ಹೊಸದಿಲ್ಲಿ : ಇಸ್ರೇಲಿ ಕಂಪನಿ ಸ್ಪೈವೇರ್ ಪೆಗಾಸಸ್ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ಸದಸ್ಯರು ಗುರುವಾರವೂ ಭಾರೀ ಗಲಾಟೆಯೆಬ್ಬಿಸಿದರು. ಈ ಪ್ರಕರಣದ ಬಗ್ಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಹೇಳಿಕೆ ನೀಡಲು ಆರಂಭಿಸುತ್ತಿದ್ದಂತೆ ಅವರಿಗೆ ಅವಕಾಶ ನೀಡದ ಟಿಎಂಸಿ ಸಂಸದರು ಕಾಗದ ಪತ್ರಗಳನ್ನು ಹರಿದು ಹಾಕಿ, ಅವುಗಳನ್ನು ಗಾಳಿಯಲ್ಲಿ ತೂರಿದರೆ , ಕಾಂಗ್ರೆಸಿನ ದಿಗ್ವಿಜಯ್ ಸಿಂಗ್ ಭಿತ್ತಿಪತ್ರಹಿಡಿದು ಸಭಾಧ್ಯಕ್ಷರ ಅನುಮತಿ ಇಲ್ಲದೆಯೇ ದೈನಿಕ ಭಾಸ್ಕರ್ ವಿರುದ್ಧದ ಐಟಿ ದಾಳಿ ಪ್ರಕರಣವನ್ನು ಮುಂದಿಟ್ಟು ವಿವಾದವೆಬ್ಬಿಸಲು ಮುಂದಾದರು. ವಿಪಕ್ಷೀಯರು ಪದೆ ಪದೆ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಗುರುವಾರದ ಸಂಸದೀಯ ಕಲಾಪವೂ ಮುಂದೂಡಲ್ಪಟ್ಟಿತು.
ಪೆಗಾಸಸ್ ವಿವಾದ ಕುರಿತು ಹೇಳಿಕೆ ನೀಡಲು ಸಭಾಧ್ಯಕ್ಷರು ಸಚಿವ ವೈಷ್ಣವ್ ಅವರನ್ನು ಆಹ್ವಾನಿಸಿದಾಗ ಟಿಎಂಸಿ ಮತ್ತಿತರ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗೆ ತೆರಳಿ, ಘೋಷಣೆ ಕೂಗಿದರು. ಸಚಿವರು ನೀಡಬೇಕಾದ ಹೇಳಿಕೆಯ ಕಾಗದ ಪತ್ರಗಳನ್ನು ಹರಿದು ಹಾಕಿ, ಅವುಗಳನ್ನು ಗಾಳಿಯಲ್ಲಿ ತೂರಿದರು.
ಇದರಿಂದಾಗಿ ಸಚಿವರು ಹೇಳಿಕೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ಅದರ ಪ್ರತಿಯನ್ನು ಸದನದ ಮೇಜಿನ ಮೇಲೆ ಇಡಬೇಕಾಯಿತು.

ಅಸಂಸದೀಯ ನಡೆ ಸಲ್ಲ:ವಿಪಕ್ಷಕ್ಕೆ ಸಭಾಪತಿ , ಉಪಸಭಾಪತಿ ಮನವಿ
ದಿನದ ಕಲಾಪವನ್ನು ಮುಂದೂಡುವ ಮೊದಲು ಸಂಸದರು ಅಸಂಸದೀಯ ನಡವಳಿಕೆ ಸಲ್ಲದೆಂದು ಉಪ ಸಭಾಪತಿ ಹರಿವಂಶ್ ಕೇಳಿಕೊಂಡರು. ಸಚಿವರಿಂದ ಯಾವುದೇ ದಾಖಲೆಪತ್ರ ಮಂಡನೆಗೆ ಅವಕಾಶ ನೀಡದ ಪ್ರತಿಪಕ್ಷ ಸಂಸದರು, ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಎರಡು ಬಾರಿ ಸದನವನ್ನು ಮುಂದೂಡಲಾಗಿತ್ತು. ಪೆಗಾಸಸ್ ಮತ್ತಿತರ ವಿಷಯಗಳ ಆರೋಪ ಕುರಿತಂತೆ ಪ್ರತಿಪಕ್ಷ ಸದಸ್ಯರು ಘೋಷಣೆ ಕೂಗಿ ಗದ್ದಲವೆಬ್ಬಿಸಿದರು.
ಇದಕ್ಕೂ ಮುನ್ನ, ಬೆಳಗ್ಗೆ ರಾಜ್ಯಸಭೆಯಲ್ಲಿ ಕಲಾಪ ಆರಂಭವಾದ ಕೂಡಲೇ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ದೈನಿಕ ಭಾಸ್ಕರ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಯನ್ನು ಪ್ರಸ್ತಾಪಿಸಿದರು. ಟಿಎಂಸಿ ನಾಯಕರು ಸೇರಿದಂತೆ ಇತರ ವಿರೋಧ ಪಕ್ಷಗಳ ನಾಯಕರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇಸ್ರೇಲ್ ಮೂಲದ ಪೆಗಾಸಸ್ ಸ್ಪೈವೇರ್ ಸಂಸ್ಥೆಯನ್ನು ಕಣ್ಗಾವಲು ಆಗಿ ಮೋದಿ ಸರ್ಕಾರ ಬಳಸಿಕೊಂಡು ತಮ್ಮ ರಾಜಕೀಯ ಪ್ರತಿಸ್ರ್ಪಗಳು, ಪತ್ರಕರ್ತರು ಮತ್ತು ಟೀಕಾಕಾರವನ್ನು ಮಟ್ಟಹಾಕಲು ಹವಣಿಸುತ್ತಿದೆ ಎಂದು ಆರೋಪಿಸಿದರು.
ಜನರ ಸಮಸ್ಯೆ ಚರ್ಚಿಸಲು ಇಚ್ಛೆ ಇಲ್ಲವೇ:ವೆಂಕಯ್ಯ ಪ್ರಶ್ನೆ
ಈ ಸಂದರ್ಭ, ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ, ಭಿತ್ತಿಪತ್ರಗಳನ್ನು ತೋರಿಸಬೇಡಿ ಎಂದು ರಾಜ್ಯಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಸೂಚಿಸಿದರು.ನಿಮಗೆ ಜನರ ಸಮಸ್ಯೆಗಳನ್ನು ಚರ್ಚಿಸಲು ಇಚ್ಛೆಯಿಲ್ಲವೇ? ನಿಮಗೆ ವಿಷಯ ಪ್ರಸ್ತಾಪಿಸಲು ಅನುಮತಿ ನೀಡಿರಲಿಲ್ಲ, ದಾಖಲೆ ಮಾಡಿಟ್ಟುಕೊಳ್ಳುವುದಿಲ್ಲ ಎಂದು ವೆಂಕಯ್ಯ ನಾಯ್ಡು ದಿಗ್ವಿಜಯ್ ಸಿಂಗ್ ಅವರಿಗೆ ಹೇಳಿದರು.
ದಯಮಾಡಿ ನಿಮ್ಮ ಆಸನಗಳಿಗೆ ಹಿಂತಿರುಗಿ. ಸಂಸತ್ತಿನ ಶಿಸ್ತು, ಸಂಪ್ರದಾಯಗಳನ್ನು ಪಾಲಿಸಿ. ನನಗೆ ಸೂಚನೆ ಕಳುಹಿಸಿ, ಅನಂತರ ನಾನು ವಿಷಯ ಪ್ರಸ್ತಾವನೆ ಬಗ್ಗೆ ತೀರ್ಮಾನಿಸುತ್ತೇನೆ ಎಂದು ಸಭಾಪತಿ ವೆಂಕಯ್ಯ ನಾಯ್ಡು ಅವರು ಹೇಳಿದರು.ಆದರೆ ಸಭಾಪತಿಗಳ ಮಾತಿಗೆ ಕಿವಿಯೇ ಕೊಡದ ವಿಪಕ್ಷೀಯರು ಗದ್ದಲ, ಕೋಲಾಹಲ ಮುಂದುವರಿಸಿದರು. ಇದರಿಂದ ಎರಡು ಬಾರಿ ಕಲಾಪವನ್ನು ಮುಂದೂಡಬೇಕಾಯಿತು.
ಸಭಾಪತಿ , ಉಪಸಭಾಪತಿ ಮನವಿ
ದಿನದ ಕಲಾಪವನ್ನು ಮುಂದೂಡುವ ಮೊದಲು ಸಂಸದರು ಅಸಂಸದೀಯ ನಡವಳಿಕೆ ಸಲ್ಲದೆಂದು ಉಪ ಸಭಾಪತಿ ಹರಿವಂಶ್ ಕೇಳಿಕೊಂಡರು. ಸಚಿವರಿಂದ ಯಾವುದೇ ದಾಖಲೆಪತ್ರ ಮಂಡನೆಗೆ ಅವಕಾಶ ನೀಡದ ಪ್ರತಿಪಕ್ಷ ಸಂಸದರು, ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಎರಡು ಬಾರಿ ಸದನವನ್ನು ಮುಂದೂಡಲಾಗಿತ್ತು. ಪೆಗಾಸಸ್ ಮತ್ತಿತರ ವಿಷಯಗಳ ಆರೋಪ ಕುರಿತಂತೆ ಪ್ರತಿಪಕ್ಷ ಸದಸ್ಯರು ಘೋಷಣೆ ಕೂಗಿ ಗದ್ದಲವೆಬ್ಬಿಸಿದರು.
ಇದಕ್ಕೂ ಮುನ್ನ, ಬೆಳಗ್ಗೆ ರಾಜ್ಯಸಭೆಯಲ್ಲಿ ಕಲಾಪ ಆರಂಭವಾದ ಕೂಡಲೇ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ದೈನಿಕ ಭಾಸ್ಕರ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಯನ್ನು ಪ್ರಸ್ತಾಪಿಸಿದರು. ಟಿಎಂಸಿ ನಾಯಕರು ಸೇರಿದಂತೆ ಇತರ ವಿರೋಧ ಪಕ್ಷಗಳ ನಾಯಕರು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇಸ್ರೇಲ್ ಮೂಲದ ಪೆಗಾಸಸ್ ಸ್ಪೈವೇರ್ ಸಂಸ್ಥೆಯನ್ನು ಕಣ್ಗಾವಲು ಆಗಿ ಮೋದಿ ಸರ್ಕಾರ ಬಳಸಿಕೊಂಡು ತಮ್ಮ ರಾಜಕೀಯ ಪ್ರತಿಸ್ರ್ಪಗಳು, ಪತ್ರಕರ್ತರು ಮತ್ತು ಟೀಕಾಕಾರವನ್ನು ಮಟ್ಟಹಾಕಲು ಹವಣಿಸುತ್ತಿದೆ ಎಂದು ಆರೋಪಿಸಿದರು.
ದಿಗ್ವಿಜಯ್ ಸಿಂಗ್ ಅವರಿಗೆ ಹೇಳಿದರು.