ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ದೇಶಕ್ಕೆ ಮಾರಕವಾಗಿದೆ: ಅರುಣ್ ಜೇಟ್ಲಿ

New Delhi: Finance Minister Arun Jaitley addressing a press conference at North Block in New Delhi on Tuesday. PTI Photo by Manvender Vashist (PTI3_14_2017_000123B)

ನವದೆಹಲಿ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಅತ್ಯಂತ ಅಪಾಯಕಾರಿಯಾಗಿವೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಬಿಡುಗಡೆಗೊಳಿಸಿರುವ ಪ್ರಣಾಳಿಕೆ ಕುರಿತು ಮಾತನಾಡಿರುವ ಅರುಣ್‌ ಜೇಟ್ಲಿ, ದೇಶದ್ರೋಹ ಮತ್ತು ನಕ್ಸಲರಿಗೆ ಅನುಕೂಲವಾಗುವಂಥ ಕಾನೂನುಗಳನ್ನು ಜಾರಿಗೆ ತರಲು ಕಾಂಗ್ರೆಸ್‌ ಹೊರಟಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ ಪ್ರಣಾಳಿಕೆ ಅತ್ಯಂತ ಅಪಾಯಕಾರಿಯಾಗಿದ್ದು, ಅದನ್ನು ಜಾರಿಗೆ ತರುವುದು ನಿಜಕ್ಕೂ ಅಪಾಯಕಾರಿಯಾಗಿದೆ. ಸೇನಗೆ ನೀಡಿರುವ ವಿಶೇಷ ಅಧಿಕಾರ ಹಾಗೂ ಐಪಿಸಿ ಸೆಕ್ಷನ್‌ 124 (ಎ) ತಿದ್ದುಪಡಿ ತರುವುದು ನಿಜಕ್ಕೂ ಭಾರತ ಒಡೆಯುವ ಅಜೆಂಡಾ ರೀತಿಯಲ್ಲಿದೆ ಎಂದು ಜೇಟ್ಲಿ ವಿಶ್ಲೇಷಿಸಿದರು.

ಈ ಪ್ರಣಾಳಿಕೆಯನ್ನು ಯಾರು ತಯಾರಿಸಿದ್ದಾರೋ ತಿಳಿಯದು. ಒಟ್ಟಾರೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಟೀಮ್ ಮಾಡಿರುವ ಈ ಪ್ರಣಾಳಿಕೆ ದೇಶಕ್ಕೆ ಮಾರಕ ಎಂದೇ ಹೇಳಬಹುದು ಎಂದು ಜೇಟ್ಲಿ ಸ್ಪಷ್ಟಪಡಿಸಿದರು.

ದೇಶ ದ್ರೋಹದ ಕಾನೂನನ್ನೇ ರದ್ದುಗೊಳಿಸುವಂಥ ಇಂಥ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿರುವ ಕಾಂಗ್ರೆಸ್‌ಗೆ ಒಂದೇ ಒಂದು ವೋಟು ಕೂಡ ಬೀಳುವುದಿಲ್ಲ. ಇಂಥ ದೇಶ ವಿರೋಧಿ ಪ್ರಣಾಳಿಕೆ ಮಾಡಿದ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಜೇಟ್ಲಿ ಕರೆ ನೀಡಿದ್ದಾರೆ.

BJP,Arun Jaitly,lok sabha election

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ