ಬ್ರಿಟಿಷ್ ಕೊಲಂಬಿಯಾ ಸರ್ಕಾರ 3 ಎನ್‍ಆರ್‍ಐಗಳಿಗೆ ಸ್ಥಾನ

ವಿಕ್ಟೋರಿಯಾ: ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಭಾರತೀಯರಿಗೆ ಉನ್ನತ ಸ್ಥಾನ ದೊರೆಯುತ್ತಿರುವ ಬೆನ್ನಲ್ಲೇ, ಕೆನಡಾದ ಪಶ್ಚಿಮ ಪ್ರಾಂತ್ಯ ಬ್ರಿಟಿಷ್ ಕೊಲಂಬಿಯಾ ಸರ್ಕಾರದಲ್ಲೂ ಮೂವರು ಅನಿವಾಸಿ ಭಾರತೀಯರು ಸ್ಥಾನ ಪಡೆದಿದ್ದಾರೆ. ರವಿ ಕಹ್ಲಾನ್, ನಿಕ್ಕಿ ಶರ್ಮಾ ಹಾಗೂ ಹ್ಯಾರಿಸ್ ಬೇನ್ಸ್ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆದ ಅನಿವಾಸಿ ಭಾರತೀಯರಾಗಿದ್ದಾರೆ.
ರವಿ ಕಹ್ಲಾನ್ ಅವರಿಗೆ ಉದ್ಯೋಗ, ಆರ್ಥಿಕ ಚೇತರಿಕೆ ಹಾಗೂ ನಾವೀನ್ಯದ ಸಚಿವ ಸ್ಥಾನ ನೀಡಲಾಗಿದ್ದು, ಇವರು ಕೊರೋನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಯಲ್ಲಿ ಚೇತರಿಕೆ ತರುವ ಬಗ್ಗೆ ಸರ್ಕಾರಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಇನ್ನು ಹ್ಯಾರಿ ಬೇನ್ಸ್‍ಗೆ ಕಾರ್ಮಿಕ ಸಚಿವ ಸ್ಥಾನ ಹಾಗೂ ನಿಕ್ಕಿ ಶರ್ಮಾ ಅವರನ್ನು ಸಂಸದೀಯ ಕಾರ್ಯದರ್ಶಿಯಾಗಿ ನೇಮಕಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ