ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, 500 ಹಾಗೂ 1,000 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸುವ ದಿಟ್ಟ ನಿರ್ಧಾರ ಕೈಗೊಂಡು ನಾಲ್ಕು ವರ್ಷ ಸಂಪೂರ್ಣಗೊಂಡಿದ್ದು, ಈ ನಿರ್ಣಯ ಪಾರದರ್ಶಕತೆಗೆ ಉತ್ತೇಜನ ನೀಡಿದೆ ಎಂದು ಮೋದಿ ಶ್ಲಾಘಿಸಿದ್ದಾರೆ.
2016ರ ನವೆಂಬರ್ 8ರಂದು ಪ್ರಧಾನಿ ನೋಟುಗಳ ಅಮಾನ್ಯೀಕರಣ ಘೋಷಿಸಿದ್ದರು.
ಈ ಹಿನ್ನೆಲೆ ಭಾನುವಾರ ಪ್ರಧಾನಿ ಟ್ವೀಟ್ ಮಾಡಿ, ಕಪ್ಪುಹಣದ ಕಡಿವಾಡಣಕ್ಕೆ, ತೆರಿಗೆ ಅನುಸರಣೆÉ-ಸರಿಯಾದ ಪಾವತಿಗೆ ಮತ್ತು ಪಾರದರ್ಶಕತೆಗೆ ಅಂದಿನ ನಿರ್ಧಾರ ಉತ್ತೇಜನ ನೀಡಿದೆ. ಇದರ ಫಲಿತಾಂಶಗಳು ದೇಶದ ಪ್ರಗತಿಗೆ ಪ್ರಯೋಜನಕಾರಿಯಾಗಿದೆ ಎಂದಿದ್ದಾರೆ.
ಅಲ್ಲದೆ, ಟ್ವೀಟ್ ನೊಂದಿಗೆ ಗ್ರಾಫಿಕ್ಚಿತ್ರವೊಂದನ್ನು ಅವರು ಹಂಚಿಕೊಂಡಿದ್ದು, ಉತ್ತಮ ತೆರಿಗೆ ಅನುಸರಣೆಯೊಂದಿಗೆ ಭಾರತ, ಕಡಿಮೆ ನಗದು ಆಧಾರಿತ ಆರ್ಥಿಕತೆಯಾಗಿದೆ ಎಂದು ಹೇಳಿದ್ದಾರೆ.