ಬ್ರಿಟನ್ : ಮತ್ತೆ ಕೋವಿಡ್-19 ಸೋಂಕು ತೀವ್ರ ಹೆಚ್ಚಳ , ಲಾಕ್‍ಡೌನ್ ಘೋಷಣೆ

ಲಂಡನ್: ಬ್ರಿಟನ್‍ನಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಲಾರಂಭಿಸಿದ್ದು, ಇದು ಎರಡನೇ ಹಂತದ ಅಲೆಯೆಂದು ವಿಶ್ಲೇಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಬ್ರಿಟನ್ ಸರಕಾರ ಮತ್ತೆ ದೇಶದಲ್ಲಿ ಲಾಕ್ ಡೌನ್ ಘೋಷಿಸಿದೆ.
ಗುರುವಾರದಿಂದ (ಇಂದಿನಿಂದ) ಜಾರಿಯಾಗುತ್ತಿರುವ ಲಾಕ್‍ಡೌನ್ ನಾಲ್ಕು ವಾರಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಕೋವಿಡ್-19ಪ್ರಕರಣಗಳ ಸಂಖ್ಯೆ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ, ಸೋಂಕು ಪ್ರಸರಣ ತಡೆಯಲು ಅನ್ಯ ಮಾರ್ಗವಿಲ್ಲದೆ ಲಾಕ್‍ಡೌನ್ ವಿಸ್ತರಿಸುತ್ತಿದ್ದೇವೆ. ಇದಕ್ಕಿಂತ ಹೆಚ್ಚಾಗಿ , ಕೊರೋನಾ ಪಿಡುಗಿನ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂಬುದಾಗಿ ಬ್ರಿಟನ್ ವೈದ್ಯಕೀಯ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಈ ತೀರ್ಮಾನವನ್ನು ನಾವು ಕೈಗೊಂಡಿರುವುದಾಗಿಯೂ ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ