ಬೆಂಗಳೂರು: ಕೇರಳ ರಾಜ್ಯದ ಪಾಲಕ್ಕಾಡ್ ನಗರಪಾಲಿಕೆ ಮತ್ತು ಪಂದಳ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಬಿಜೆಪಿ ಸಾಸಿದ ಅಭೂತ ಪೂರ್ವ ಗೆಲುವಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹರ್ಷ ವ್ಯಕ್ತಪಡಿಸಿದರು.
ಪಾಲಕ್ಕಾಡ್ ನಗರಪಾಲಿಕೆಯ ಒಟ್ಟು 29ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಹಾಗೂ ಪಂದಳ ಮುನ್ಸಿಪಾಲಿಟಿಗಳ ಒಟ್ಟು 33 ಸ್ಥಾನಗಳ ಪೈಕಿ 17ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಈ ಗೆಲುವು ಕೇರಳದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಕಾರಕ್ಕೆ ಏರುವಂತೆ ಮಾಡಲು ಕಾರ್ಯಕರ್ತರಲ್ಲಿ ಇನ್ನಷ್ಟು ಉತ್ಸಾಹ ತುಂಬಲಿದೆ ಎಂದರು.
ತೂಡುಪುಳ ಮುನ್ಸಿಪಾಲಿಟಿಯಿಂದ ಲಕ್ಷ್ಮೀ ಸಂದೀಪ್, ತಿರುವನಂತಪುರ ನಗರ ಸಭೆಯಿಂದ ಎನ್ಡಿಎ ಅಭ್ಯರ್ಥಿ ವಿ.ವಿ.ರಾಜೇಶ್, ಪೆರ್ಲಾ ಬ್ಲಾಕ್ ಪಂಚಾಯಿತಿಯಿಂದ ಬಟ್ಟು ಶೆಟ್ಟಿ ಕಾಟುಕುಕ್ಕೆ, ಮಂಜೇಶ್ವರ ಪಂಚಾಯಿತಿಗೆ ಅಶ್ವಿನಿ ಪಜರಿ, ಕುಂಬಳೆ ಪಂಚಾಯಿತಿಗೆ ಪುಷ್ಪಲತಾ ಶೆಟ್ಟಿ ಅವರು ಆಯ್ಕೆಯಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಳಿನ್ ಕುಮಾರ್ ಕಟೀಲ್, ಗೆಲುವಿಗೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಕೇರಳ ರಾಜ್ಯ ಸಹ ಪ್ರಭಾರಿ ಸುನಿಲ್ ಕುಮಾರ್ ಅವರನ್ನು ಅಭಿನಂದಿಸಿದರು.