ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಇಕ್ಬಾಲ್ ಮಿರ್ಚಿ ತನ್ನದೆಂದು ಘೋಷಿಸಿಕೊಂಡಿದ್ದ 500 ಕೋಟಿ ರೂ. ಮೌಲ್ಯದ 3 ಕಟ್ಟಡಗಳನ್ನು ಜಾರಿ ನಿರ್ದೇಶನಾಲಯವು (ಇಡಿ) ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ನಿಯಂತ್ರಣಕಾರರ ಕಾಯ್ದೆ (ಎಸ್ಎಎಫ್ಇಎಂಎ) ಅನ್ವಯ ಮುಟ್ಟುಗೋಲು ಹಾಕಿಕೊಂಡಿದೆ.
ಕಟ್ಟಡಗಳ ಒಡೆತನದ ಬಗ್ಗೆ ಇಕ್ಬಾಲ್ ಸುಳ್ಳು ಹೇಳಿದ್ದ ಹಿನ್ನೆಲೆ, ಕಟ್ಟಡಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಸರ್ ಮೊಹಮ್ಮದ್ ಯುಸುಫ್ ಟ್ರಸ್ಟ್ ಜತೆಸೇರಿ ಕಟ್ಟಡಗಳ ಒಡೆತನ ಹೊಂದಿರುವುದಾಗಿ ಇಕ್ಬಾಲ್ ಮಿರ್ಚಿ ಎಸ್ಎಎಫ್ಇಎಂಎ ಅಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದನು. ಆದರೆ ಈ ಕಟ್ಟಡಗಳ ಖರೀದಿಸಲು ಮಾಡಲಾಗಿರುವ ವ್ಯವಹಾರವು ನಕಲಿ ಎಂದು ಬಯಲಾಗಿದ್ದು, ಈ ಆಧಾರದ ಮೇಲೆ ಮುಂಬೈನಲ್ಲಿರುವ ಈ ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇಕ್ಬಾಲ್ ಕಟ್ಟಡದ ಒಡೆತನ ಹೊಂದಿದ್ದ ಎಂಬುದನ್ನು ಸಾಬೀತು ಪಡಿಸಲು ಕಟ್ಟಡ ಖರೀದಿಸಿದ ರಶೀದಿಗಳನ್ನು, ಬ್ಯಾಂಕ್ ಪಾಸ್ಬುಕ್ ನಕಲನ್ನು ಯುಸುಫ್ ಟ್ರಸ್ಟ್ ಸಲ್ಲಿಸಿತ್ತು. ಆದರೆ ಈ ದಾಖಲೆಗಳೇ ನಕಲಿ ಎಂದು ಇಡಿ ಬಹಿರಂಗಗೊಳಿಸಿದೆ. ಜತೆಗೆ ಕಟ್ಟಡ ಖರೀದಿಸಲು ಇಕ್ಬಾಲ್ ಪೂರ್ಣ ಪಾವತಿ ಮಾಡಿರಲಿಲ್ಲ, ಅಕ್ರಮವಾಗಿ ಒಡೆತನ ಪಡೆದಿದ್ದನು ಎಂದು ಇಡಿ ಹೇಳಿದೆ. ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಇಕ್ಬಾಲ್ ಮಿರ್ಚಿ ತನ್ನದೆಂದು ಘೋಷಿಸಿಕೊಂಡಿದ್ದ 500 ಕೋಟಿ ರೂ. ಮೌಲ್ಯದ 3 ಕಟ್ಟಡಗಳನ್ನು ಜಾರಿ ನಿರ್ದೇಶನಾಲಯವು (ಇಡಿ) ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ನಿಯಂತ್ರಣಕಾರರ ಕಾಯ್ದೆ (ಎಸ್ಎಎಫ್ಇಎಂಎ) ಅನ್ವಯ ಮುಟ್ಟುಗೋಲು ಹಾಕಿಕೊಂಡಿದೆ.
ಕಟ್ಟಡಗಳ ಒಡೆತನದ ಬಗ್ಗೆ ಇಕ್ಬಾಲ್ ಸುಳ್ಳು ಹೇಳಿದ್ದ ಹಿನ್ನೆಲೆ, ಕಟ್ಟಡಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಸರ್ ಮೊಹಮ್ಮದ್ ಯುಸುಫ್ ಟ್ರಸ್ಟ್ ಜತೆಸೇರಿ ಕಟ್ಟಡಗಳ ಒಡೆತನ ಹೊಂದಿರುವುದಾಗಿ ಇಕ್ಬಾಲ್ ಮಿರ್ಚಿ ಎಸ್ಎಎಫ್ಇಎಂಎ ಅಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದನು. ಆದರೆ ಈ ಕಟ್ಟಡಗಳ ಖರೀದಿಸಲು ಮಾಡಲಾಗಿರುವ ವ್ಯವಹಾರವು ನಕಲಿ ಎಂದು ಬಯಲಾಗಿದ್ದು, ಈ ಆಧಾರದ ಮೇಲೆ ಮುಂಬೈನಲ್ಲಿರುವ ಈ ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇಕ್ಬಾಲ್ ಕಟ್ಟಡದ ಒಡೆತನ ಹೊಂದಿದ್ದ ಎಂಬುದನ್ನು ಸಾಬೀತು ಪಡಿಸಲು ಕಟ್ಟಡ ಖರೀದಿಸಿದ ರಶೀದಿಗಳನ್ನು, ಬ್ಯಾಂಕ್ ಪಾಸ್ಬುಕ್ ನಕಲನ್ನು ಯುಸುಫ್ ಟ್ರಸ್ಟ್ ಸಲ್ಲಿಸಿತ್ತು. ಆದರೆ ಈ ದಾಖಲೆಗಳೇ ನಕಲಿ ಎಂದು ಇಡಿ ಬಹಿರಂಗಗೊಳಿಸಿದೆ. ಜತೆಗೆ ಕಟ್ಟಡ ಖರೀದಿಸಲು ಇಕ್ಬಾಲ್ ಪೂರ್ಣ ಪಾವತಿ ಮಾಡಿರಲಿಲ್ಲ, ಅಕ್ರಮವಾಗಿ ಒಡೆತನ ಪಡೆದಿದ್ದನು ಎಂದು ಇಡಿ ಹೇಳಿದೆ.