![mangalore](http://kannada.vartamitra.com/wp-content/uploads/2020/11/mangalore-677x448.jpg)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಈಗ ಮತ್ತೊಮ್ಮೆ ಉಗ್ರವಾದಿಗಳ ಬೆದರಿಕೆಗೆ ತುತ್ತಾಗಿದೆಯೇ?
ಇಂತಹ ಗಂಭೀರ ಪ್ರಶ್ನೆಯೊಂದು ಈಗ ಮೂಡಿಬಂದಿದೆ.ಪಾಕ್ ಪ್ರಾಯೋಜಕತ್ವದ ಭಯೋತ್ಪಾದಕ ಸಂಘಟನೆ ಲಷ್ಕರ್ -ಇ -ತೊಯ್ಬಾ ಸಂಘಟನೆಯ ಉಲ್ಲೇಖದೊಂದಿಗೆ ಬಹಿರಂಗವಾಗಿಯೇ ಗೋಡೆಬರಹದ ಮೂಲಕ ಬೆದರಿಕೆ ಹಾಕಲಾಗಿದ್ದು, ಇಂತಹ ಒಂದು ಆತಂಕವನ್ನು ಸೃಷ್ಟಿಸಿದೆ.
ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗಳೆತೆ ದೂರದಲ್ಲಿ ಅಪಾರ್ಟ್ಮೆಂಟ್ ಒಂದರ ಕಂಪೌಂಡ್ವಾಲ್ನಲ್ಲಿ ಲಷ್ಟರ್ -ಇ -ತೊಯ್ಬಾ ಸಂಘಟನೆಯನ್ನು ಬೆಂಬಲಿಸಿದ ಬರಹ ಶುಕ್ರವಾರ ಕಂಡುಬಂದಿದೆ. ಇದರ ಸಮೀಪವೇ ಗಣ್ಯರು ತಂಗುವ ಸಕ್ರ್ಯೂಟ್ ಹೌಸ್ ಕೂಡ ಇದೆ.
ಭಯೋತ್ಪಾದನೆ ಬೆಂಬಲಿತ ತೀವ್ರವಾದಿ ಶಕ್ತಿಗಳ ಸ್ಲೀಪರ್ಸೆಲ್ಗಳು ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿವೆ ಎಂಬ ಶಂಕೆಯ ನಡುವೆ ಇದೀಗ ಈ ಬರಹ ಜನತೆಯ ನೆಮ್ಮದಿ ಕೆಡಿಸಿದೆ.
ಏನು ಬರಹ?
ಅಪಾರ್ಟ್ಮೆಂಟ್ ಒಂದರ ಕಂಪೌಂಡ್ವಾಲ್ನಲ್ಲಿ ಕಿಡಿಗೇಡಿಗಳು ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದಿದ್ದಾರೆ. ಕಂಪೌಂಡ್ ನಲ್ಲಿ ಹ್ಯಾಷ್ ಟ್ಯಾಗ್ ಹಾಕಿ `ಲಷ್ಕರ್- ಇ -ತೊಯ್ಬಾ ಜಿಂದಾಬಾದ್’ ಎಂದು ಬರೆಯಲಾಗಿದ್ದು, ಉಗ್ರರನ್ನು ಮಂಗಳೂರಿಗೆ ಕರೆಸುವ ಬೆದರಿಕೆ ಹಾಕಲಾಗಿದೆ. `
ಕಪ್ಪು ಬಣ್ಣದಲ್ಲಿ ಬರೆದಿರುವ ಬರಹದಲ್ಲಿ ಸಂಘಪರಿವಾರಕ್ಕೆ ಬೆದರಿಕೆಯನ್ನೂ ಒಡ್ಡಲಾಗಿದೆ. `ನಿಮ್ಮನ್ನು(ಸಂಘ ಪರಿವಾರ) ನಿಯಂತ್ರಿಸಲು ಲಷ್ಕರ್ ಉಗ್ರರನ್ನು ಆಹ್ವಾನಿಸಬೇಕಾದೀತು ಎಂದು ಆಂಗ್ಲ ಭಾಷೆಯಲ್ಲಿ ಬರೆದು ಬೆದರಿಕೆ ಒಡ್ಡಲಾಗಿದೆ.
ಶುಕ್ರವಾರ ಮುಂಜಾನೆ ಈ ವಿಷಯ ತಿಳಿದು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಈ ಸುದ್ದಿ ಒಬ್ಬರಿಂದ ಒಬ್ಬರಿಗೆ ಹರಡಿತ್ತು. ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ವಿವಾದಾತ್ಮಕ ಬರಹದ ಮೇಲೆ ಪೈಂಟ್ ಬಳಿದು ಜನತೆಯ ಆತಂಕ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ. ಕದ್ರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಸಿ ಕ್ಯಾಮೆರಾ ಪರಿಶೀಲನೆ
ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆ ನಡೆದ ಪರಿಸರದಲ್ಲಿನ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಲಷ್ಕರ್- ಇ- ತೊಯ್ಬಾ ಸಂಘಟನೆ ಬೆಂಬಲಿಸಿ ಬರೆದಿರುವ ಗೋಡೆ ಬರದ ವಿರುದ್ಧ ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಜಾಗರಣ ವೇದಿಕೆ ಮುಂತಾದ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅಲ್ಲದೆ ದೇಶ ವಿರೋಗಳನ್ನು ಬಂಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿದ್ದಲ್ಲದೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿವೆ.