ಲಡಾಖ್ ಬಿಕ್ಕಟ್ಟು ಸೃಷ್ಟಿಸಿದ್ದ ಚೀನಿ ಕಮಾಂಡರ್ ವಜಾ

ಬೀಜಿಂಗ್:ಪೂರ್ವಲಡಾಖ್‍ನಲ್ಲಿ ಭಾರತ-ಚೀನಾ ನಡುವೆ ಸೃಷ್ಟಿಯಾಗಿರುವ ಗಡಿವಿವಾದದ ರೂವಾರಿ ಎನ್ನಲಾಗುವ, ಪೀಪಲ್ಸ್ ಲಿಬರೇಷನ್ ಆರ್ಮಿಯ ಪಶ್ಚಿಮವಿಭಾಗದ ಕಮಾಂಡರ್ ಜನರಲ್ ಜಾಹೋ ಜೋಂಗಿಯನ್ನು ಚೀನಾ ಅಧ್ಯಕ್ಷ, ಕ್ಸಿ-ಜಿನ್‍ಪಿಂಗ್‍ಉಚ್ಚಾಟಿಸಿದ್ದಾರೆ.
ಪಿಎಲ್‍ಎಪಶ್ಚಿಮ ವಿಭಾಗವು ಚೀನಾ-ಭಾರತ ಗಡಿ ಕಾವಲು ಜವಾಬ್ದಾರಿಯನ್ನು ಹೊಂದಿದ್ದು, ಈಗ ಪಡೆಯ ಕಮಾಂಡರ್ ಆಗಿ ಜನರಲ್ ಜಾಂಗ್ ಕ್ಸುಡಾಂಗ್‍ನನ್ನು ನೇಮಕಗೊಳಿಸಲಾಗಿದೆ. ಜಾಂಗ್ ಈ ವರೆಗೆ ಭಾರತದ ಗಡಿಭಾಗದಲ್ಲಿ ಎಂದಿಗೂ ಕಾರ್ಯನಿರ್ವಹಿಸಿರುವ ಅನುಭವ ಹೊಂದಿಲ್ಲವೆಂದು ಮೂಲಗಳು ತಿಳಿಸಿವೆ.
ಭೂತಾನ್‍ಸ್ವಾಮ್ಯದ ಪ್ರದೇಶದಲ್ಲಿ ಭಾರತದ ಗಡಿಗೆ ಸಮೀಪವಾಗಿ ರಸ್ತೆ ನಿರ್ಮಿಸಲು ಯೋಜಿಸಿದ್ದ ಪಿಎಲ್‍ಎ ವಿರುದ್ಧ ಭಾರತೀಯ ಪಡೆಗಳು ಆಕ್ಷೇಪ ವ್ಯಕ್ತಪಡಿಸಿದ್ದ 2017ರ ಡೋಕ್ಲಾಮ್ ಬಿಕ್ಕಟ್ಟಿನ ಸಂದರ್ಭದಲ್ಲೂ ಚೀನಾ ಪಶ್ಚಿಮ ಪಡೆಯ ನೇತೃತ್ವವನ್ನೂ ಈಗ ಉಚ್ಚಾಟನೆಗೊಂಡಿರುವ ಮಾಜಿ ಕಮಾಂಡರ್ ಜಾಹೋ ವಹಿಸಿದ್ದರು. ಇದಾದ ಬಳಿಕ ಈಗ ಗ್ಯಾಲ್ವಾನ್ ಕಣಿವೆಯಲ್ಲಿ ಏರ್ಪಟ್ಟಿರುವ ಬಿಕ್ಕಟಿನ ಸಂದರ್ಭದಲ್ಲೂ ಚೀನಾಪಡೆಯನ್ನು ಜಾಹೋ ಮುನ್ನಡೆಸಿದ್ದರು. ಅವರ ಉಚ್ಛಾಟನೆಯ ಕಾರಣಗಳ ಬಗ್ಗೆ ಸರ್ಕಾರ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲವೆಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ