ಹೊಸ ವರ್ಷಕ್ಕೆ ಬಂಪರ್ ಕೊಡುಗೆ ಜಿಯೋ ದೇಶಿಯ ಕರೆಗಳು ಉಚಿತ

Varta Mitra News

ಮುಂಬೈ : ಹೊಸವರ್ಷದ ಪ್ರಯುಕ್ತ ಜಿಯೋ ಗ್ರಾಹಕರಿಗೆ ಉದ್ಯಮಿ ಮುಕೇಶ್ ಅಂಬಾನಿ ಬಂಪರ್ ಬಹುಮಾನ ನೀಡಿದ್ದು, ಜನವರಿ 1ರಿಂದ ಜಿಯೋ ನೆಟ್ವರ್ಕ್‍ನಿಂದ ಬೇರೆ ಎಲ್ಲ ನೆಟ್ವರ್ಕ್‍ಗಳಿಗೆ ಮಾಡುವ ದೇಶಿಯ ಕರೆಗಳನ್ನು ಸಂಪೂರ್ಣ ಉಚಿತವೆಂದು ಘೋಷಿಸಿದ್ದಾರೆ.
ಟೆಲಿಕಾಂ ನಿಯಂತ್ರಕ ಪ್ರಾಕಾರ (ಟ್ರಾಯ್) ನಿರ್ದೇಶನದಂತೆ 2021 ರ ಜನವರಿ 1 ರಿಂದ
ದೇಶದಲ್ಲಿ ಅಂತರ್ ಸಂಪರ್ಕ ಬಳಕೆಯ ಶುಲ್ಕಗಳು (ಐಯುಸಿ) ಕೊನೆಗೊಳ್ಳುತ್ತದೆ. ಇದರಿಂದ ದೇಶಿಯ ಕರೆ ಶುಲ್ಕಗಳನ್ನು ಶೂನ್ಯಕ್ಕೆ ಹಿಂದಿರುಗಿಸಲು ಜಿಯೋ ಸಜ್ಜಾಗಿದೆ.

ಆರಂಭದಲ್ಲಿ ಉಚಿತ ಕರೆಯ ಸೇವೆಯನ್ನು ನೀಡಿದ ಜಿಯೋ, ಆ ನಂತರ ಟ್ರಾಯ್ ನೀತಿಯಂತೆ ತನ್ನ ಗ್ರಾಹಕರಿಗೆ ಆಫ್‍ನೆಟ್ ಧ್ವನಿ ಕರೆಗಳಿಗೆ ಶುಲ್ಕ ವಿಸುವುದನ್ನು
ಪ್ರಾರಂಭಿಸಿತು. ಆದರೆ, ಜಿಯೋ ತನ್ನ ಬಳಕೆದಾರರಿಗೆ ಐಯುಸಿ ಶುಲ್ಕವನ್ನು
ರದ್ದುಗೊಳಿಸುವ ಸಮಯದವರೆಗೆ ಮಾತ್ರ ಹಣವನ್ನು ಸ್ವೀಕರಿಸುವುದಾಗಿ ಭರವಸೆ ನೀಡಿತ್ತು.
ಇಂದು, ಜಿಯೋ ಆ ಭರವಸೆಯನ್ನು ಪೂರ್ಣಗೊಳಿಸಿದ್ದು, ದೇಶಿಯ ಕರೆಗಳನ್ನು ಉಚಿತಗೊಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ