ಮಂಗಳೂರು: ಭಾರತೀಯ ಜನತಾ ಪಾರ್ಟಿ ಚುನಾವಣಾ ಸಂದರ್ಭ ಘೋಷಿಸಿದಂತೆ ಹಾಗೂ ಇತ್ತೀಚೆಗೆ ಬಿಜೆಪಿ ಕಾರ್ಯಕಾರಿಣಿಯಲ್ಲಿ ನಿರ್ಣಯಿಸಿದಂತೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆಗೆ ವಿಧಾನಸಭೆಯ ಅನುಮೋದನೆ ಪಡೆದಿದೆ. ಅದೇ ರೀತಿ ಮುಂದಿನ ಅವೇಶನದಲ್ಲಿ ಮತಾಂತರ ತಡೆ ಕಾನೂನು ಕೂಡ ಜಾರಿಗೆ ತರಲಾಗುವುದು ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆಗೆ ವಿಧಾನಸಭೆ ಅನುಮೋದನೆ ಪಡೆದ ಸಂಭ್ರಮದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ದ.ಕ. ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗ ಗುರುವಾರ ಗೋ ಮಾತೆಗೆ ಆರತಿ ಬೆಳಗಿ ಗೋ ಪೂಜೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಗೋ ಸಂಸ್ಕತಿ ಉಳಿಸುವುದಕ್ಕೆ ಗೋಹತ್ಯೆ ನಿಷೇಧ ಮಸೂದೆ ತರಲಾಗಿದೆ. ಈ ಮಸೂದೆ ಜಾರಿಗೆ ತರುವ ಮೂಲಕ ಜನತೆಯ ಭಾವನೆಗೆ ಶಕ್ತಿ ತುಂಬುವ ಕೆಲಸವನ್ನು ಬಿಜೆಪಿ ಮಾಡಿದೆ. ಈಗಾಗಲೇ ಇರುವ ಗೋಹತ್ಯೆ ನಿಷೇಧ ಕುರಿತ ಕಾನೂನು ಅಷ್ಟು ಪ್ರಬಲವಾಗಿಲ್ಲದ ಕಾರಣ ಅವಶ್ಯಕ ತಿದ್ದುಪಡಿಯೊಂದಿಗೆ ಕಠಿಣ ಕಾನೂನು ರೂಪಿಸಲಾಗಿದೆ ಎಂದವರು ಹೇಳಿದರು.
ಬಿ.ಎಸ್.ಯಡಿಯೂರಪ್ಪನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರೂಪಿಸಿದ ಗೋಹತ್ಯೆ ನಿಷೇಧ ತಿದ್ದುಪಡಿ ಮಸೂದೆಯನ್ನು ಸಿದ್ದರಾಮಯ್ಯನವರು ಸಿಎಂ ಆದ ತಕ್ಷಣ ತೆಗೆದುಹಾಕಿದರು. ಆಗ ಸಚಿವ ಸಂಪುಟವೇ ರಚನೆಯಾಗಿರಲಿಲ್ಲ. ಈಗ ಸರ್ಕಾರ ಅವೇಶನದಲ್ಲಿ ಮಸೂದೆ ಮಂಡಿಸುವುದಾಗಿ ಹೇಳಿಯೇ ಜಾರಿಗೆ ತಂದಿದೆಯೇ ಹೊರತು ಏಕಾಏಕಿ ಜಾರಿಗೊಳಿಸಿಲ್ಲ. ವೋಟ್ಬ್ಯಾಂಕ್ನ ತುಷ್ಟೀಕರಣ ನೀತಿ ಸಲುವಾಗಿ ಕಾಂಗ್ರೆಸ್ ಈಗ ಮಸೂದೆ ಬಗ್ಗೆ ಚರ್ಚೆ ಬೇಕು ಎನ್ನುತ್ತಿದೆ. ಕಾಂಗ್ರೆಸ್ಗೆ ಕೃಷಿ ಹಾಗೂ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಆದ್ದರಿಂದ ಗೋಹತ್ಯೆ ತಡೆ ಮಸೂದೆಯನ್ನು ವಿರೋಸಿದೆ. ಇನ್ನಾದರೂ ಗೋವಿನ ಕುರಿತಾದ ತನ್ನ ನಿಲುವನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ನಳಿನ್ ಕುಮಾರ್ ಆಗ್ರಹಿಸಿದರು.
ಸಗಣಿ ಎತ್ತಿ ಪ್ರಯೋಜನವಿಲ್ಲ!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಗಣಿ ಎತ್ತಿನೆ ಎಂದು ಹೇಳುತ್ತಾರೆ, ಆದರೆ ಸಗಣಿ ಎತ್ತಿ ನಾಟಕ ಮಾಡುವುದರಿಂದ ಪ್ರಯೋಜನವಿಲ್ಲ. ಗೋ ಆರಾಧನೆ ಮಾಡಬೇಕು ಎಂದು ನಳಿನ್ ಹೇಳಿದರು.
ಈ ಹಿಂದೆ ತಲ್ವಾರ್ ಹಿಡಿದು ಗೋ ಕಳ್ಳತನ ಮಾಡಿದವರನ್ನು ಕಾಂಗ್ರೆಸ್ ಬಂಸಿರಲಿಲ್ಲ. ಹಾಗಾಗಿ ಸಿದ್ದರಾಮಯ್ಯ ಗೋಹತ್ಯೆ ನಿಷೇಧದ ಪರವಾಗಿರುತ್ತಾರೆ ಎಂಬ ನಂಬಿಕೆ ಇಲ್ಲ. ಹೋರಾಟ ನಡೆಸುತ್ತೇವೆ ಎನ್ನುವ ಅವರಿಗೆ ಹೋರಾಟ ಮಾಡುವ ವಿಚಾರದಲ್ಲಿ ಸಾಮಾನ್ಯ ನವೂ ಇಲ್ಲ ಎಂದು ನಳಿನ್ ಲೇವಡಿ ಮಾಡಿದರು.
ಕಾಂಗ್ರೆಸ್ ಯಾವಾಗಲೂ ಗೋ ಹಂತಕರ ಪರವಾಗಿರುವ ಪಕ್ಷ. ಕಾಂಗ್ರೆಸ್ ಈ ಮಸೂದೆ ವಿರೋಸುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಕಾಂಗ್ರೆಸ್ ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಗೋಹತ್ಯೆ ನಿಷೇಧ ರೈತರಿಗೆ ಪೂರಕವೇ ಆಗಿದೆ. ರೈತರಿಗೆ ಅನ್ಯಾಯವಾಗದಂತೆ ಕೇಂದ್ರ, ರಾಜ್ಯ ಸರ್ಕಾರಗಳು ನೋಡಿಕೊಳ್ಳಲಿದೆ ಎಂದರು.
ಮೇಯರ್ ದಿವಾಕರ ಪಾಂಡೇಶ್ವರ, ಕಾಪೆರ್ರೇಟರ್ಗಳಾದ ಸುೀರ್ ಶೆಟ್ಟಿ ಕಣ್ಣೂರು, ಶಕಿಲಾ ಕಾವಾ, ಬಿಜೆಪಿ ಪ್ರಮುಖರಾದ ಸತೀಶ್ ಕುಂಪಲ, ವಿಜಯ ಕುಮಾರ್ ಶೆಟ್ಟಿ, ರಾಧಾಕೃಷ್ಣ ಇದ್ದರು.