ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಆಯುರ್ವೇದ ದಿನದ ಹಿನ್ನೆಲೆಯಲ್ಲಿ ಶುಕ್ರವಾರ ಗುಜರಾತ್ನ ಜಾಮ್ನಗರದಲ್ಲಿ ಆಯುರ್ವೇದ ಬೋಧನಾ ಮತ್ತು ಸಂಶೋಧನಾ ಸಂಸ್ಥೆ (ಐಟಿಆರ್ಎ) ಮತ್ತು ರಾಜಸ್ಥಾನದ ಜೈಪುರದ ರಾಷ್ಟ್ರೀಯ ಆಯುರ್ವೇದ ಸಂಸ್ಥೆ (ಎನ್ಐಎ) ಗಳನ್ನು ವೀಡಿಯೋ ಕಾನರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಈ ಸಂಸ್ಥೆಗಳು 21 ನೇ ಶತಮಾನದಲ್ಲಿ ಆಯುರ್ವೇದದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ನಾಯಕತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.
ಧನ್ವಂತರಿ ಜಯಂತಿಯಂದು 2016ರಿಂದ ಪ್ರತಿ ವರ್ಷ ಆಯುರ್ವೇದ ದಿನ ಆಚರಿಸಲಾಗುತ್ತಿದೆ. ಈ ವರ್ಷ ಅದು ನವೆಂಬರ್ 13, 2020 ರಂದು ಬರುತ್ತದೆ. ಆಯುರ್ವೇದ ದಿನವು ಒಂದು ಹಬ್ಬ ಅಥವಾ ಆಚರಣೆಗಿಂತ ವೃತ್ತಿಗೆ ಮತ್ತು ಸಮಾಜಕ್ಕೆ ಮರು ಸಮರ್ಪಣೆಯ ಸಂದರ್ಭವಾಗಿದೆ. ಕೊರೋನಾ ನಿರ್ವಹಣೆಯಲ್ಲಿ ಆಯುರ್ವೇದದ ಪಾತ್ರವು ಈ ವರ್ಷದ ಆಯುರ್ವೇದ ದಿನಾಚರಣೆಯ ಕೇಂದ್ರಬಿಂದುವಾಗಿದೆ.
ಜಾಮ್ನಗರದ ಐಟಿಆರ್ಎನ್ನು ರಾಷ್ಟ್ರೀಯ ಪ್ರಾಮುಖ್ಯ ಸಂಸ್ಥೆಯಾಗಿ ರಾಷ್ಟ್ರಕ್ಕೆ ಸಮರ್ಪಿಸುತ್ತಿರುವುದು ಮತ್ತು ಜೈಪುರದ ಎನ್ಐಎಯನ್ನು ಡೀಮ್ಡ್ ವಿಶ್ವವಿದ್ಯಾಲಯವೆಂದು ಪರಿಗಣಿಸಲ್ಪಟ್ಟಿರುವುದು ಆಯುರ್ವೇದ ಶಿಕ್ಷಣದ ಆಧುನೀಕರಣದಲ್ಲಿ ಮಾತ್ರವಲ್ಲ, ಸಾಂಪ್ರದಾಯಿಕ ಔಷಧದ ವಿಕಸನದಲ್ಲಿಯೂ ಒಂದು ಐತಿಹಾಸಿಕ ಹೆಜ್ಜೆಯಾಗಿದೆ.
ಇದು ಈ ಸಂಸ್ಥೆಗಳಿಗೆ ಆಯುರ್ವೇದ ಶಿಕ್ಷಣದ ಗುಣಮಟ್ಟ ಸುಧಾರಿಸಲು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬೇಡಿಕೆಗೆ ಅನುಗುಣವಾಗಿ ವಿವಿಧ ಕೋರ್ಸ್ ರೂಪಿಸಲು ಮತ್ತು ಆಧುನಿಕ ಸಂಶೋಧನೆಯಲ್ಲಿ ಉತ್ತಮ ಸಾಧನೆ ಮಾಡಲು ಹೆಚ್ಚು ಹೆಚ್ಚು ಸಾಕ್ಷ್ಯಗಳನ್ನು ಸೃಷ್ಟಿಸಲು ಸ್ವಾಯತ್ತತೆ ಒದಗಿಸುತ್ತದೆ.