ವಿಚ್ಛಿದ್ರಕಾರಿಗಳ ಆಟದಿಂದ ದೇಶದ ಉನ್ನತಿ ತಡೆಯಲಸಾಧ್ಯ:ಅಮಿತ್ ಶಾ

ಹೊಸದಿಲ್ಲಿ: ಮುಂಗಾರು ಅವೇಶನ ಸೋಮವಾರದಿಂದ ಆರಂಭವಾಗಿದೆ. ಅವೇಶನವು ಪ್ರಗತಿಯ ಹೊಸ ಹೊಸ ಫಲಗಳನ್ನೇ ನೀಡಲಿದೆ. ಹಾಗಾಗಿ ವಿಚ್ಛಿದ್ರಕಾರಿಗಳು ಮತ್ತು ಅಡ್ಡಿಕೋರರ ಅಟ್ಟಹಾಸಕ್ಕೆ ದೇಶ ಮಣಿಯದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ಹಳೆಯ ಮಿಥ್ಯೆ ಕಥೆಗಳನ್ನೇ ಜಗಿದು ಜಗಿದು ಭಾರತವನ್ನು ಹೇಗಾದರು ಮಾಡಿ ಜಗತ್ತಿನೆದುರು ಅಪಮಾನಿಸಬೇಕು , ತನ್ಮೂಲಕ ಭಾರತದ ಪ್ರಗತಿ ಪಥವನ್ನು ಅಸ್ತವ್ಯಸ್ತಗೊಳಿಸಬೇಕೆಂಬುದು ಕೆಲವು ಶಕ್ತಿಗಳ ಹುನ್ನಾರ. ಇದಕ್ಕಾಗಿ ಈ ವರ್ಗ ಸರದಿ ಸಾಲಲ್ಲಿ ನಿಂತಿರುತ್ತದೆ. ಕಳೆದ ಸಂಜೆಯ ತಥಾಕಥಿತ ವರದಿಯೊಂದು ಇದಕ್ಕೆ ಸ್ಪಷ್ಟ ನಿದರ್ಶನ ಎಂದವರು ಬೇಸರ ವ್ಯಕ್ತಪಡಿಸಿದರು.

ದೇಶದ ಜನರು ಮುಂಗಾರು ಅವೇಶದ ಫಲಾಫಲಗಳ ಬಗ್ಗೆ ತುಂಬು ಭರವಸೆ ಹೊಂದಿದ್ದಾರೆ. ರೈತರು, ಮಹಿಳೆಯರು, ಯುವಕರು, ಸಮಾಜದ ಹಿಂದುಳಿದ ವರ್ಗದ ಪ್ರಗತಿಗೆ ಸಂಬಂಧಪಟ್ಟಂತೆ ಪ್ರಮುಖ ಮಸೂದೆಗಳು ಅವೇಶನದಲ್ಲಿ ಚರ್ಚೆಯಾಗಬೇಕಿದೆ ಮತ್ತು ಇವೆಲ್ಲವುಗಳ ಬಗ್ಗೆ ಚರ್ಚಿಸಲು ಸರಕಾರ ತಯಾರಿದೆ ಎಂದು ಮೋದಿ ಆಶ್ವಾಸನೆ ನೀಡಿದರು.

ಕಳೆದ ಕೆಲ ದಿನಗಳ ಹಿಂದೆ ಮಹಿಳೆಯರು, ಎಸ್‍ಸಿ, ಎಸ್‍ಟಿ ಮತ್ತು ಒಬಿಸಿ ಸದಸ್ಯರಿಗೆ ಆದ್ಯತೆ ನೀಡಿ ಸಂಪುಟ ಪುನಾರಚಿಸಲಾಗಿತ್ತು. ಆದರೆ ಕೆಲವು ಶಕ್ತಿಗಳಿಗೆ ಇದು ಕೂಡ ಅಪಥ್ಯವಾಯಿತು, ಈ ಶಕ್ತಿಗಳು ದೇಶದ ಪ್ರಗತಿಯನ್ನೂ ಬುಡಮೇಲು ಮಾಡಲು ಹಾತೊರೆಯುವವರು. ಹಾಗೆಂದು ಇವರು ಯಾರನ್ನು ಮೆಚ್ಚಿಸಲು ಅಥವಾ ಯಾರ ತಾಳಕ್ಕೆ ತಕ್ಕಂತೆ ಕುಣಿಯುವವರು ಎಂಬುದೇ ಪ್ರಶ್ನೆ. ಭಾರತವನ್ನು ಹೀನಾಯ ಸ್ಥಿತಿಯಲ್ಲಿ ಬಿಂಬಿಸುವುದರಿಂದ ಇವರಿಗಾಗುವ ಲಾಭವೇನು, ಸಿಗುವ ಸಂತೋಷವಾದರೂ ಏನು ಎಂದು ಶಾ ಖಾರವಾಗೇ ಪ್ರಶ್ನಿಸಿದರು.

ಇನ್ನು ನಿಯಂತ್ರಣರಹಿತ ಕಾಂಗ್ರೆಸ್ ಪ್ರವೃತ್ತಿ ಅನಿರೀಕ್ಷಿತವಲ್ಲ. ಪ್ರಜಾಸತ್ತೆಯನ್ನು ಬುಡಮೇಲು ಮಾಡುವುದgಲ್ಲಿ ಅವರು ನಿಸ್ಸೀಮ ಅನುಭವಿಗಳು. ಅವರ ಆಡಳಿತದಲ್ಲೇ ಸದನದಲ್ಲಿ ಶಿಸ್ತಿರಲಿಲ್ಲ.ಇದೀಗ ಸಂಸತ್ತಲ್ಲಿ ಮಂಡನೆಯಾಗುವ ಪ್ರತಿಯೊಂದು ಪ್ರಗತಿಪರ ವಿಚಾರಗಳನ್ನು ಹೊಸಕಿ ಹಾಕಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನುಡಿದರು.

ಸಂಸತ್ತಿನ ಸಂಪ್ರದಾಯ ಪ್ರಕಾರ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸಂಪುಟ ಸಚಿವರನ್ನು ಪರಿಚಯಿಸಲು ತಾನು ಎದ್ದು ನಿಂತಾಗ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷೀಯರು ಸದನಗಳ ಬಾವಿಗಿಳಿದಿದ್ದರು ಎಂದು ನೆನಪಿಸಿದ ಶಾ, ಕಾಂಗ್ರೆಸಿಗರು ಸಂಸತ್ತಿನ ನಿಯಮಾವಳಿಗಳನ್ನು ಗೌರವಿಸುವುದು ಈ ತೆರವೇ ಎಂದು ಪ್ರಶ್ನಿಸಿದರು. ಮಾಹಿತಿ ತಂತ್ರಜ್ಞಾನ ಸಚಿವರ ಸಮಕ್ಷಮವೂ ವಿಪಕ್ಷೀಯರು ಇದೇ ತೆರ ದುರ್ವರ್ತನೆ ಮೆರೆದದ್ದು ವಿಷಾದನೀಯ ಎಂದವರು ವಿಷಾದ ವ್ಯಕ್ತಪಡಿಸಿದರು.

ಕಳೆದ ಸಂಜೆಯ ವರದಿ ಹಿಂದಿರುವವರು ವಿಚ್ಛಿದ್ರಕಾರಿ ಜಾಗತಿಕ ಸಂಘಟನೆಗಳು. ಇವು ಭಾರತದ ಪ್ರಗತಿಯನ್ನು ಸಹಿಸುವುದಿಲ್ಲ. ಇನ್ನು ಅಡ್ಡಿಕೋರರು ದೇಶದೊಳಗಿನ ರಾಜಕೀಯ ಹುರಿಯಾಳುಗಳು. ಇವರಿಗೂ ಭಾರತದ ಅಭ್ಯುದಯ ಅಪಥ್ಯ ವಿಚಾರ. ಆದರೆ ಈ ತೆರ ಸಮಯಸಾಧಕ ತಂತ್ರ ಇನ್ನು ನಡೆಯದು.

ಭಾರತೀಯರು ಈ `ತಂತ್ರ ಶಾಸ್ತ್ರ’ವನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ಒಂದಂತು ತೀರಾ ಸ್ಪಷ್ಟ. ಮೋದಿ ನೇತೃತ್ವದ ಕೇಂದ್ರ ಸರಕಾರದ ಗುರಿ ರಾಷ್ಟ್ರದ ಅಭ್ಯುದಯ ಒಂದೇ. ಈ ಸಾಧನೆ ಹಾದಿಯಲ್ಲಿ ಏನೇ ಅಡೆತಡೆಗಳು ಎದುರಾದರೂ ನಾವು ಗುರಿ ಸಾಸಿಯೇ ಸಿದ್ಧ ಎಂದು ಘೋಷಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ