ನೀಟ್ ಸೆ.12ಕ್ಕೆ ಮುಂದೂಡಿಕೆ

ಹೊಸದಿಲ್ಲಿ: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು(ನೀಟ್) ಸೆ.12ಕ್ಕೆ ಮುಂದೂಡಲಾಗಿದೆ. ಈ ಮೊದಲು ಆ.1ರಂದು ನಿಗದಿಯಾಗಿತ್ತು.

ಕೊರೋನಾ ಶಿಷ್ಟಾಚಾರಗಳನ್ನು ಅನುಸರಿಸಿ ದೇಶಾದ್ಯಂತ ನೀಟ್ ನಡೆಯಲಿದೆ. ಎನ್‍ಟಿಎ ವೆಬ್‍ಸೈಟ್ ಮೂಲಕ ಜು.13ರ ಸಂಜೆ 5 ಗಂಟೆಯಿಂದ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪರೀಕ್ಷೆ ನಡೆಸುವ ನಗರಗಳ ಸಂಖ್ಯೆಯನ್ನು 155ರಿಂದ 198ಕ್ಕೆ ಹೆಚ್ಚಿಸಲಾಗುವುದು. 2020ರಲ್ಲಿ ಬಳಸಿದ 3,862 ಪರೀಕ್ಷಾ ಕೇಂದ್ರಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು. ಎಲ್ಲ ಪರೀಕ್ಷಾರ್ಥಿಗಳಿಗೆ ಫೇಸ್ ಮಾಸ್ಕ್ ನೀಡಲಾಗುವುದು. ಕೇಂದ್ರಕ್ಕೆ ಪ್ರವೇಶ ಮತ್ತು ನಿರ್ಗಮನ ಸಮಯದಲ್ಲಿ ಸ್ಪರ್ಶರಹಿತ ನೋಂದಣಿ, ಸೂಕ್ತ ನೈರ್ಮಲ್ಯೀಕರಣ, ಸಾಮಾಜಿಕ ಅಂತರ ಕಾಪಾಡುವ ಆಸನಗಳು ಇತರ ಕ್ರಮಗಳನ್ನು ಪಾಲಿಸಲಾಗುವುದು ಎಂದು ಪ್ರಧಾನ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ