ತಮಿಳುನಾಡಿಗೇ ಕಾವೇರಿ ಸಂಪೂರ್ಣ ಹಕ್ಕು! ಮೇಕೆದಾಟು ಯೋಜನೆ ಒಂದು ಸಂಚು : ಸ್ಟಾಲಿನ್

ಚೆನ್ನೈ : ತಮಿಳುನಾಡು ಗಡಿಯಂಚಿನಲ್ಲಿ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳುವ ಮೂಲಕ ಕರ್ನಾಟಕ ಸಂಚು ರೂಪಿಸಿದೆ ಎಂದು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ನೇರವಾಗಿ ಆರೋಪಿಸಿದ್ದಾರೆ.

ಇದೇ ವೇಳೆ ಕಾವೇರಿ ನದಿ ನೀರಿನ ಮೇಲೆ ಕರ್ನಾಟಕಕ್ಕಿಂತಲೂ ತಮಿಳುನಾಡಿಗೇ ಹೆಚ್ಚು ಅಕಾರವಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಸೋಮವಾರದಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮೇಕೆದಾಟು ಯೋಜನೆಯನ್ನು ವಿರೋಸುವ ಸರ್ವಾನುಮತ ನಿರ್ಣಯವೊಂದನ್ನು ಅಂಗೀಕರಿಲಾಯಿತು.

ಕಾವೇರಿ ಜಲ ಹಂಚಿಕೆ ವಿಚಾರದಲ್ಲಿ ಕರ್ನಾಟಕವೆಂದೂ ಸುಪ್ರೀಂಕೋರ್ಟ್ ನೀಡಿದ ಆದೇಶದ ಪ್ರಕಾರ ನಡೆದುಕೊಂಡಿಲ್ಲ . ಕೆ ಆರ್ ಎಸ್ , ಹಾರಂಗಿ, ಕಬಿನಿ ಮತ್ತು ಹೇಮಾವತಿ ಅಣೆಕಟ್ಟು ಭರ್ತಿಗೊಂಡು ಪ್ರವಾಹ ಉಂಟಾದ ಸಂದರ್ಭದಲ್ಲಿ ಮಾತ್ರ ತಮಿಳುನಾಡಿಗೆ ನೀರು ಹರಿದು ಬಂದಿದೆಯಷ್ಟೆ. ಈ ವಿಚಾರದಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಮೊದಲಿಂದಲೂ ಅನ್ಯಾಯವಾಗುತ್ತಲೆ ಇದೆ ಎಂದು ಸರ್ವಪಕ್ಷ ಸಭೆ ಅಭಿಪ್ರಾಯಪಟ್ಟಿತು.

ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ಕಾವೇರಿ ನದಿ ನೀರಿನ ಹಕ್ಕುಗಳಿಗೆ ಬಾಧಕವಾಗಿದೆ. ಆದ್ದರಿಂದ ಈ ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಸರ್ವಪಕ್ಷ ಸಭೆ ಆಗ್ರಹಿಸಿದೆ.

• ಸರ್ವಪಕ್ಷ ಸಭೆಯಲ್ಲಿ ಕರ್ನಾಟಕದ ವಿರುದ್ಧ ಸರ್ವಾನುಮತ ನಿರ್ಣಯ
• ಸುಪ್ರೀಂಕೋರ್ಟ್ ಆದೇಶ ಪಾಲಿಸದ ಕರ್ನಾಟಕ : ಸಿಎಂ ಆರೋಪ
• ನೀರಿನ ವಿಚಾರದಲ್ಲಿ ಎಲ್ಲ ಪಕ್ಷಗಳದ್ದೂ ಒಂದೇ ಧ್ವ ನಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ