ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಪೊಲೀಸ್ ಕಾಯ್ದೆ ಜಾರಿ ಇಲ್ಲ ಜನಾಭಿಪ್ರಾಯಕ್ಕೆ ಮಣಿದ ಕೇರಳ ಸರ್ಕಾರ

ತಿರುವನಂತಪುರಂ: ಜನರ ವಾಕ್ ಸ್ವಾತಂತ್ರ್ಯಕ್ಕೆ ಹತ್ತಿಕ್ಕಲು ಮುಂದಾಗಿದ್ದ ಕೇರಳ ಸರ್ಕಾರವು ಈಗ ಜನರ ಒತ್ತಾಯಕ್ಕೆ ಮಣಿದು ವಿವಾದಾತ್ಮಕ ಪೊಲೀಸ್ ಕಾಯ್ದೆ ಸುಗ್ರೀವಾಜ್ಞೆಗೆ ತಡೆ ನೀಡಲು ತೀರ್ಮಾನಿಸಿದೆ.

ಸದ್ಯಕ್ಕೆ 118 ಎ ಕಾಯ್ದೆ ಜಾರಿಗೆ ತರದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ವಿಧಾನಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವ್ಯಕ್ತಿ, ಸರ್ಕಾರದ ವಿರುದ್ಧ ಟೀಕಿಸಿದರೆ, ನಿಂದನಾತ್ಮಕ ಪೊಸ್ಟ್ ಮಾಡಿದರೆ, ಸುದ್ದಿ ಪ್ರಕಟ ಅಥವಾ ಪ್ರಸಾರ ಮಾಡಿದರೆ 5 ವರ್ಷ ಜೈಲು ಹಾಗೂ 10 ಸಾವಿರ ರೂ.ದಂಡ ವಿಸಲು ಸರ್ಕಾರ ತೀರ್ಮಾನಿಸಿತ್ತು.

ಆದರೆ ಇದಕ್ಕೆ ಬಿಜೆಪಿ, ಕಾಂಗ್ರೆಸ್, ಮಾಧ್ಯಮದವರು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಜನ ತೀವ್ರವಾಗಿ ವಿರೋಸಿದ್ದಕ್ಕೆ ಮಣಿದ ಕಮ್ಯುನಿಸ್ಟ್ ಸರ್ಕಾರವು ಎರಡೇ ದಿನದಲ್ಲಿ ನಿರ್ಧಾರ ಬದಲಾಯಿಸಿದೆ.
ಸುಗ್ರೀವಾಜ್ಞೆ ಜಾರಿಗೊಳಿಸುವುದರಿಂದ ಜನರಿಗೆ ಕಾನೂನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಅಲ್ಲದೆ, ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಹಲವು ಕಾನೂನು ತಜ್ಞರು ಸಹ ಸರ್ಕಾರದ ನಿರ್ಣಯದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಳೆದ ಶನಿವಾರವಷ್ಟೇ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ