ವಾಷಿಂಗ್ಟನ್: ಕೆಲವರಿಗೆ ಕೋಟ್ಯಂತರ ಹಣ ಸಂಪಾದಿಸುವ ಕನಸಿದ್ದರೆ, ಇನ್ನೂ ಕೆಲವರಿಗೆ ಕೋಟ್ಯಂತರ ಹಣವಿದ್ದರೂ ಅದನ್ನು ಖರ್ಚು ಮಾಡುವ ಭಾಗ್ಯವಿರುವುದಿಲ್ಲ. ಅಂತಹ ಸಾಲಿಗೆ ಅಮೆರಿಕದ ಸ್ಟೀಫನ್ ಥಾಮಸ್ ಎಂಬವರು ಸೇರುತ್ತಾರೆ. ಸ್ಟೀಫನ್ ಹಲವು ವರ್ಷಗಳಿಂದೆ ಬಿಟ್ಕಾಯಿನ್ನಲ್ಲಿ ಹೂಡಿಕೆ ಮಾಡಿದ್ದು, ಸದ್ಯ ಇವರ ಬಳಿ 7,002 ಬಿಟ್ಕಾಯಿನ್ಗಳಿದೆ. ಇದರ ಒಟ್ಟು ಮೌಲ್ಯ 1800 ಕೋಟಿ ರೂ.ನಷ್ಟಿದೆ.
ಆದರೆ ಪಾಸ್ವರ್ಡ್ ಕಳೆದಿರುವ ಕಾರಣ, ಇಷ್ಟೂ ಹಣವನ್ನು ಕಳೆದುಕೊಳ್ಳುವ ಭೀತಿಯನ್ನು ಸ್ಟೀಫನ್ ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಬಿಟ್ಕಾಯಿನ್ ಕೀಗಳನ್ನು ಐರನ್ಕೀ ಎಂಬ ಹಾರ್ಡ್ಡ್ರೈವ್ನಲ್ಲಿ ಸುರಕ್ಷಿತವಾಗಿಡಲಾಗುತ್ತದೆ. ಇದಕ್ಕೆ ಹೂಡಿಕೆದಾರನೇ ಪಾಸ್ವರ್ಡ್ ನಿಗದಿಪಡಿಸಿರುತ್ತಾನೆ. ಒಂದು ವೇಳೆ ಬಿಟ್ಕಾಯಿನ್ನಲ್ಲಿ ಹೂಡಿಕೆ ಮಾಡಿರುವ ಹಣ ಪಡೆಯಬೇಕೆಂದರೆ ಪಾಸ್ವರ್ಡ್ ಒದಗಿಸಬೇಕಾಗುತ್ತದೆ. ಇದಕ್ಕಾಗಿ 10 ಪ್ರಯತ್ನ ಮಾತ್ರವೇ ನೀಡಲಾಗುತ್ತಿದ್ದು, ಒಂದು ವೇಳೆ 10 ಬಾರಿಯು ಸರಿಯಾದ ಪಾಸ್ವರ್ಡ್ ಒದಗಿಸಲು ಸಾಧ್ಯವಾಗಲಿಲ್ಲ ಎಂದಾದರೆ, ಹಣ ಎಂದಿಗೂ ಸಿಗುವುದಿಲ್ಲ.
ಬಿಟ್ಕಾಯಿನ್ ಕ್ರಿಪೆÇ್ಟೀಕರೆನ್ಸಿ ಕಾನೂನು ಆಧಾರಿಸುವುದರಿಂದ ಪಾಸ್ವರ್ಡ್ ರೀಸೆಟ್ ಮಾಡುವ ಆಯ್ಕೆಯನ್ನೂ ನೀಡಲಾಗಿಲ್ಲ. ಈಗಾಗಲೇ 8 ಬಾರಿ ಸ್ಟೀಫನ್ ಯತ್ನಿಸಿ ವಿಫಲರಾಗಿದ್ದು, 10ನೇ ಬಾರಿಯು ಪಾಸ್ವರ್ಡ್ ಒದಗಿಸಲು ಸಾಧ್ಯವಾಗಲಿಲ್ಲ ಎಂದರೆ ಸಂಪೂರ್ಣ ಹಣ ಕಳೆದುಕೊಳ್ಳಲಿದ್ದಾರೆ.