ಫೆ.15ರ ವರೆಗೆ ಫಾಸ್ಟ್‍ಟ್ಯಾಗ್ ಕಡ್ಡಾಯ ಗಡುವು ವಿಸ್ತರಣೆ

ಹೊಸದಿಲ್ಲಿ:ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹಿಸಲು ಫಾಸ್ಟ್‍ಟ್ಯಾಗ್ ಕಡ್ಡಾಯಕ್ಕೆ ನೀಡಿದ್ದ ಗಡುವನ್ನು 2021ರ ಫೆಬ್ರವರಿ 15ರ ವರೆಗೆ ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ವಿಸ್ತರಿಸಿದೆ.
ಈಗಾಗಲೇ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‍ಟ್ಯಾಗ್ ಮೂಲಕ ಶೇ.75-80 ಶುಲ್ಕ ಸಂಗ್ರಹವಾಗುತ್ತಿದ್ದು, ಜನವರಿ 1ರಿಂದ ನಗದುರಹಿತ ವಹಿವಾಟು ಉತ್ತೇಜಿಸಲು ಸಂಪೂರ್ಣವಾಗಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿ, ವ್ಯಹಿವಾಟು ಖಾತ್ರಿ ಪಡಿಸಿಕೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಕಾರಿ (ಎನ್‍ಎಚ್‍ಎಐ) ನಿರ್ಧರಿಸಿತ್ತು.
ಈಗ ಕೆಲ ಪ್ರಮುಖ ಸುಧಾರಣೆಗಳಿಗಾಗಿ ಗಡುವು ವಿಸ್ತರಿಸಲಾಗಿದ್ದು, ಫೆಬ್ರವರಿ 15ರಿಂದ ಫಾಸ್ಟ್‍ಟ್ಯಾಗ್ ಕಡ್ಡಾಯವಾಗಿರಲಿದೆ ಜತೆಗೆ ಪ್ರಾಕಾರ ಶೇ.100 ನಗದು ರಹಿತ ಶುಲ್ಕ ಸಂಗ್ರಹ ಖಾತರಿಪಡಿಸಿಕೊಳ್ಳಲಿದೆ ಎಂದು ಅಕಾರಿಗಳು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ