ಈಗ ಕೋವಿಡ್-19 ಲಸಿಕೆಯನ್ನೂ ಬ್ಲ್ಯಾಕ್‍ಮಾರ್ಕೆಟ್‍ಗೆ ಬಿಡುತ್ತಾ ಚೀನಾ?

ಬೀಜಿಂಗ್: ಬ್ಲ್ಯಾಕ್ ಮಾರ್ಕೆಟ್ , ಅಗ್ಗದ -ಕಳಪೆ ಸರಕುಗಳಿಗೆ ಕುಖ್ಯಾತವಾಗಿರುವ ಕಮ್ಯುನಿಸ್ಟ್ ಚೀನಾ, ತಾನೇ ವಿಶ್ವಕ್ಕೆ ಹರಡಿರುವ ಕೋವಿಡ್-19ಪಿಡುಗಿಗೆ ಲಸಿಕೆ ಒದಗಿಸುವ ನೆವದಲ್ಲಿ ಬ್ಲ್ಯಾಕ್‍ಮಾರ್ಕೆಟ್‍ಗೆ ಕುಮ್ಮಕ್ಕು ನೀಡಲು ಮುಂದಾಗಿದೆಯೇ ಎಂಬ ಪ್ರಶ್ನೆ ಕೇಳಿಬಂದಿದೆ.
ಚೀನಾದ ಚೆಂಗ್ ಹೆಸರಿನ ಉದ್ಯಮಿಯೊಬ್ಬ ಕೋವಿಡ್-19ಕ್ಕೆ ಲಸಿಕೆ ಕಂಡುಕೊಳ್ಳಲು ಯತ್ನಿಸುತ್ತಿದ್ದು, ಉದ್ದೇಶಿತ ಅಮೆರಿಕ ಭೇಟಿಗೆ ಮುನ್ನವೇ ಕೋವಿಡ್-19ಕ್ಕೆ ಲಸಿಕೆ ಪಡೆಯುವುದಕ್ಕಾಗಿ ಚೀನಾ ಸರಕಾರದ ಬೆಂಬಲದೊಂದಿಗೆ ತರಾತುರಿಯಲ್ಲಿ ಯತ್ನಿಸುತ್ತಿರುವುದು ಇಂತಹ ಒಂದು ಅನುಮಾನಕ್ಕೆ ಕಾರಣವಾಗಿದೆ.
ದಕ್ಷಿಣ ಚೀನಾದ ಕಂಪೆನಿ ಸಿನೋಫಾರ್ಮ್‍ನ ಘಟಕವೊಂದಕ್ಕೆ ಚೀನಾ ಸರಕಾರ ಕೋವಿಡ್-19ಲಸಿಕೆ ಪ್ರಯೋಗ ನಡೆಸಲು ಅನುಮತಿ ನೀಡಿದೆ. ಚೆಂಗ್ ಈ ಕಂಪೆನಿಗಾಗಿ ಕೆಲಸ ಮಾಡುತ್ತಿದ್ದಾನೆ.ಇದರಂತೆ , ಚೆಂಗ್ ಚೀನಾದ ಗ್ವಾಂಗ್‍ಡಾಂಗ್ ಪ್ರಾಂತದಲ್ಲಿರುವ ಚೀನೀ ಸರಕಾರ ಬೆಂಬಲಿತ ಫಾರ್ಮಾ ತಯಾರಿಸುತ್ತಿರುವ ಕೋವಿಡ್-19 ಲಸಿಕೆಯನ್ನು 91ಡಾ.ಗೆ ಎರಡು ಡೋಸ್‍ನಂತೆ ವಿತರಿಸುವ ಯೋಜನೆ ರೂಪಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
“ನೀವು ಕೇವಲ ಆಲಿಪೇ (ಚೀನಾದ ಡಿಜಿಟಲ್ ಪೇಮೆಂಟ್ಸ್ ಪ್ಲ್ಯಾಟ್‍ಫಾರ್ಮ್)ಮೂಲಕ ಹಣ ವರ್ಗಾಯಿಸಿದರಾಯಿತು.ಆದರೆ ಆತ ನಿಮಗೆ ವಿವರ ನೀಡಲಾರ. ಯಾಕೆಂದರೆ ಇದು ಬ್ಲ್ಯಾಕ್ ಮಾರ್ಕೆಟ್”ಎಂಬುದಾಗಿ ಚೆಂಗ್ ಸೂಚ್ಯವಾಗಿ ಹೇಳುತ್ತಿರುವುದು ಇಂತಹ ಒಂದು ಅನುಮಾನವನ್ನು ಬಲಪಡಿಸಿದೆ.ಅಲ್ಲದೆ ಚೆಂಗ್ ತನ್ನ ಹೆಸರಿನ ಕೊನೆಯ ಭಾಗದಿಂದ ಮಾತ್ರವೇ ಗುರುತಿಸಿಕೊಂಡು ನಿಜ ನಾಮವನ್ನು ಮರೆಮಾಚುತ್ತಿರುವುದು ಇದಕ್ಕೆ ಇನ್ನಷ್ಟು ಕುಮ್ಮಕ್ಕು ನೀಡಿದೆ.ಚೀನಾದ ಒಂದು ಕಡೆ ಚೀನಾ ಈಗಾಗಲೇ ಸ್ಥಳೀಯ ಲಸಿಕೆ ಅಭಿವೃದ್ಧಿ ಸಂಸ್ಥೆಯೊಂದರ ಉತ್ಪನ್ನವನ್ನು ತುರ್ತು ಬಳಕೆಗೆ ಉಪಯೋಗಿಸಲು ಅನುಮತಿ ನೀಡಿದೆ.ಅಂತಾರಾಷ್ಟ್ರೀಯ ಅಕೃತ ಸಂಸ್ಥೆಗಳ ಯಾವುದೇ ಅನುಮತಿ ಪಡೆದಿರದಿದ್ದರೂ, ತುರ್ತು ಬಳಕೆ ಅವಕಾಶವನ್ನು ಬಳಸಿಕೊಂಡು ಈಗಾಗಲೇ ಸಾವಿರಾರು ಮಂದಿ ಇಂತಹ ಲಸಿಕೆಯನ್ನು ಪಡೆದುಕೊಂಡಿದ್ದಾರೆ.ಆದರೆ ಇದರ ಸುರಕ್ಷತೆ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಜಗತ್ತಿನಾದ್ಯಂತ ಎರಡನೇ ಹಂತದ ಕೋವಿಡ್-19ಅಲೆ ಏಳುತ್ತಿರುವ ಆತಂಕದ ನಡುವೆಯೇ ಅಗತ್ಯ ಔಷಧಗಳ ಪೂರೈಕೆಯಲ್ಲಿ ಕೊರತೆ ಎದುರಾಗುವ ಸಂದರ್ಭದಲ್ಲೇ ಇಂತಹ ಅಕ್ರಮ ಮಾರಾಟ ಹೆಚ್ಚುವ ಆತಂಕವಿದೆ. ಇಂತಹ ವ್ಯವಹಾರದಲ್ಲಿ ಚೀನಾ ನಿಸ್ಸೀಮನಾಗಿರುವುದು ಇದೀಗ ಇಂತಹ ಚರ್ಚೆಗೆ ಕಾರಣವಾಗಿದೆ.ಆದರೆ ಚೀನೀ ಲಸಿಕೆ ತಯಾರಕರು ತಮ್ಮ ಉತ್ಪನ್ನದ ಕುರಿತಂತೆ ಈವರೆಗೂ ಯಾವುದೇ ಅಂಕಿ-ಅಂಶ ವಿವರಗಳನ್ನು ಬಹಿರಂಗಪಡಿಸದೆ ಇದ್ದು, ಇದರಿಂದಾಗಿ ಇಂತಹ ಅಕ್ರಮ ಮಾರುಕಟ್ಟೆಗೆ ಕುಮ್ಮಕ್ಕು ಲಭಿಸುವ ಎಲ್ಲ ಆತಂಕವೂ ಇದೆ ಎಂಬುದಾಗಿ ಲಂಡನ್ ಮೂಲದ ಟ್ರಾನ್ಸ್‍ಫರೆನ್ಸಿ ಇಂಟರ್‍ನ್ಯಾಷನಲ್ ಹೆಲ್ತ್ ಇನ್‍ಷಿಯೇಟಿವ್‍ನ ನಿರ್ದೇಶಕ ರಾಚೆಲ್ ಕೂಪರ್ ಹೇಳುತ್ತಾರೆ.
ಚೀನಾದ ಸಿನೋಫಾರ್ಮ್ ಎರಡು ಕೋವಿಡ್-19ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಅರ್ಜೆಂಟೀನಾದಿಂದ ಈಜಿಪ್ಟ್‍ವರೆಗಿನ ದೇಶಗಳಲ್ಲಿನ 50ಸಾವಿರಕ್ಕೂ ಅಕ ಮಂದಿಯ ಮೇಲೆ ಪ್ರಯೋಗ ನಡೆಸಲಾಗಿದ್ದು, ಯಾವುದೇ ಅಡ್ಡಪರಿಣಾಮದ ವರದಿಗಳು ಬಂದಿಲ್ಲ ಎಂಬುದಾಗಿ ಚೀನಾ ಹೇಳಿಕೊಂಡಿದೆ.ಈ ಲಸಿಕೆಗಳ ಕುರಿತಂತೆ ಮಲೇಶ್ಯಾ, ಇಂಡೋನೇಶ್ಯಾ, ಪಾಕಿಸ್ತಾನ, ಯುಎಇಗಳಂತಹ ಕೆಲವು ದೇಶಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆಯಾದರೂ ಚೀನೀ ಲಸಿಕೆಯ ವಿಶ್ವಾಸಾರ್ಹತೆ ಬಗ್ಗೆ ಎಲ್ಲೆಡೆ ಪ್ರಶ್ನೆಗಳು ವ್ಯಕ್ತವಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ