ಹೊಸದಿಲ್ಲಿ: ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೆಮಾಕ್ರಟಿಕ್ ಪಕ್ಷದ ಜೊ ಬೈಡನ್ ಅವರ ಅಧ್ಯಕ್ಷೀಯ ಭಾಷಣದಲ್ಲಿ ಒಗ್ಗಟ್ಟು, ಪ್ರಜಾಪ್ರಭುತ್ವ ಮತ್ತು ವಿಶ್ವಾಸಕ್ಕೆ ಒತ್ತು ನೀಡಲಾಗಿತ್ತು. ಭಾರತೀಯ ಮೂಲದ ಅಮೆರಿಕ ನಿವಾಸಿ ವಿನಯ್ ರೆಡ್ಡಿ ಬರೆದಿರುವ ಭಾಷಣಕ್ಕೆ ಈಗ ಜಗತ್ತಿನೆಲ್ಲೆಡೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬುಧವಾರ ಅಧ್ಯಕ್ಷರಾಗಿ ಅಕಾರ ವಹಿಸಿಕೊಂಡ ಬಳಿಕ ಜೊ ಬೈಡನ್ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ
ಅಮೆರಿಕ ಹಿಂದೆಂದೂ ಕಂಡು ಕೇಳರಿಯದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮುಖ್ಯವಾಗಿ ಕೊರೋನಾ ಸಂಕಷ್ಟದ ಸಮಯದಲ್ಲಿ ಒಗ್ಗಟ್ಟಿನ ಮಂತ್ರದ ಆದ್ಯತೆ ವ್ಯಕ್ತವಾಯಿತು. ಅದರಲ್ಲಿಯೂ ಅಮೆರಿಕ ಒಂದಾಗಿದೆ, ಒಗ್ಗಟ್ಟಾಗಿದೆ ಎಂಬ ಮೂಲ ಧ್ಯೇಯವಾಕ್ಯಕ್ಕೆ ಆದ್ಯತೆ ನೀಡಲಾಗಿತ್ತು.
ಇದು ಅಮೆರಿಕದ ದಿನ, ಪ್ರಜಾಪ್ರಭುತ್ವದ ದಿನವಾಗಿದ್ದು, ಇತಿಹಾಸ ಮತ್ತು ವಿಶ್ವಾಸದ ದಿನವಾಗಿದೆ. ನಾವಿಂದು ಆಚರಿಸುತ್ತಿರುವ ವಿಜಯೋತ್ಸವ ಅಭ್ಯರ್ಥಿಯದಷ್ಟೇ ಅಲ್ಲ, ಬದಲಿಗೆ ಮಹತ್ವದ ಕಾರಣದ್ದಾಗಿದೆ. ಪ್ರಜಾಪ್ರಭುತ್ವ ಅಮೂಲ್ಯ ಎನ್ನುವುದನ್ನು ನಾವು ಮತ್ತೆ ಕಲಿತಿದ್ದೇವೆ. ಸದ್ಯದ ಅವಯಲ್ಲಿ ಪ್ರಜಾಪ್ರಭುತ್ವ ಮೇಲುಗೈ ಸಾಸಿದೆ ನನ್ನ ಸ್ನೇಹಿತರೆ ಎಂದು ಬೈಡನ್ ಭಾಷಣದ ಪ್ರಮುಖ ಅಂಶವಾಗಿತ್ತು.
ಮತ್ತೊಂದು ಆಸಕ್ತಿಕರ ಸಂಗತಿಯೆಂದರೆ ವಿನಯ್ ರೆಡ್ಡಿ, ಈ ಹಿಂದೆ 2013ರಲ್ಲಿ ಬೈಡನ್ ಅವರು ಉಪಾಧ್ಯಕ್ಷರಾಗಿ ಎರಡನೇ ಅವಗೆ ಪ್ರಮಾಣ ವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ ಕೂಡ ಭಾಷಣ ಬರೆದುಕೊಟ್ಟಿದ್ದರು. ಈಗ ಅಮೆರಿಕ ಅಧ್ಯಕ್ಷರಾಗಿರುವ ಬೈಡನ್ಗೆ ಭಾಷಣ ಪ್ರತಿಯನ್ನು ಬರೆದುಕೊಡುವ ಮೂಲಕ ವಿನಯ್ ರೆಡ್ಡಿ ಮೊದಲ ಭಾರತೀಯ ಮೂಲದವರೆನಿಸಿಕೊಂಡಿದ್ದಾರೆ.