ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲು ಹೇಳಿಕೆ ಗೂಂಡಾಗಿರಿ, ಭ್ರಷ್ಟತನದಿಂದಲೇ ಕಾಂಗ್ರೆಸ್ ಅವನತಿ

ಮೈಸೂರು: ಕಾಂಗ್ರೆಸ್ ನಾಯಕರು ಅಕಾರಕ್ಕಾಗಿ ನಡೆಸುವ ಗೂಂಡಾಗಿರಿ ಹಾಗೂ ಭ್ರಷ್ಟಾಚಾರದ ಸಂಸ್ಕøತಿಯಿಂದಾಗಿ ಜನರು ಆ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ಹೀಗಾಗಿಯೇ ಕಾಂಗ್ರೆಸ್ ಅವನತಿ ಹೊಂದುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲು ಹೇಳಿದರು.
ನಗರದಲ್ಲಿ ನಡೆದ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿ, ಇಂದಿರಾ ಗಾಂ ಕಾಲದಲ್ಲಿ ಒಂದು ಲೈಟ್ ಕಂಬ ನಿಲ್ಲಿಸಿದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂಬಂತಹ ಸ್ಥಿತಿಯಿತ್ತು. ಆಗ 1,900 ಶಾಸಕರು ಇದ್ದರು. ಆದರೆ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ, ಅಹಂಕಾರದಿಂದ ವರ್ತಿಸಿ, ಗೂಂಡಾಗಿರಿ ನಡೆಸುತ್ತಿದ್ದು, ಶೋಷಿತ ಸಮುದಾಯ, ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡಲು ವಿಫಲರಾದ ಕಾರಣ, ಜನರು ಅವರನ್ನು ಲೋಕಸಭೆ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಅಲ್ಲದೆ ವಿಪಕ್ಷ ಸ್ಥಾನ ಗಳಿಸಲು ಸಹ ಅದು ವಿಫಲವಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ಮುಸ್ಲಿಮರು, ದಲಿತರ ಹೆಸರು ಹೇಳಿಕೊಂಡು ರಾಜಕಾರಣ ಮಾಡಿಕೊಂಡು ಬಂದರು. ಅಕಾರಕ್ಕೆ ಬರುತ್ತಿದ್ದಂತೆ ಆ ಸಮುದಾಯಗಳ ಅಭಿವೃದ್ಧಿಯನ್ನು ಕಡೆಗಣಿಸಿಬಿಟ್ಟರು. ರಾಜ್ಯದಲ್ಲಿ ಅಹಿಂದ ಸಮಾವೇಶ ನಡೆಸುವ ಮೂಲಕ ರಾಜಕೀಯವಾಗಿ ಬೆಳೆದು ಮುಖ್ಯಮಂತ್ರಿ ಸ್ಥಾನಕ್ಕೇರಿದ ಸಿದ್ಧರಾಮಯ್ಯನವರು ತಮಗೆ ರಾಜಕೀಯ ಶಕ್ತಿ ತುಂಬಿದ ಸಮುದಾಯಗಳನ್ನೇ ಮರೆತರು. ಅದರ ಪರಿಣಾಮವೇ ಕಾಂಗ್ರೆಸ್ ನೆಲೆ ಕಳೆದುಕೊಳ್ಳುತ್ತಿದೆ ಎಂದರು.
ಕಾಂಗ್ರೆಸ್ ಸಿಎಎ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಮಾತನಾಡುತ್ತಿತ್ತು. ಆದರೆ ಅಕಾರದಲ್ಲಿದ್ದಾಗ ಆ ಕಾಯ್ದೆ ಜಾರಿಗೆ ತರುವ ಪ್ರಯತ್ನ ಮಾಡಲಿಲ್ಲ, ಬಿಜೆಪಿ ಅಕಾರಕ್ಕೆ ಬರುತ್ತಿದ್ದಂತೆ ಅವುಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ರೈತರಿಗೆ ಮಾರಾಟದ ಸ್ವಾತಂತ್ರ್ಯ ನೀಡಲು ಕೃಷಿ ಕಾಯ್ದೆ ಜಾರಿಗೊಳಿಸಿದೆ. ಆದರೆ ಅಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರು ಕೃಷಿಕರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕಲ್ಲು ಹೊಡೆಯುವ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಗಲಭೆ ಸೃಷ್ಟಿಸುವ ರಾಜಕಾರಣ ಮಾಡುತ್ತಿದೆ. ಆ ಪಕ್ಷದ ನಾಯಕರು ಅಕಾರ ಕಳೆದುಕೊಂಡು ಗೂಂಡಾಗಿರಿ ಮಾಡುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಅಕಾರ ಹಿಡುವುದಕ್ಕಾಗಿ ಗೂಂಡಾಗಿರಿ ರಾಜಕಾರಣ ಮಾಡುತ್ತಿದ್ದಾರೆ. 12 ಶಾಸಕರು ರಾಜೀನಾಮೆ ನೀಡಲು ಹೋಗುತ್ತಿದ್ದಾಗ, ಅವರನ್ನು ತಡೆದು ಹಲ್ಲೆ ಮಾಡಿ ಗೂಂಡಾಗಿರಿ ಮಾಡಿದರು. ಈಗ ವಿಧಾನಪರಿಷತ್‍ನಲ್ಲಿ ಗೂಂಡಾಗಿರಿ ಮಾಡಿದ್ದಾರೆ ಎಂದು ಹೇಳಿದರು.
ವಿಧಾನಪರಿಷತ್ ದೇವಾಲಯವಿದ್ದಂತೆ. ಅಲ್ಲಿ ಜ್ಞಾನಿಗಳು, ಗೌರವಯುತರು ಇರುತ್ತಾರೆ. ಅದು ಅತ್ಯುನ್ನತವಾದ ಪೀಠವಿದ್ದಂತೆ. ಆದರೆ ಈಗ ಅಲ್ಲೂ ಕೂಡ ಕಾಂಗ್ರೆಸ್ ಗೂಂಡಾಗಿರಿ ಮಾಡಿದೆ. ಆ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಈ ಗೂಂಡಾಗಿರಿ ಸಂಸ್ಕøತಿಯಿಂದಲೇ ಈಗ ಕಾಂಗ್ರೆಸ್ ಅಕಾರಕ್ಕಾಗಿ ಗೂಂಡಾಗಿರಿ ಮಾಡುವ, ಹಲ್ಲೆ ನಡೆಸುವ ಪಕ್ಷವಾಗಿ ಉಳಿದುಕೊಂಡಿದೆ ಎಂದು ಕುಟುವಾಗಿ ಟೀಕಿಸಿದರು.

500 Internal Server Error

Internal Server Error

The server encountered an internal error or misconfiguration and was unable to complete your request.

Please contact the server administrator, webmaster@push.vartamitra.com and inform them of the time the error occurred, and anything you might have done that may have caused the error.

More information about this error may be available in the server error log.

Additionally, a 500 Internal Server Error error was encountered while trying to use an ErrorDocument to handle the request.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ