ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯಾತ್ರಿಕರಿಗೆ ವಿತರಣೆ ಶಬರಿಮಲೆಯಲ್ಲಿ ಔಷೀಯ ನೀರು

ತಿರುವನಂತಪುರಂ: ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಭಕ್ತಾದಿಗಳಿಗೆ ಔಷಯ ಗುಣಗಳುಳ್ಳ ಕುಡಿಯುವ ನೀರನ್ನು ಈ ಬಾರಿ ಸ್ಟೀಲ್ ಬಾಟಲ್‍ಗಳಲ್ಲಿ ವಿತರಿಸಲಾಗುತ್ತಿದೆ.
ಸೋಂಕು ಹರಡುವಿಕೆ ತಡೆಯಲು ಬೆಟ್ಟ ಹತ್ತಿ ಬರುವ ಭಕ್ತಾದಿಗಳಿಗೆ ಔಷಯ ನೀರನ್ನು ಸ್ಟೀಲ್ ಬಾಟಲ್‍ಗಳಲ್ಲಿ ವಿತರಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ.
ಭಕ್ತಾದಿಗಳು ಮೊದಲು 200 ರೂ. ಠೇವಣಿ ಇಟ್ಟು ಸ್ಟೀಲ್ ಬಾಟಲ್ ಖರೀದಿಸಬಹುದು. ತದನಂತರ ದೇಗುಲದ ಕೌಂಟರ್‍ನಲ್ಲಿ ಬಾಟಲ್ ಹಿಂದಿರುಗಿಸುವ ಮೂಲಕ ಹಣವನ್ನು ವಾಪಸ್ ಪಡೆಯಬಹುದು ಎಂದು ಮಂಡಳಿ ತಿಳಿಸಿದೆ.
ಅಲ್ಲದೇ ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಬೆಟ್ಟ ಹತ್ತಿ ಬರುವ ಮಾರ್ಗಗಳಾದ ಪಂಬಾ, ಚಾರಲಮೇಡು, ಜ್ಯೋತಿನಗರ ಹಾಗೂ ಮಲ್ಲಿಕಪ್ಪುರಂನಲ್ಲಿ ಕಾಗದದ ಲೋಟಗಳಲ್ಲೂ ಔಷಯ ನೀರು ವಿತರಿಸಲಾಗುತ್ತದೆ.
ಪ್ರತಿ ಬಾರಿಯ ಯಾತ್ರೆಯಲ್ಲೂ ಶಬರಿಮಲೆಯಲ್ಲಿ ವಿಶೇಷವಾಗಿ ಔಷಯ ನೀರು ವಿತರಿಸಲಾಗುತ್ತದೆ. ಒಣ ಶುಂಠಿ, ಲಾವಂಚ ಬೇರು ಹಾಗೂ ಸಪ್ಪಂಗ ಬಳಸಿ ಈ ನೀರನ್ನು ತಯಾರಿಸಲಾಗುತ್ತದೆ.
ಇನ್ನು ಭಕ್ತಾದಿಗಳು ಬಳಸಿ, ಬಿಸಾಡುವ ಕಾಗದದ ಲೋಟಗಳನ್ನು ಪರಿಸರ ಸ್ನೇಹಿ ವಿಧಾನದಲ್ಲಿ ವಿಲೇವಾರಿ ಮಾಡಲಾಗುವುದು. ಈ ಔಷಯ ನೀರನ್ನು, ದೇಗುಲದಲ್ಲೇ ತಯಾರಿಸಲಾಗುತ್ತಿದ್ದು, ಸಿಬ್ಬಂದಿ ಮಾಸ್ಕ್, ಮುಖಗವಸು ಹಾಗೂ ಕೈಗವಸುಗಳನ್ನು ಕಡ್ಡಾಯವಾಗಿ ಹಾಕಿಕೊಂಡಿರುತ್ತಾರೆ ಎಂದು ಮಂಡಳಿ ತಿಳಿಸಿದೆ. ನ.16ರಿಂದ ಮಂಡಳ ಮಕರವಿಲ್ಲಕ್ಕು ತೀರ್ಥಯಾತ್ರೆ ಆರಂಭವಾಗಿದ್ದು, ಕೊರೋನಾ ಕಟ್ಟುನಿಟ್ಟಿನ ನಿಮಯಗಳ ಮಧ್ಯೆಯೇ ಸೀಮಿತ ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ಪ್ರವೇಶ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ