ಹೊಸದಿಲ್ಲಿ: ಕೊರೋನಾ ಲಸಿಕೆಗಳ ವಿತರಣೆಗಾಗಿ ರಾಷ್ಟ್ರಗಳಿಗೆ ಅಗತ್ಯವಿರುವ ಶೈತ್ಯಾಗಾರ ಸಾಮಥ್ರ್ಯವನ್ನು ಹೆಚ್ಚಿಸುವುದಕ್ಕೆ ನೆರವು ನೀಡಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ ಶುಕ್ರವಾರ ತಿಳಿಸಿದ್ದಾರೆ.
ಕೊರೋನಾ ಬಿಕ್ಕಟ್ಟಿನ ವಿರುದ್ಧದ ಹೋರಾಟದಲ್ಲಿ ಜಗತ್ತಿಗೆ ಸಹಾಯ ನೀಡುವುದಕ್ಕಾಗಿ ಭಾರತ ತನ್ನ ಲಸಿಕೆ ಉತ್ಪಾದನಾ ಸಾಮಥ್ಯವನ್ನು ಬಳಸಲಿದೆ ಎಂದು ಭಾರತದ ಕೊರೋನಾ ಪ್ರತಿಕ್ರಿಯೆ ಕುರಿತು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಗಳಿಗೆ ಶ್ರಿಂಗ್ಲಾ ಹೇಳಿದ್ದಾರೆ.
ಲಸಿಕೆ ಸರಬರಾಜು ಸ್ವೀಕಾರಕ್ಕಾಗಿ ಹಲವು ರಾಷ್ಟ್ರಗಳು ನಮ್ಮನ್ನು ಸಂಪರ್ಕಿಸುತ್ತಿವೆ. ಈ ಸಾಂಕ್ರಾಮಿಕ ಬಿಕ್ಕಟ್ಟಿನಲ್ಲಿ ಎಲ್ಲರಿಗೂ ಸಹಾಯ ಮಾಡಲು ನಾವು ಲಸಿಕೆ ಉತ್ಪಾದನೆ ಮತ್ತು ವಿತರಣಾ ಸಾಮಥ್ರ್ಯಕ್ಕೆ ಬದ್ಧವಾಗಿರುವುದಾಗಿ ನಮ್ಮ ಪ್ರಧಾನಿ ಅವರ ಬದ್ಧತೆಯನ್ನು ಪುನರುಚ್ಚರಿಸುತ್ತೇನೆ ಎಂದಿದ್ದಾರೆ.
ಈ ದಿಸೆಯಲ್ಲಿ ಮೊದಲ ಹೆಜ್ಜೆಯಾಗಿ ಕೇಂದ್ರವು ರಾಯಬಾರಿಗಳ ನಿಯೋಗವು ಪುಣೆಯಲ್ಲಿ ಲಸಿಕೆ ಮತ್ತು ರೋಗನಿರ್ಣಯ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಈ ವೇಳೆ ನಿಯೋಗಕ್ಕೆ ಲಸಿಕೆ ಅಭಿವೃದ್ಧಿಯಲ್ಲಿ ಮತ್ತು ಪ್ರಯೋಗ ಪ್ರಕ್ರಿಯೆಯಲ್ಲಿ ಭಾರತದ ದೃಢ ಮತ್ತು ಸ್ಥಿತಿಸ್ಥಾಪಕತ್ವ ಪ್ರಗತಿ ಗೋಚರಿಸಲಿದೆ ಎಂದು ಶ್ರಿಂಗ್ಲಾ ತಿಳಿಸಿದ್ದಾರೆ.