ಮೈಸೂರು: ಪ್ರಧಾನಿ ನರೇಂದ್ರಮೋದಿ ಅವರು ಶ್ರೀರಾಮನಲ್ಲ, ಶ್ರೀಕೃಷ್ಣ ಇದ್ದಹಾಗೆ. ಅವರು ಅಕಾರಕ್ಕೆ ಬಂದಾಗ ದೇಶದಲ್ಲಿರುವ ಕೆಲವು ಒಪಿನಿಯನ್ ಮೇಕರ್ಗಳು ಮೋದಿ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸ ಮಾಡಿದರು. ಆದರೆ, ಅದು ನಡೆಯಲ್ಲ ಎಂದು ಖ್ಯಾತ ಕಾದಂಬರಿಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ತಿಳಿಸಿದರು.
ಜೆಎಲ್ ಬಿ ರಸ್ತೆಯಲ್ಲಿರುವ ಮಾಧವ ಕೃಪಾದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮೈಸೂರು ಮಹಾನಗರದಲ್ಲಿ ಏರ್ಪಡಿಸಿದ್ದ ರಾಮಮಂದಿರ ನಿರ್ಮಾಣ ನಿ ಸಮರ್ಪಣಾ ಅಭಿಯಾನ ಕಾರ್ಯಾಲಯದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ರಾಮಾಯಣದಲ್ಲಿ ರಾಮನ ದಕ್ಷತೆ ಹಾಗೂ ಪ್ರಾಮಾಣಿಕತೆಯ ಆಡಳಿತವನ್ನು ಸಹಿಸಲಾಗದ ಕೆಲವು ಒಪಿನಿಯನ್ ಮೇಕರ್ಗಳು ರಾಮನ ಬಗ್ಗೆ ಭ್ರಷ್ಟಾಚಾರ, ನಡತೆ ಬಗ್ಗೆ ಮಾತನಾಡಲು ಸಾಧ್ಯವಾಗದೆ, ರಾವಣ ಅಪಹರಿಸಿದ್ದ ಎಂಬ ಕಾರಣಕ್ಕೆ ಸೀತೆಯನ್ನು ರಾಮ ಮತ್ತೆ ತನ್ನ ಸಿಂಹಾನಸಕ್ಕೆ ಕರೆತಂದು ಕೂರಿಸಿದರೆ ತಪ್ಪಾಗುತ್ತದೆ ಎಂದು ಅಪಪ್ರಚಾರವನ್ನು ಸೀತೆಯ ವಿರುದ್ಧ ನಡೆಸಿ, ರಾಮ ಸೀತೆಯನ್ನು ಪರಿತ್ಯಜಿಸುವಂತೆ ಮಾಡಿದರು.
ರಾಮ ಮತ್ತು ಸೀತೆ ಎಲ್ಲವನ್ನು ಸಹಿಸಿಕೊಂಡರು:
ಸೀತೆ ಹಾಗೂ ರಾಮರು ನೊಂದುಕೊಳ್ಳುವಂತೆ, ತಮ್ಮನ್ನು ತಾವೇ ಪರಿತಪಿಸುವಂತೆ ಮಾಡಿದರು. ರಾಮ ಹಾಗೂ ಸೀತೆ ಎಲ್ಲವನ್ನೂ ಸಹಿಸಿಕೊಂಡರು. ತಮ್ಮ ನೋವನ್ನು ತಾವೇ ನುಂಗಿಕೊಂಡರು. ಅಂದಿನಿಂದಲೂ ಒಪಿನಿಯನ್ ಮೇಕರ್ಗಳು ಜನರಲ್ಲಿ ತಮ್ಮ ವಿಚಾರವನ್ನು, ಅಭಿಪ್ರಾಯವನ್ನು ಹೇಳುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈಗಲೂ ಮಾಡ್ತಾ ಇದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ರಾಮನಲ್ಲ, ಕೃಷ್ಣನಂತೆ ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ರಾಮನು ಆದರ್ಶ ಪುರುಷ. ಆತನಲ್ಲಿ ಆದರ್ಶ ಹೆಚ್ಚಾಗಿತ್ತು. ಕೃಷ್ಣ ಕಳಸವಿಟ್ಟಂತೆ. ವೀರನೂ, ಶೂರನೂ ಆದ ರಾಮ ಆದರ್ಶ ಪಾಲನೆ ಮಾಡಲು ಸೀತೆಯನ್ನು ಕಾಡಿಗೆ ಕಳುಹಿಸಿದ ರಾಮನ ನಿರ್ಧಾರ ಆದರ್ಶದ ರೂಪದಲ್ಲಿ ನೋಡಿದಾಗ ಸರಿಯಾಗಿದ್ದರೂ, ಸೀತೆಯ ವಿಚಾರ ಗಮನಿಸಿದಾಗ ತಪ್ಪು ಅನ್ನಿಸುತ್ತದೆ. ನಾನು ಉತ್ತರಕಾಂಡ ಪುಸ್ತಕ ಬರೆಯುವಾಗ ಸೀತೆ ದೃಷ್ಟಿಯಿಂದ ಬರೆದಿದ್ದೇನೆ ಎಂದರು.
ಬೇರೆ ಧರ್ಮದಲ್ಲೂ ವಿಶಾಲ ಹೃದಯದವರಿದ್ದಾರೆ :
ಹಿಂದೂ ಧರ್ಮದವರು ಅನ್ಯ ಧರ್ಮದವರನ್ನೂ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವಂತಹ ವಿಶಾಲ ಹೃದಯವಂತರು. ನಾವು ಎಲ್ಲಾ ಧರ್ಮದವರ ದೇವರ ಸ್ವರೂಪವನ್ನು ಒಪ್ಪಿಕೊಳ್ಳುತ್ತೇವೆ. ಆದರೆ , ಇಂತಹ ವಿಶಾಲ ಹೃದಯ ಅನ್ಯ ಧರ್ಮದವರಲ್ಲಿ ಇಲ್ಲ, ಅವರ ದೇವರನ್ನು ಯಾರಾದರೂ ಟೀಕೆ ಮಾಡಿದರೆ, ಅಂತಹವರನ್ನು ನಿರ್ಧಾಕ್ಷಿಣ್ಯವಾಗಿ ಕೊಂದು ಹಾಕಿ ಬಿಡುತ್ತಾರೆ.
ಆದರೆ ನಾವು ಹಿಂದುಗಳ ಹಾಗಲ್ಲ ರಾಮ,ಕೃಷ್ಣ,ಶಿವನನ್ನು ಟೀಕೆ ಮಾಡಬಹುದು. ಅಂತಹ ಸ್ವಾತಂತ್ರ್ಯ ನಮ್ಮ ಹಿಂದು ಧರ್ಮದಲ್ಲಿದೆ. ಇಂತಹ ಹೃದಯ ವೈಶಾಲ್ಯವನ್ನು ಅನ್ಯಧರ್ಮಿಯರಲ್ಲೂ ಹುಟ್ಟಿಸಬೇಕು, ಬೇರೆ ಧರ್ಮದವರೂ ಹಿಂದು ಧರ್ಮ ಸೇರಿದಂತೆ ಅನ್ಯ ಧರ್ಮದವರ ದೇವರ ಸ್ವರೂಪವನ್ನು ಒಪ್ಪಿಕೊಂಡರೆ, ಧರ್ಮ, ಧರ್ಮಗಳ ನಡುವೆ, ಹೊಡೆದಾಟ, ಬಡಿದಾಟ, ಸಂಘರ್ಷಗಳು ಇರುವುದಿಲ್ಲ ಎಂದು ತಿಳಿಸಿದರು.
ಆಧ್ಯಾತ್ಮಿಕ ಮಂದಿರವಾಗಲಿ:
ಅಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮಮಂದಿರ ಕೇವಲ ದೇವರ ಮಂದಿರವಾಗಬಾರದು. ಅದು ಆಧ್ಯಾತ್ಮಿಕ ಮಂದಿರವಾಗಬೇಕು. ಅಲ್ಲಿಗೆ ಬರುವವರೆಲ್ಲಾ ಆಧ್ಯಾತ್ಮಿಕವನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಆರ್ಎಸ್ಎಸ್ನ ಹಿರಿಯ ಪ್ರಚಾರಕರಾದ ಕೃಷ್ಣಪ್ರಸಾದ್ ಅವರು ಮಾತನಾಡಿ, ಭಾರತದ ಜನಜೀವನದ ಅವಿಭಾಜ್ಯ ಅಂಗವಾಗಿದ್ದಾನೆ ರಾಮ. ಪ್ರತಿಯೊಂದು ಹಂತದಲ್ಲೂ ಜನರು ರಾಮನನ್ನು ನೆನೆಯುತ್ತಾರೆ. ರಾಮನಿಗೆ ಜÁತಿಯ ಚೌಕಟ್ಟು ಇಲ್ಲ, ಅದನ್ನು ಮೀರಿ ಬೆಳೆದಿದ್ದಾನೆ.ಯಾವುದೇ ವಂಶ ವೃಕ್ಷ ತೆಗೆದು ನೋಡಿದರೂ, ಅಲ್ಲಿ ರಾಮನ ಹೆಸರು ಬಂದೇ ಬರುತ್ತದೆ. ರಾಮನು ಜನರ ನಡುವೆ, ಜನಾನುರಾಗಿ ಬೆಳೆದವನು. ಎಲ್ಲರ ವ್ಯಕ್ತಿತ್ವವನ್ನು ಪ್ರಭಾವಿಸಿದ್ದಾನೆಂದರು.
ರಾಮನದು ಮಾದರಿ ವ್ಯಕ್ತಿತ್ವ:
ಎಲ್ಲರಿಗೂ ಮಾದರಿಯಾಗಿ, ಭಾರತಕ್ಕೆ ಮಾಲ್ಯಗಳ ಆದರ್ಶವಾಗಿದ್ದಾರೆ. ಅಂತಹ ಆದರ್ಶನ ಪುರುಷ ರಾಮನ ಮಂದಿರಯನ್ನು ಅಯೋಧ್ಯಯಲ್ಲಿ ನಿರ್ಮಿಸಲೇಬೇಕಾಗಿದೆ. ಜನರ ಮನಸ್ಸುಗಳಲ್ಲಿ ರಾಮನ ಮೂಡಿಸಿ, ಆ ಮೂಲಕ ಮನಸುಗಳನ್ನು ಜೋಡಿಸುವ ಮೂಲಕ ರಾಮನ ಮಂದಿರವನ್ನು ಕಟ್ಟೋಣ, ಇದಕ್ಕಾಗಿ ಅಭಿಯಾನವನ್ನು ನಡೆಸಲಾಗುತ್ತಿದ್ದು, ಇದರ ಮೂಲಕ ಮನೆ, ಮನೆಗೆ ಹೋಗಿ ಜನರ ಮನಸ್ಸುಗಳನ್ನು ಮುಟ್ಟುವ ಕೆಲಸ ಮಾಡೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕರ್ನಾಟಕದ ಅಧ್ಯಕ್ಷರಾದ ಮ.ವೆಂಕಟರಾಮು, ಆರ್ಎಸ್ಎಸ್ನ ಮೈಸೂರು ಭಾಗದ ಸಂಘ ಚಾಲಕರಾದ ಡಾ.ವಾಮನ್ ರಾವ್ ಭಾಪಟ್, ಪ್ರಚಾರಕರಾದ ಅಕ್ಷಯ್ ಮತ್ತಿತರರು ಉಪಸ್ಥಿತರಿದ್ದರು.