2 ಬಾರಿ ಟ್ರಂಪ್ ಮಹಾಭಿಯೋಗ ಇತಿಹಾಸದಲ್ಲೇ ಮೊದಲು!

ಅಮೆರಿಕದ ಕ್ಯಾಪಿಟಲ್ ಮೇಲೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ಗಲಭೆಯಲ್ಲಿ ಪೊಲೀಸ್ ಅಕಾರಿ ಸೇರಿದಂತೆ ಕನಿಷ್ಠ ಐದು ಮಂದಿ ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಘಟನೆಯನ್ನು ದಂಗೆಯ ಪ್ರಚೋದನೆ ಎಂದು ಆರೋಪಿಸಿರುವ ಅಲ್ಲಿನ ಕಾಂಗ್ರೆಸ್, ಟ್ರಂಪ್‍ರನ್ನು ಎರಡನೇ ಬಾರಿಗೆ ಮಹಾಭಿಯೋಗಕ್ಕೆ ಗುರಿಪಡಿಸಿದೆ. ಆ ಮೂಲಕ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡು ಬಾರಿ ಮಹಾಭಿಯೋಗಕ್ಕೆ ಗುರಿಯಾದ ಮೊದಲ ಅಧ್ಯಕ್ಷ ಟ್ರಂಪ್ ಆಗಿದ್ದಾರೆ.

ಸಂವಿಧಾನದ ಕಠಿಣ ದಂಡಗಳಲ್ಲೊಂದು
ಅಮೆರಿಕ ಸಂವಿಧಾನವು ಅಲ್ಲಿನ ಕಾಂಗ್ರೆಸ್‍ಗೆ ನೀಡಿರುವ ಅತ್ಯಂತ ಶಕ್ತಿಯುತ ಅಸ್ತ್ರಗಳ ಪೈಕಿ ಮಹಾಭಿಯೋಗವೂ ಒಂದಾಗಿದೆ. ಈ ಅಸ್ತ್ರದ ಮೂಲಕ ಕಾಂಗ್ರೆಸ್, ಅಧ್ಯಕ್ಷ ಸೇರಿದಂತೆ ಸರ್ಕಾರದ ಅಕಾರಿಗಳವರೆಗೆ ಯಾರೇ ಆಗಲಿ ಅಕಾರವನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಪ್ರಯೋಗಿಸಬಹುದಾಗಿದೆ.
ಅಕಾರದ ದುರ್ಬಳಕೆ ಮಾಡಿರುವ ಅಧ್ಯಕ್ಷರನ್ನು ಸೆನೆಟ್ ಸದಸ್ಯರು ಮಹಾಭಿಯೋಗಕ್ಕೆ ಗುರಿಪಡಿಸಲು ಪರಿಗಣಿಸುತ್ತಾರೆ. ಜತೆಗೆ ಸಂವಿಧಾನದ ಪ್ರಕಾರ, ಅಧ್ಯಕ್ಷರು ದೇಶದ್ರೋಹ, ಲಂಚ ಇಲ್ಲವೆ ಇತರೆ ತೀವ್ರ ಸ್ವರೂಪದ ಅಪಾರಾಧ ಮತ್ತು ದುಷ್ಕøತ್ಯಗಳನ್ನು ಎಸಗಿದ್ದಾರೆಯೇ ಎನ್ನುವುದನ್ನು ಪರೀಕ್ಷಿಸಿ ಸೆನೆಟ್ ಸದಸ್ಯರು ಮಹಾಭಿಯೋಗಕ್ಕೆ ಗುರಿಪಡಿಸುತ್ತಾರೆ.
ಅದರಂತೆ, ಅಧ್ಯಕ್ಷರ ಅಪರಾಧ ಮತ್ತು ದುಷ್ಕøತ್ಯದ ತೀವ್ರತೆಯನ್ನು ಆಧರಿಸಿ, ಮಹಾಭಿಯೋಗಕ್ಕೆ ಗುರಿಪಡಿಸಲು ಸೆನೆಟ್‍ನ ಮೂರನೇ ಎರಡರಷ್ಟು ಸದಸ್ಯರ ಸರಳ ಬಹುಮತದ ಅಗತ್ಯವಿರುತ್ತದೆ.

ಟ್ರಂಪ್ ವಿರುದ್ಧ ದಂಗೆ ಪ್ರಚೋದನೆಯ ಆರೋಪ
ಟ್ರಂಪ್ ಮೇಲೆ ಅಮೆರಿಕ ಸರ್ಕಾರದ ವಿರುದ್ಧ ದಂಗೆಗೆ ಪ್ರಚೋದನೆ ನೀಡಿದರೆಂದು ಅಲ್ಲಿನ ಹಲವು ಮಾಧ್ಯಮಗಳ ಲೇಖನಗಳು ಆರೋಪಿಸಿವೆ. ಆ ಪ್ರಕಾರ, ನವೆಂಬರ್‍ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳನ್ನು ಒಪ್ಪಿಕೊಳ್ಳದ ಟ್ರಂಪ್ ಹಾಗೂ ಅವರ ಬೆಂಬಲಿಗರು ವಾರವಿಡೀ ಅಭಿಯಾನವನ್ನು ನಡೆಸಿದ್ದರು. ಅಲ್ಲದೆ, ಕ್ಯಾಪಿಟಲ್ ಹಿಲ್ ಮೇಲೆ ಮುತ್ತಿಗೆ ನಡೆಸುವುದಕ್ಕೂ ಮೊದಲು ಸ್ವತಃ ತಮ್ಮ ಭಾಷಣದಲ್ಲಿ ಟ್ರಂಪ್ ಬೆಂಬಲಿಗರಿಗೆ ಕ್ಯಾಪಿಟಲ್‍ಗೆ ತೆರಳುವಂತೆ ಕರೆ ನೀಡಿದ್ದರು ಎಂದೂ ಲೇಖನಗಳಲ್ಲಿ ಉಲ್ಲೇಖಿಸಲಾಗಿದೆ.

ಕೆಲ ದಿನಗಳ ಅಕಾರಾವ ಇದ್ದರೂ ದೋಷರೋಪಣೆ ಯೋಗ್ಯ
ಶೀಘ್ರವಾಗಿ ಟ್ರಂಪ್‍ರನ್ನು ದೋಷಾರೋಪಣೆಗೆ ಗುರಿಪಡಿಸಲು ಸೆನೆಟ್ ಮುಂದಾಗಿದೆಯಾದರೂ, ಈ ಬಗ್ಗೆ ಜನವರಿ 19(ಟ್ರಂಪ್‍ರ ಅಕಾರವಯ ಕೊನೆಯ ದಿನವಾದ ಹಿನ್ನೆಲೆ)ರವರೆಗೆ ವಿಚಾರಣೆಯನ್ನು ನಡೆಸಲು ಸೆನೆಟ್‍ಗೆ ಸಾಧ್ಯವಾಗದು. ಅಂದರೆ, ಶ್ವೇತ ಭವನವನ್ನು ತೊರೆದ ಬಳಿಕವಷ್ಟೇ ಅಧ್ಯಕ್ಷರ ವಿರುದ್ಧದ ಮಹಾಭಿಯೋಗ ಪೂರ್ಣಗೊಳ್ಳುವುದು.
ರಾಷ್ಟ್ರದ ನಾಯಕರಾಗಿ ತಮ್ಮ ಅಕಾರವನ್ನು ದುರ್ಬಳಕೆ ಮಾಡಿಕೊಂಡು ದಂಗೆಗೆ ಪ್ರಚೋದನೆ ನೀಡುವುದು ಶಾಸಕಾಂಗ ವಿಭಾಗದ ವಿರುದ್ಧ ನಡೆಯಾಗಿದೆ ಎಂದು ಡೆಮಾಕ್ರಟಿಕ್ ಪಕ್ಷದ ಸದಸ್ಯರು ಟ್ರಂಪ್ ವಿರುದ್ಧ ಆರೋಪ ಮಾಡಿದ್ದಾರೆ. ಹೀಗಾಗಿ ಟ್ರಂಪ್‍ರ ಅಕಾರಾವ ಕೆಲವೇ ದಿನಗಳಿದ್ದರೂ ಸಹ ಅವರ ವಿರುದ್ಧ ಮಹಾಭಿಯೋಗ ಯೋಗ್ಯವಾಗಿದೆ ಎನ್ನುವುದು ಡೆಮಾಕ್ರಟಿಕ್ ಸದಸ್ಯರ ವಾದವಾಗಿದೆ.

ಮತ್ತೆ ಅಕಾರಕ್ಕೇರುವುದರಿಂದ ಅನರ್ಹಗೊಳಿಸಬಹುದು
ಹಾಗೆ ನೋಡಿದರೆ, ಈ ಮಹಾಭಿಯೋಗವು ಭವಿಷ್ಯದಲ್ಲಿ ಟ್ರಂಪ್‍ರನ್ನು ಸಾರ್ವಜನಿಕ ಕಚೇರಿಯಿಂದ ಸ್ವಯಂಚಾಲಿತವಾಗಿ ಅನರ್ಹಗೊಳಿಸುವುದಿಲ್ಲ. ಆದರೆ, ಒಂದೊಮ್ಮೆ ಸೆನೆಟ್ ಅವರನ್ನು ಶಿಕ್ಷೆಗೆ ಗುರಿಪಡಿಸಿದರೆ, ಆಗ ಸಂವಿಧಾನವು ನಿರ್ಗಮಿತ ಅಧ್ಯಕ್ಷರಿಗೆ ಯಾವುದೇ ಗೌರವ ಅಥವಾಅಕಾರದ ಲಾಭವನ್ನು ಹಿಡಿದಿಡಲು ಮತಗಳನ್ನು ಚಲಾಯಿಸಲು ಅನುಮತಿಸುತ್ತದೆ. ಆಗ ಅದಕ್ಕೆ ಸೆನೆಟರ್‍ಗಳ ಸರಳ ಬಹುಮತ ಕಡ್ಡಾಯವಾಗಿ ಬೇಕಾಗುತ್ತದೆ.

ಬೈಡೆನ್ ಅಧ್ಯಕ್ಷರಾದ ಬಳಿಕವಷ್ಟೇ ಸೆನೆಟ್ ವಿಚಾರಣೆ
ಕಾಂಗ್ರೆಸ್‍ನಲ್ಲಿ ಹೆಚ್ಚಿನ ಸದಸ್ಯರನ್ನು ಹೊಂದಿರುವ ಡೆಮಾಕ್ರಟಿಕ್ ಪಕ್ಷದ ಸದಸ್ಯರು ಸಹಜವಾಗಿಯೇ ಟ್ರಂಪ್ ವಿರುದ್ಧ ಮಹಾಭಿಯೋಗ ಕುರಿತ ವಿಚಾರಣೆಯನ್ನು ಸೆನೆಟ್‍ಗೆ ಕಳುಹಿಸುವ ಬಗ್ಗೆ ತೀರ್ಮಾನಿಸಬಹುದು. ಆದರೆ, ಜ. 19ರವರೆಗೆ ಸೆನೆಟ್ ನಿಯಮಿತ ಅವೇಶನವನ್ನು ನಡೆಸುವ ಬಗ್ಗೆ ನಿರ್ಧರಿಸಿಲ್ಲ. ಅಲ್ಲದೆ, ತಕ್ಷಣವೇ ಸದನವನ್ನು ಕ್ಯಾಪಿಟಲ್‍ನ ಇನ್ನೊಂದು ಬದಿಗೆ ವರ್ಗಾಯಿಸಿದರೂ, ಇದಕ್ಕೂ ಮೊದಲು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ನಾಯಕರ ನಡುವೆ ಒಪ್ಪಂದವನ್ನು ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಹೀಗಾಗಿ ಬೈಡೆನ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವವರೆಗೂ ಯಾವುದೇ ಪ್ರಕ್ರಿಯೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ.
ಬೈಡೆನ್ ಮೊದಲ ದಿನವೇ ವಿಚಾರಣೆ ಸಾಧ್ಯತೆ
ಮಹಾಭಿಯೋಗದ ಕಾಯ್ದೆಗಳು ಅತಿ ಹೆಚ್ಚು ಹಕ್ಕುಗಳನ್ನು ಒಳಗೊಂಡಿರುವುದರಿಂದ ಒಮ್ಮೆ ಮಹಾಭಿಯೋಗ ಕುರಿತು ದೂರು ಸ್ವೀಕರಿಸದ ಬಳಿಕ ತಕ್ಷಣವೇ ಆ ಸಮಸ್ಯೆಯನ್ನು ಬಗೆಹರಿಸಲು ಸೆನೆಟ್ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಬೇಕು .ಈ ಬಗ್ಗೆ ದಶಕಗಳಿಂದ ಜಾರಿಯಲ್ಲಿರುವ ನಿಯಮಗಳಲ್ಲಿ ವಿಚಾರಣೆಯನ್ನು ಸೆನೆಟ್ ಪರಿಗಣಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬೈಡೆನ್ ಅವರು ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ದಿನವೇ ಮಹಾಭಿಯೋಗ ಕುರಿತು ಸೆನೆಟ್‍ನಲ್ಲಿ ವಿಚಾರಣೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ