. ಇಂತ ಸಂಸ್ಥೆ ಬಿಟ್ಟು ರಾಫೆಲ್ ಏರ್ ಕ್ರಾಫ್ಟ್ ಕಾಂಟ್ರಾಕ್ಟ್ ನ್ನು ಇತ್ತೀಚಿನ‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ನಾಳೆ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಯಾವ ಮುಖವಿಟ್ಟುಕೊಂಡು ಇಲ್ಲಿಗೆ ಬರುತ್ತಿದ್ದಾರೆ. ಯಾವ ನೈತಿಕತೆ ಮೇಲೆ ಇಲ್ಲಿ ಮತಕೇಳುತ್ತಾರೆ ಎಂದು ಬಿಜೆಪಿ ನಾಯಕರಿಗೆ ಸುರ್ಜೇವಾಲಾ ಸವಾಲು ಹಾಕಿದ್ದಾರೆ.

Karnata assembly election,Randeep Surjewala,Press Conference,KPCC Office

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ