ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನರೆನ್ಸ್ ಮೂಲಕ ಸಂಸತ್ ಸದಸ್ಯರಿಗಾಗಿ ನಿರ್ಮಿಸಲಾಗಿರುವ ಬಹುಮಹಡಿ ವಸತಿಗಳನ್ನು ಉದ್ಘಾಟಿಸಿದ್ದಾರೆ. ಹೊಸದಿಲ್ಲಿಯ ಡಾ. ಬಿ.ಡಿ. ಮಾರ್ಗ್ ರಸ್ತೆಯಲ್ಲಿ ಈ ವಸತಿಗಳಿದ್ದು, 80 ವರ್ಷಕ್ಕಿಂತ ಹಳೆಯ 8 ಹಳೆಯ ಬಂಗಲೆಗಳನ್ನು 76 ಫ್ಲಾಟ್ಗಳಾಗಿ ಅಭಿವೃದ್ಧಿಪಡಿಸಲಾಗಿದೆ.
ಈ ವೇಳೆ ಮಾತನಾಡಿದ ಮೋದಿ, ಹೊಸ ವಸತಿಗಳಲ್ಲಿ ಸಂಸದರು ಸುರಕ್ಷಿತವಾಗಿರಲಿದ್ದಾರೆ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ಸಂಸದರಿಗೆ ಬಹುಮಹಡಿ ವಸತಿ ಕಲ್ಪಿಸುವುದು ದೀರ್ಘಾವ ಯೋಜನೆಯಾಗಿದ್ದು, ಕೊನೆಗೂ ನಮ್ಮ ಆಡಳಿತಾವಯಲ್ಲಿ ಈಡೇರಿದೆ . ಈ ಮೂಲಕ ದಶಕಗಳ ಹಳೆಯ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದೆ ಎಂದು ಹೇಳಿದ್ದಾರೆ.
ದಿಲ್ಲಿಯಲ್ಲಿ ಇಂತಹ ಅನೇಕ ಯೋಜನೆಗಳು ಹಲವು ವರ್ಷಗಳಿಂದ ಪೂರ್ಣವಾಗದೆ ಹಾಗೆ ಉಳಿದಿದ್ದವು.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕದ ಚರ್ಚೆ ಆರಂಭವಾಯಿತು, ಆದರೆ 23 ವರ್ಷಗಳ ನಂತರ ನಮ್ಮ ಸರ್ಕಾರ ಅದನ್ನು ಪೂರ್ಣಗೊಳಿಸಿತು. ಕೇಂದ್ರೀಯ ಮಾಹಿತಿ ಆಯುಕ್ತರ ಕಚೇರಿಯ ನೂತನ ಕಟ್ಟಡ, ದೇಶಕ್ಕಾಗಿ ಜೀವತೆತ್ತ ವೀರ ಯೋಧರಿಗಾಗಿ ಯುದ್ಧ ಸ್ಮಾರಕ ಮತ್ತು ರಾಷ್ಟ್ರೀಯ ಪೊಲೀಸ್ ಸ್ಮಾರಕ ಬಹುಕಾಲದಿಂದ ನನೆಗುದಿಗೆ ಬಿದ್ದಿತ್ತು. ಆದರೆ ಇವೆಲ್ಲಾ ಪೂರ್ಣಗೊಂಡಿದ್ದು ಬಿಜೆಪಿ ಆಡಳಿತದಲ್ಲಿ ಎಂದಿದ್ದಾರೆ.
ಇನ್ನು ಕೊರೋನಾ ಬಿಕ್ಕಟ್ಟಿನಲ್ಲೂ ಸಂಸತ್ನ ಉತ್ತಮ ಫಲಪ್ರದತೆ ದಾಖಲಾಗಿರುವುದು ಸಂತಸವುಂಟುಮಾಡಿದೆ ಎಂದು ಮೋದಿ ಮೆಚ್ಚುಗೆ ಸೂಚಿಸಿದರು.