ಅಂತರಿಕ್ಷಕ್ಕೆ ಹೊರಟಿದ್ದ ಸಮೋಸ ಪ್ಯಾಕೇಜ್ ಫ್ರಾನ್ಸ್‍ನಲ್ಲಿ ಪತ್ತೆ

ಪ್ಯಾರಿಸ್: ಇಂಗ್ಲೆಂಡಿನಲ್ಲಿ ರೆಸ್ಟೋರೆಂಟ್ ಮಾಲೀಕರಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಂತರಿಕ್ಷಕ್ಕೆ ಹಾರಿಬಿಟ್ಟಿದ್ದ ಸಮೋಸಗಳ ಪ್ಯಾಕೇಜ್ ಫ್ರಾನ್ಸ್‍ನಲ್ಲಿ ಲ್ಯಾಂಡ್ ಆಗಿದೆ.
ಚಾಯ್‍ವಾಲಾ ರೆಸ್ಟೋರೆಂಟ್‍ನ ನೀರಜ್ ಗಧೇರ್ ಎಂಬುವರು ಅಂತರಿಕ್ಷಕ್ಕೆ ಸಮೋಸ ಕಳುಹಿಸಬೇಕು ಎಂದು ಅವುಗಳನ್ನು ಪ್ಯಾಕ್ ಮಾಡಿ ಹೀಲಿಯಂ ವೆದರ್ ಬಲೂನ್ ಕಟ್ಟಿ ಹಾರಿಬಿಟ್ಟದ್ದರು.
ಆದರೆ, ಜಿಪಿಎಸ್ ಕಾರ್ಯನಿರ್ವಹಿಸುವುದು ನಿಲ್ಲಿಸಿದ್ದರಿಂದ ಫ್ರಾನ್ಸ್‍ನ ಕೈಸ್‍ನ ಅರಣ್ಯ ಪ್ರದೇಶದಲ್ಲಿ ಸಮೋಸ ಪ್ಯಾಕೇಜ್ ಟ್ರ್ಯಾಕ್ ಮಾಡಿದ್ದು, ಇನ್‍ಸ್ಟಾಗ್ರಾಂ ಬಳಕೆದಾರ ಅಲೆಕ್ಸ್ ಮ್ಯಾಥನ್ ಎಂಬುವರಿಂದ ಲ್ಯಾಂಡ್ ಆದ ಸುದ್ದಿಯು ನೀರಜ್‍ಗೆ ತಿಳಿದಿದೆ.
ಸಮೋಸ ಇದ್ದ ಪ್ಯಾಕೇಜ್‍ಗೆ ಹೀಲಿಯಂ ವೆದರ್ ಬಲೂನ್‍ಗೆ ಜಿಪಿಎಸ್ ಹಾಗೂ ಪೆÇ್ರ ಕ್ಯಾಮೆರಾ ಅಳವಡಿಸಲಾಗಿತ್ತು. ಜಿಪಿಎಸ್ ಸ್ಥಗಿತವಾದರೂ ಈ ಕ್ಯಾಮೆರಾದಿಂದಲೇ ಪ್ಯಾಕೇಜ್ ಮಾಹಿತಿ ದೊರೆತಿದೆ ಎಂದು ತಿಳಿದುಬಂದಿದೆ.
ಮೊದಲು ನಾನು ಅಂತರಿಕ್ಷಕ್ಕೆ ಸಮೋಸ ಕಳುಹಿಸುತ್ತೇನೆ ಎಂದಾಗ ಎಲ್ಲರೂ ನಕ್ಕಿದ್ದರು. ಆದರೆ, ಈ ಕುರಿತು ಅಧ್ಯಯನ ಮಾಡಿ ಬಲೂನ್ ಮೂಲಕ ಕಳುಹಿಸುವ ಪ್ರಯತ್ನ ಮಾಡಿದ್ದೆ. ಆದರೆ, ಅದು ಫ್ರಾನ್ಸ್‍ನಲ್ಲಿ ಸಿಕ್ಕಿದ್ದು, ವ್ಯಕ್ತಿಯೊಬ್ಬರು ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ ಎಂಬುದಾಗಿ ನೀರಜ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ