ಕೊಟ್ಟ ಮಾತು ತಪ್ಪಿದ ಕಾಂಗ್ರೆಸ್ ಮುಳುಗುವ ಹಡಗು: ಕಟೀಲು ಟೀಕೆ ಬಿಜೆಪಿ ಆಡಳಿತದ ಬಗ್ಗೆ ಜನರಲ್ಲಿ ಹೆಚ್ಚು ವಿಶ್ವಾಸ

The flags are a lotus

ತುಮಕೂರು: ಕಾಂಗ್ರೆಸ್ ಇಂದು ಮುಳುಗುವ ಹಡಗಾಗಿದೆ. ಆದರೆ, ಭಾರತೀಯ ಜನತಾ ಪಾರ್ಟಿ ದೇಶದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ಓಡುವ ಹಡಗಾಗಿದೆ. ಜನತೆಗೆ ಬಿಜೆಪಿ ಮೇಲೆ ಹೆಚ್ಚು ವಿಶ್ವಾಸ ಮೂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾನುವಾರ ವಿಶ್ಲೇಷಿಸಿದರು.
ನಗರದ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಹತ್ತು ಜಿಲ್ಲೆಗಳ ಜಿಲ್ಲಾ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗ ತರಬೇತಿ ಶಿಬಿರವನ್ನು ತೆಂಗಿನ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಅಕಾರ ಪಡೆಯಲು ದೇಶದ ಜನರಿಗೆ ನೀಡುವ ಮಾತನ್ನು ಅಕಾರ ದೊರೆತ ನಂತರ ಮರೆಯುವುದರ ಜತೆಗೆ ಕಾರ್ಯಕರ್ತರನ್ನು ಬೆಳೆಸುವಲ್ಲೂ ಎಡವಿತು. ಹಾಗಾಗಿ ಇಂದು ಅಕಾರ ಕಳೆದುಕೊಂಡು ಮುಳುಗುವ ಹಡಗಾಗಿದೆ ಎಂದು ಟೀಕಿಸಿದರು.
ಕಾರ್ಯಕರ್ತರ ಜತೆಯಲ್ಲಿದೆ ಬಿಜೆಪಿ:
ಭಾರತೀಯ ಜನತಾ ಪಾರ್ಟಿ ಅಕಾರಕ್ಕೆ ಬರುವ ಮುನ್ನ ದೇಶದ ಜನತೆಗೆ ಕೊಟ್ಟಿರುವ ವಿಚಾರಧಾರೆಗಳಿಗೂ ಬದ್ಧವಾಗಿದೆ. ವ್ಯಕ್ತಿಗಳ ನಿರ್ಮಾಣಕ್ಕೂ ಬದ್ಧರಾಗಿ ಕಾರ್ಯಕರ್ತರ ಜತೆಯಲ್ಲೂ ಕೆಲಸ ಮಾಡಿದ್ದರಿಂದ ದೇಶ ಮತ್ತು ರಾಜ್ಯದಲ್ಲಿ ಅಕಾರದಲ್ಲಿದ್ದೇವೆ ಎಂದರು.
ಬಿಜೆಪಿ ಮೇಲೆ ಜನತೆಗೆ ಹೆಚ್ಚು ವಿಶ್ವಾಸ:
ಚುನಾವಣಾ ಪೂರ್ವದಲ್ಲಿ ನೀಡಿದ ಮಾತನ್ನು ಅನುಷ್ಠಾನಗೊಳಿಸಿದ್ದರಿಂದ ಜನರಿಗೆ ಬಿಜೆಪಿ ಬಗ್ಗೆ ವಿಶ್ವಾಸ ಜಾಸ್ತಿಯಾಯಿತು. ಹಾಗಾಗಿ 400 ಸ್ಥಾನಗಳಲ್ಲಿದ್ದ ಕಾಂಗ್ರೆಸ್ 40 ಸ್ಥಾನಕ್ಕಿಳಿಯಿತು. ಎರಡು ಸ್ಥಾನಗಳಲ್ಲಿದ್ದ ಬಿಜೆಪಿ 300ಕ್ಕಿಂತ ಹೆಚ್ಚು ಲೋಕಸಭೆಯಲ್ಲಿ ಸ್ಥಾನ ಪಡೆದು, 20ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಕಾರ ಪಡೆಯಲು ಸಾಧ್ಯವಾಯಿತು ಎಂದರು.
ಭಾರತ ಮುಕ್ತ ಕಾಂಗ್ರೆಸ್:
ಕಾಂಗ್ರೆಸ್ ತನ್ನ ಮಾತಿನಲ್ಲಿ, ಕಾರ್ಯಶೈಲಿಯಲ್ಲಿ ದಿಕ್ಕು ತಪ್ಪಿದ್ದರಿಂದ ಇಂದು ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದರು.
ಜಗತ್ತಿನಲ್ಲಿ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರ ಚುನಾವಣೆಯಲ್ಲಿ ನಮಗೆ ಅಕಾರ ಕೊಟ್ಟರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಅಮೆರಿಕದಲ್ಲಿ ಮಾಡುತ್ತೇವೆ ಎಂದು ಹೇಳುವ ಹೆಮ್ಮೆಯ ಪರಿಸ್ಥಿತಿ ಇಂದು ನಮ್ಮ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ