ಭದ್ರತಾ ಸಂಸ್ಥೆಗಳಿಂದ ಭೌತಿಕ ಭದ್ರತೆ ಇದ್ದರೂ ತಾಂತ್ರಿಕತೆಯಿಂದ ರಕ್ಷಣೆ ಅಗತ್ಯ ಅಪಾಯದಲ್ಲಿ ಅಯೋಧ್ಯಾ ಜನ್ಮಭೂಮಿ!

ಅಯೋಧ್ಯಾ/ಉಡುಪಿ: ಕೇವಲ ಭಾರತವಷ್ಟೇ ಅಲ್ಲ, ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ ಅಯೋಧ್ಯಾದ ಜನ್ಮಭೂಮಿ ರಾಮ ಮಂದಿರ. ಆದರೆ ಇತ್ತೀಚಿನ ಘಟನೆಗಳು ಆತಂಕಕಾರಿ ವಿಚಾರಗಳನ್ನು ಬಹಿರಂಗ ಪಡಿಸುತ್ತಿವೆ. ಅಯೋಧ್ಯಾ ಪೊಲೀಸರು ಹೈ ಸೆಕ್ಯೂರಿಟಿ ಝೋನ್‍ನಡಿಯಲ್ಲಿ ಭದ್ರತೆ ಒದಗಿಸುತ್ತಿದ್ದರೂ ಜನ್ಮಭೂಮಿ ಅಪಾಯದಲ್ಲಿದೆ.

ಎರಡು ದಿನ ಹಿಂದೆ ಉತ್ತರ ಪ್ರದೇಶದ ರಾಜಧಾನಿ ಲಖನೌದ ಕಾಕೋರಿಯಿಂದ ಇಬ್ಬರು ಅಲ್ ಖೈದಾ ಭಯೋತ್ಪಾದಕರನ್ನು ಬಂಸಿ, ಅವರಿಂದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಬೆನ್ನಿಗೆ 12ಕ್ಕೂ ಅಕ ಮಂದಿ ಶಂಕಿತರನ್ನೂ ಬಂಸಿದ್ದು, ಗುಪ್ತಚರ ಇಲಾಖೆ ಮತ್ತು ಎಟಿಎಸ್ ವಿಚಾರಣೆ ನಡೆಸುತ್ತಿದೆ. ಈ ಭಯೋತ್ಪಾದಕರ ಹಿಟ್ ಲಿಸ್ಟ್‍ನಲ್ಲಿ ಹಿಂದುಗಳ ಶ್ರದ್ಧಾ ಕೇಂದ್ರವಾದ ರಾಮ ಜನ್ಮಭೂಮಿ ಸೇರಿದೆ. ಭಯೋತ್ಪಾದಕರು ರಾಮ ಮಂದಿರವನ್ನು ಗುರಿಯಾಗಿಸಿಕೊಂಡಿರುವುದು ಅವರಲ್ಲಿದ್ದ ನಕ್ಷೆಗಳಿಂದ ಬಹಿರಂಗವಾಗಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ.

ಹೈ ಸೆಕ್ಯೂರಿಟಿ ಝೋನ್: ಬಿಗಿ ಭದ್ರತೆ
ಉತ್ತರ ಪ್ರದೇಶದ ಅಯೋಧ್ಯಾ ಪೊಲೀಸರು ಈ ಹಿಂದೆಯೇ ರಾಮ್‍ಕೋಟ್ ಜನ್ಮಭೂಮಿ ಪ್ರದೇಶವನ್ನು ಹೈ ಸೆಕ್ಯೂರಿಟಿ ಝೋನ್ ಆಗಿ ಪರಿವರ್ತಿಸಿದ್ದಾರೆ. ಅಲ್ಲದೇ ಅತ್ಯಕ ಭದ್ರತೆಯನ್ನು ಒದಗಿಸುತ್ತಿದ್ದಾರೆ. ಈ ಮಧ್ಯೆ ಕೇವಲ ಐದು ದಿನಗಳ ಹಿಂದೆ ಅಯೋಧ್ಯಾದಲ್ಲಿ ರಾಮ ಜನ್ಮಭೂಮಿ ಸಂಕೀರ್ಣದ ಬಳಿಯೇ ಅನುಮಾನಾಸ್ಪದ ವ್ಯಕ್ತಿಯೊಬ್ಬನನ್ನು ಬಂಸಿದ್ದಾರೆ. ಆ ವ್ಯಕ್ತಿ ಇಲ್ಲಿ ಬಾಬ್ರಿ ಮಸೀದಿ ಎಲ್ಲಿದೆ ಎಂದು ಕರ್ತವ್ಯನಿರತ ಪೊಲೀಸರಲ್ಲಿಯೇ ಪ್ರಶ್ನಿಸಿದ್ದು, ಅನುಮಾನಗೊಂಡ ಪೊಲೀಸರು ಆತನನ್ನು ಬಂಸಿ, ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರಿಂದ ಐಡಿ ಪರಿಶೀಲನೆ
ಈ ಅನಪೇಕ್ಷಿತ ಘಟನೆ ಮತ್ತು ಲಖನೌನಲ್ಲಿ ಭಯೋತ್ಪಾದಕರ ಬಂಧನದ ನಂತರ, ರಾಮ ನಗರಿ ಅಯೋಧ್ಯಾದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅಯೋಧ್ಯಾವನ್ನು ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ರಾಮ್‍ಕೋಟ್ ಪ್ರದೇಶವನ್ನು ಯಾವುದೇ ವ್ಯಕ್ತಿ ಪ್ರವೇಶಿಸಬೇಕೆಂದಿದ್ದರೂ ಗುರುತಿನ ಚೀಟಿ ತೋರಿಸಬೇಕು. ಅದನ್ನು ಪರಿಶೀಲಿಸಿದ ನಂತರವೇ ಪೊಲೀಸರು ಮುಂದುವರಿಯಲು ಅವಕಾಶ ನೀಡುತ್ತಿದ್ದಾರೆ.

ಗೂಗಲ್ ಅರ್ಥ್‍ನಲ್ಲಿ ಜನ್ಮಭೂಮಿ!
ಭೌತಿಕವಾಗಿ ಇಷ್ಟೆಲ್ಲ ಭದ್ರತೆಯನ್ನು ಒದಗಿಸಿದ್ದರೂ ತಾಂತ್ರಿಕತೆಯಿಂದ ಈ ಭದ್ರತೆಯಲ್ಲಿ ವೈಫಲ್ಯ ಕಾಣುತ್ತಿದೆ. ತಾಂತ್ರಿಕವಾಗಿಯೂ ಭದ್ರತೆ ಒದಗಿಸುವಲ್ಲಿ ಕೇಂದ್ರ ಮತ್ತು ಉ.ಪ್ರ. ಸರಕಾರಗಳು ವಿಫಲಗೊಂಡಿವೆ. ಬಂತ ಭಯೋತ್ಪಾದಕರಿಗೆ ಅಯೋಧ್ಯಾ ಜನ್ಮಭೂಮಿಯ ನಕ್ಷೆ ಸುಲಭವಾಗಿ ಸಿಕ್ಕಿರುವುದಕ್ಕೆ ಗೂಗಲ್ ಅರ್ಥ್ ಕೂಡ ಸಹಾಯಕವಾಗಿರುವ ಸಾಧ್ಯತೆ ಇದೆ. ಯಾಕೆಂದರೆ ಈ ಆ್ಯಪ್ ಅನ್ನು ಡೌನ್ ಮಾಡಿಕೊಂಡರೆ ಉಪಗ್ರಹ ಚಿತ್ರದ ಮೂಲಕ ಸುಲಭವಾಗಿ ಅಯೋಧ್ಯಾ ಜನ್ಮಭೂಮಿ ಪ್ರದೇಶವನ್ನು ಗುರುತಿಸುವುದಕ್ಕೆ ಸಾಧ್ಯವಾಗುತ್ತಿದೆ. ಗೂಗಲ್ ಅರ್ಥ್ ಮಾತ್ರವಲ್ಲದೆ, ಇನ್ನೂ ಅನೇಕ ಆ್ಯಪ್‍ಗಳಲ್ಲಿ ಜನ್ಮಭೂಮಿಯಲ್ಲಿ ಮಂದಿರದ ಬುನಾದಿ ಕಾಮಗಾರಿ ಸಹಿತ ಸುತ್ತಮುತ್ತಲ ಪ್ರದೇಶವನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಇದರಲ್ಲಿ ಹೈ ಸೆಕ್ಯೂರಿಟಿ ಝೋನ್ ಸಂಪರ್ಕಿಸುವ ಮಾರ್ಗಗಳು, ಅಲ್ಲಿರುವ ಕಟ್ಟಡಗಳನ್ನೂ ಗುರುತಿಸಲು ಸಾಧ್ಯವಾಗುತ್ತಿರುವುದರಿಂದ ಭಯೋತ್ಪಾದಕರಿಗೆ ದುಷ್ಕøತ್ಯಕ್ಕೆ ರಹದಾರಿ ಸಿಕ್ಕಂತಾಗಿದೆ.

ಆದ್ದರಿಂದ ತಕ್ಷಣವೇ ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರಗಳು ಎಚ್ಚೆತ್ತುಕೊಂಡು ಗೂಗಲ್ ಅರ್ಥ್‍ನಲ್ಲಿ ಅಯೋಧ್ಯಾ ರಾಮ್‍ಕೋಟ್ ಸಹಿತ ಜನ್ಮಭೂಮಿ ಪರಿಸರವನ್ನು ಬ್ಲಾಕ್ ಮಾಡಿಸುವ ಅಗತ್ಯವಿದೆ. ಈ ಮೂಲಕ ಸಂಭಾವ್ಯ ಎಲ್ಲ ಅಪಾಯಗಳನ್ನು ದೂರ ಮಾಡಬೇಕಾದ ಅನಿವಾರ್ಯತೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ