ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತದ್ದು ಪ್ರಮುಖ ಪಾತ್ರ: ಮುಕೇಶ್ ಅಂಬಾನಿ

ಮುಂಬೈ: ವಿಶ್ವದ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತವೇ ಪ್ರಮುಖ ಪಾತ್ರವಹಿಸುತ್ತದೆ ಎಂಬ ಅಚಲ ವಿಶ್ವಾಸ ನನಗಿದೆ. ಇದಕ್ಕೆ ಪೂರಕವಾಗಿ ಜಿಯೋ ಭಾರತದಲ್ಲಿ ಡಿಜಿಟಲ್ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಛೇರ್ಮನ್ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟರು. ಡಿಜಿಟಲ್ ಟ್ರಾನ್ಸ್ಫಾರ್ಮೇಶನ್ ವಲ್ರ್ಡ್ ಸೀರೀಸ್ 2020 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಂಬಾನಿ, ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಅಗತ್ಯವಾಗಿರುವ ಡಿಜಿಟಲ್ ಕನೆಕ್ಟಿವಿಟಿಯನ್ನು ಜಿಯೋ ಸಮರ್ಪಕವಾಗಿ ಒದಗಿಸುತ್ತಿದೆ ಎಂದರು.
“ಮೊದಲ ಎರಡು ಕೈಗಾರಿಕಾ ಕ್ರಾಂತಿಗಳಲ್ಲಿ ಭಾರತದ ಪಾತ್ರ ಇರಲಿಲ್ಲ. ಅದರ ಪ್ರಭಾವವೂ ಇರಲಿಲ್ಲ. ಮೂರನೇ ಕೈಗಾರಿಕಾ ಕ್ರಾಂತಿಯಲ್ಲಿ ಮಾಹಿತಿ-ತಂತ್ರಜ್ಞಾನ ಪ್ರಾಮುಖ್ಯತೆಗೆ ಬಂತು. ಈ ಪೈಪೋಟಿಯಲ್ಲಿ ಭಾರತ ಇದ್ದಿತಾದರೂ ವಿಶ್ವದ ಇತರ ಮುಂಚೂಣಿ ದೇಶಗಳಿಗಿಂತ ಹಿಂದೆಬಿದ್ದಿತು. ಈಗ ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಅಡಿ ಇಟ್ಟಿದ್ದೇವೆ. ಮುಂಚೂಣಿ ದೇಶಗಳಿಗೆ ಪೈಪೋಟಿ ನೀಡುವುದಷ್ಟೇ ಅಲ್ಲ ತಾನೇ ಜಾಗತಿಕ ನಾಯಕನಾಗುವ ಅವಕಾಶ ಸಿಕ್ಕಿದೆ.
”ಡಿಜಿಟಲ್ ಕನೆಕ್ಟಿವಿಟಿ, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಸ್ಮಾರ್ಟ್ ಡಿವೈಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್, ಬ್ಲಾಕ್ಚೈನ್, ಎಆರ್/ವಿಆರ್, ಜಿನೋಮಿಕ್ಸ್ ಮೊದಲಾದ ಭೌತಿಕ ಮತ್ತು ಡಿಜಿಟಲ್ ಸಮ್ಮಿಳನ ತಂತ್ರಜ್ಞಾನಗಳು ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಅನುವು ಮಾಡಿಕೊಡುತ್ತಿವೆ. ಈ ಕ್ರಾಂತಿಯಲ್ಲಿ ಭಾಗಿಯಾಗಲು ಮೂಲಭೂತವಾಗಿ ಬೇಕಾದ ಮೂರು ಅಗತ್ಯಗಳೆಂದರೆ ಅತಿ ವೇಗದ ಡಿಜಿಟಲ್ ಕನೆಕ್ಟಿವಿಟಿ, ಕಡಿಮೆ ಬೆಲೆಯ ಸ್ಮಾರ್ಟ್ ಡಿವೈಸ್ಗಳು ಮತ್ತು ಪರಿವರ್ತನೀಯ ಡಿಜಿಟಲ್ ಅಪ್ಲಿಕೇಶನ್ ಮತ್ತು ಸೊಲ್ಯೂಷನ್ಗಳು. ಈ ಪ್ರಯಾಣಕ್ಕಾಗಿಯೇ ಜಿಯೋವನ್ನು ಸ್ಥಾಪಿಸಲಾಗಿದೆ” ಎಂದು ಮುಕೇಶ್ ಅಂಬಾನಿ ತಿಳಿಸಿದರು.
“ಜಿಯೋ ಸ್ಥಾಪನೆಗೆ ಮುನ್ನ ಭಾರತ 2ಜಿ ಟೆಕ್ನಾಲಜಿಯಲ್ಲೇ ಸಿಕ್ಕಿಕೊಂಡಿತ್ತು. ಈ ಅವಸ್ಥೆಯಿಂದ ಭಾರತವನ್ನು ಹೊರತಂದು ಡಿಜಿಟಲ್ ಕ್ರಾಂತಿ ರೂಪಿಸುವುದು ಜಿಯೋ ಗುರಿಯಾಗಿತ್ತು. ಅತಿಹೆಚ್ಚು ವೇಗದ, ವಿಶ್ವದರ್ಜೆಯ ಡಿಜಿಟಲ್ ನೆಟ್ವರ್ಕ್ ಅನ್ನು ನಾನು ರೂಪಿಸಿದೆವು. ಜಿಯೋಗಿಂತ ಮುಂಚೆ ಭಾರತದ ಟೆಲಿಕಾಂಗ್ ಉದ್ಯಮವು 2ಜಿ ನೆಟ್ವರ್ಕ್ ಕಟ್ಟಲು 25 ವರ್ಷ ತೆಗೆದುಕೊಂಡಿತು. ಆದರೆ, ಜಿಯೋ ಕೇವಲ 3 ವರ್ಷದಲ್ಲಿ 4ಜಿ ನೆಟ್ವರ್ಕ್ ಕಟ್ಟಿತು. ಹಾಗೆಯೇ, ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆ ಡಾಟಾವನ್ನು ಜನರಿಗೆ ನೀಡಿದೆವು?. ಕಡಿಮೆ ಬೆಲೆಗೆ ಜಿಯೋ ಪೋನ್ ನೀಡಿದೆವು? ಬಿಡುಗಡೆಯಾದ 170 ದಿನಗಳಲ್ಲೇ ಜಿಯೋಗೆ 10 ಕೋಟಿ ಗ್ರಾಹಕರು ಬಂದರು. ಭಾರತದಲ್ಲಿ ಒಂದು ತಿಂಗಳಿಗೆ ಬಳಕೆಯಾಗುತ್ತಿದ್ದ 20 ಕೋಟಿ ಜಿಬಿ ಡಾಟಾ 1200 ಕೋಟಿ ಜಿಬಿಗೆ ಏರಿತು. ಆಗಿನಿಂದಲೂ ಡಾಟಾ ಬಳಕೆ ಏರುಗತಿಯಲ್ಲೇ ಇದೆ? ಡಾಟಾ ಬಳಕೆಯಲ್ಲಿ 155ನೇ ಸ್ಥಾನದಲ್ಲಿದ್ದ ಭಾರತ ಕೇವಲ 4 ವರ್ಷದಲ್ಲೇ ನಂಬರ್ ಒನ್ ಸ್ಥಾನಕ್ಕೇರಿತು. ಸುಧಾರಿತ ತಂತ್ರಜ್ಞಾನವನ್ನ ಭಾರತ ಬೇಗನೇ ಅಳವಡಿಸಿಕೊಳ್ಳುವುದಿಲ್ಲ ಎಂದಿದ್ದ ನಂಬಿಕೆಯನ್ನು ಜಿಯೋ ಸುಳ್ಳಾಗಿಸಿತು. ಈಗ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸ ನನಗೆ ಬಂದಿದೆ” ಎಂದು ಆರ್‍ಐಎಲ್ ಛೇರ್ಮನ್ ತಿಳಿಸಿದರು.
“ಜಿಯೋ ಇದೀಗ ಭಾರತದ 2 ಸಾವಿರ ನಗರ ಮತ್ತು ಪಟ್ಟಣಗಳಲ್ಲಿನ 5 ಕೋಟಿ ಮನೆಗಳಿಗೆ ಆಪ್ಟಿಕ್ ಫೈಬರ್ ನೆಟ್ವರ್ಕ್ ಅಳವಡಿಸುತ್ತಿದೆ? ಇದೇ ವೇಳೆ ದೆಶಾದ್ಯಂತ 5ಜಿ ಸೇವೆಗಳಿಗೆ ಚಾಲನೆ ಕೊಡಲು ಸಿದ್ಧತೆಯಾಗುತ್ತಿದೆ?20 ಸ್ಟಾರ್ಟಪ್ಗಳ ಜೊತೆಗೂಡಿ ಕ್ಲೌಡ್ ಅಂಡ್ ಎಡ್ಜ್ ಕಂಪ್ಯೂಟಿಂಗ್, ಡಾಟಾ ಅಲಾಲಿಟಿಕ್ಸ್, ಎಐ ಮತ್ತು ಮೆಷಿನ್ ಲರ್ನಿಂಗ್, ಬ್ಲಾಕ್ ಚೈನ್ ಮೊದಲಾದ ಕ್ಷೇತ್ರಗಳಲ್ಲಿ ಡಿಜಿಟಲ್ ಸಲ್ಯೂಷನ್ಸ್ ನೀಡುತ್ತಿದ್ದೇವೆ. ಈ ತಂತ್ರಜ್ಞಾನಗಳ ಮೂಲಕ ಟೆಲಿಕಾಂ, ಮಾಧ್ಯಮ, ನವ ವಾಣಿಜ್ಯ, ಹಣಕಾಸು, ಶಿಕ್ಷಣ, ಆರೋಗ್ಯ, ಕೃಷಿ ಮೊದಲಾದ ಬಹು ಕ್ಷೇತ್ರಗಳಲ್ಲಿ ಸಮರ್ಪಕ ಡಿಜಿಟಲ್ ನೆರವು ಒದಗಿಸುತ್ತಿದ್ದೇವೆ. ಇದು ಭಾರತದ ಸಾಮಾಜಿಕ, ಆರ್ಥಿಕ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಉತ್ತೇಜಕವಾಗುವ ಆಶಯ ಇದೆ. ಭಾರತಕ್ಕೆ ಇದು ಆರಂಭ ಮಾತ್ರ. ಭಾರತದಲ್ಲಿ ಈ ಡಿಜಿಟಲ್ ಪರಿಹಾರ ಸಮರ್ಪಕವಾಗಿ ಅಳವಡಿಕೆಯಾದಲ್ಲಿ ವಿಶ್ವದ ಇತರ ಭಾಗಗಳಿಗೂ ನಾವು ಅಡಿ ಇಡುತ್ತೇವೆ.”ನಾವು ಭವಿಷ್ಯ ತಲೆಮಾರಿನ ತಂತ್ರಜ್ಞಾನದ ವ್ಯವಸ್ಥೆಯ ನಿರ್ಮಾಣಕ್ಕೆ ಬಂಡವಾಳ ಹಾಕಬೇಕಿದೆ. ಡಿಜಿಟಲ್ ಫಿಸಿಕಲ್ ಇಕೋಸಿಸ್ಟಂನಲ್ಲಿನ ಕೊರತೆಯನ್ನು ನೀಗಿಸಬೇಕಿದೆ. ಗೆಲುವಿನ ಪಾಲುದಾರಿಕೆಗಳನ್ನ ರಚಿಸಬೇಕಿದೆ. ಆಗಲೇ ಒಂದು ಪರಿಪೂರ್ಣ ಡಿಜಿಟಲ್ ಸೊಸೈಟಿ ಕಟ್ಟಲು ಸಾಧ್ಯ. ಇದೇ ಉದ್ಧೇಶದಿಂದ ಜಿಯೋವನ್ನು ಪ್ರಾರಂಭಿಸಿದ್ದು. ಜಿಯೋ ಒಂದು ವ್ಯವಹಾರವಾಗಿಯಲ್ಲ, ಅದು ಡಿಜಿಟಲ್ ಮೂವ್ಮೆಂಟ್ ಆಗಿ ಜನ್ಮತಳೆದಿದೆ?.ದೊಡ್ಡ ಕನಸು ಕಾಣಲು ಬಯಸುವವರಿಗೆ ಒಂದು ಹೊಸ ಪ್ರಪಂಚವೇ ಗೆಲುವಿಗಾಗಿ ಕಾದಿದೆ ಎಂದು ಹೇಳಬಯಸುತ್ತೇನೆ” ಎಂದು ಆರ್‍ಐಎಲ್ ಎಂಡಿಯೂ ಆಗಿರುವ ಮುಕೇಶ್ ಅಂಬಾನಿ ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ